»   » ಸಲ್ಲುಗೆ 5 ವರ್ಷ ಜೈಲು: ನಿರ್ಮಾಪಕರಿಗೆ ಎಷ್ಟು ನಷ್ಟ.?

ಸಲ್ಲುಗೆ 5 ವರ್ಷ ಜೈಲು: ನಿರ್ಮಾಪಕರಿಗೆ ಎಷ್ಟು ನಷ್ಟ.?

Posted By:
Subscribe to Filmibeat Kannada
ಸಲ್ಮಾನ್ ಜೈಲು ಪಾಲಾದ್ರೆ, ನಿರ್ಮಾಪಕರಿಗೆ ಎಷ್ಟು ಕೋಟಿ ನಷ್ಟವಾಗುತ್ತೆ.? | Filmibeat Kannada

1998ರಲ್ಲಿ ನಡೆದ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಪ್ರಮುಖ ಆರೋಪಿ, ಬಾಲಿವುಡ್ ನಟ ಸಲ್ಮಾನ್ ಖಾನ್ ದೋಷಿ ಎಂದು ಜೋಧಪುರ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣದ ಉಳಿದ ಆರೋಪಿಗಳಾದ ಸೈಫ್ ಅಲಿಖಾನ್, ಸೊನಾಲಿ ಬೇಂದ್ರೆ, ನೀಲಮ್ ಮತ್ತು ಟಬು ಅವರನ್ನು ಖುಲಾಸೆಗೊಳಿಸಲಾಗಿದೆ.

ಇದೀಗ, ಸಲ್ಮಾನ್ ಖಾನ್ ಗೆ ಶಿಕ್ಷೆಯ ಪ್ರಮಾಣವನ್ನ ಈಗ ಪ್ರಕಟಿಸಿದ್ದು, 5 ವರ್ಷ ಜೈಲು ಶಿಕ್ಷೆಯಾಗಿದೆ. ಹೀಗಾಗಿ, ಬಾಲಿವುಡ್ ಬ್ಯಾಡ್ ಬಾಯ್ ಸಲ್ಲುವನ್ನ ನಂಬಿದ್ದ ನಿರ್ಮಾಪಕರ ಗತಿಯೇನು ಎಂಬುದು ಆತಂಕ ಸೃಷ್ಟಿಸಿದೆ.

ಕೃಷ್ಣಮೃಗ ಬೇಟೆ ಪ್ರಕರಣ: 'ಬ್ಯಾಡ್ ಬಾಯ್' ಸಲ್ಮಾನ್ ಖಾನ್ ಅಪರಾಧಿ

ಈಗಾಗಲೇ ಸಲ್ಮಾನ್ ಅಭಿನಯಿಸುತ್ತಿರುವ ಚಿತ್ರಗಳ ಶೂಟಿಂಗ್ ನಿಲ್ಲಿಸಬೇಕಾಗುತ್ತೆ. ಅದಾದ ನಂತರ ಒಪ್ಪಿಕೊಂಡಿರುವ ಪ್ರಾಜೆಕ್ಟ್ ಗಳು ಶಾಕ್ ಗೆ ಒಳಗಾಗಿದ್ದಾರೆ. ಅಂದುಕೊಂಡ ದಿನಾಂಕಕ್ಕೆ ಸಿನಿಮಾ ಮಾಡಲು ಕಷ್ಟವಾಗಬಹುದು. ಇದರಿಂದ ನಿರ್ಮಾಪಕರಿಗೆ ನಷ್ಟವಾಗಬಹುದು. ಹೀಗಾಗಿ, ಸಲ್ಲುಗೆ ಪ್ರಕಟವಾಗುವ ಶಿಕ್ಷೆಯ ಬಗ್ಗೆ ಬಾಲಿವುಡ್ ನಿರ್ಮಾಪಕರು ತಲೆಕೆಡಿಸಿಕೊಂಡಿದ್ದಾರೆ. ಅಷ್ಟಕ್ಕೂ, ಸಲ್ಲು ಅಭಿನಯಿಸುತ್ತಿರುವ ಸಿನಿಮಾಗಳು ಯಾವುದು.? ಮುಂದೆ ಓದಿ.....

'ರೇಸ್-3' ಚಿತ್ರಕ್ಕೆ ದೊಡ್ಡ ಸಂಕಷ್ಟ

ರೆಮೋ ಡಿಸೋಜಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ರೇಸ್-3' ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಶೇಕಾಡ 90% ರಷ್ಟು ಶೂಟಿಂಗ್ ಮುಗಿದಿರುವಾಗ ಸಲ್ಲುಗೆ ಶಿಕ್ಷೆಯಾದ್ರೆ ಶೂಟಿಂಗ್ ಕಥೆಯೇನು ಎಂಬುದು ನಿರ್ಮಾಪಕರ ಆತಂಕವಾಗಿದೆ. ಸುಮಾರು 100 ಕೋಟಿ ವೆಚ್ಚದಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ಅಂದ್ಹಾಗೆ, ಈ ಚಿತ್ರವನ್ನ ರಮೇಶ್ ಎಸ್ ತರೌಣಿ ಜೊತೆ ಸಲ್ಲು ಕೂಡ ಬಂಡವಾಳ ಹಾಕಿದ್ದಾರೆ.

'ದಬಾಂಗ್-3' ಚಿತ್ರಕ್ಕೆ ನಡೆದಿದೆ ಸಿದ್ದತೆ.!

ಇನ್ನು 'ದಬಾಂಗ್' ಚಿತ್ರತಂಡದಿಂದ 'ದಬಾಂಗ್-3' ಸಿನಿಮಾ ಮಾಡಲಾಗುತ್ತಿದ್ದು, ಈಗಾಗಲೇ ಪ್ರಿ-ಪ್ರಡೊಕ್ಷನ್ ಕೆಲಸ ಜರುಗುತ್ತಿದೆ. ಅರ್ಬಾಜ್ ಖಾನ್ ಈ ಚಿತ್ರಕ್ಕೆ ದುಡ್ಡು ಹಾಕುತ್ತಿದ್ದು, ರಿಲೀಸ್ ಡೇಟ್ ಘೋಷಣೆ ಮಾಡಿಲ್ಲ. ಪ್ರಭುದೇವ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ಈದ್ ಹಬ್ಬಕ್ಕೆ ಸಿನಿಮಾ ಸೆಟ್ಟೇರಬೇಕಿದೆ.

ಕೊನೆಗೂ ಸಲ್ಲೂಗೆ ಜೈಲು... 'ಕೃಷ್ಣಮೃಗ'ದ ಮರಿಮಕ್ಕಳಿಗೆ ಸಿಕ್ಕಿತು ನ್ಯಾಯ!

'ಭರತ್' ಆಗೋಕೆ ಸಲ್ಲು ರೆಡಿ

ಈ ಮಧ್ಯೆ ಸಲ್ಮಾನ್ ಖಾನ್ ಸಂಬಂಧಿ ಅತುಲ್ ಅಗ್ನೋತ್ರಿ ನಿರ್ಮಾಣದಲ್ಲಿ ಭರತ್ ಎಂಬ ಚಿತ್ರವನ್ನ ಸಲ್ಲು ಒಪ್ಪಿಕೊಂಡಿದ್ದಾರೆ. ಕೊರಿಯನ್ ಹಿಟ್ ಸಿನಿಮಾ 'ಓಡ್ ಟು ಮೈ ಫಾದರ್' ಚಿತ್ರದ ರೀಮೇಕ್. ಸದ್ಯಕ್ಕೆ ಈ ಚಿತ್ರವೂ ಪೂರ್ವ ನಿರ್ಮಾಣ ಹಂತದಲ್ಲಿದೆ.

'ಕಿಕ್' ಸರಣಿ ಮತ್ತು 'ದಸ್ ಕಾ ದಮ್'

ಈ ಮೂರು ಚಿತ್ರಗಳ ನಂತರ ಕಿಕ್ ಸರಣಿಯ ಮತ್ತೊಂದು ಸಿನಿಮಾಗೆ ಸಲ್ಲು ಸಜ್ಜಾಗಿದ್ದಾರೆ. 2019ರ ಕ್ರಿಸ್ ಮಸ್ ವೇಳೆ ಈ ಚಿತ್ರವನ್ನ ಬಿಡುಗಡೆ ಮಾಡುವಂತೆ ಮೇಕಿಂಗ್ ಮಾಡಲು ಪ್ಲಾನ್ ಮಾಡುತ್ತಿದ್ದಾರೆ. ಹಾಗೂ ಸೋನಿ ಟಿವಿಯಲ್ಲಿ ಪ್ರಸಾರವಾಗುವ ದಸ್ ಕ ದಮ್ ನಿರೂಪಣೆ ಮಾಡಲಿದ್ದಾರೆ ಎನ್ನಲಾಗಿದೆ.

ಕೃಷ್ಣಮೃಗ ಬೇಟೆ ಪ್ರಕರಣ: ಸಲ್ಮಾನ್ ದೋಷಿ

ವರ್ಷಾಂತ್ಯದಲ್ಲಿ ಬಿಗ್ ಬಾಸ್

ಇಷ್ಟೆಲ್ಲಾ ಸಿನಿಮಾಗಳ ಮಧ್ಯೆ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 12ನೇ ಆವೃತ್ತಿ ಬರಲಿದೆ. ಸಲ್ಲು ಅಲಭ್ಯದಲ್ಲಿ ಬಿಗ್ ಬಾಸ್ ಯಶಸ್ಸಾಗುವುದು ಸಾಧ್ಯನಾ ಎಂಬ ಲೆಕ್ಕಾಚಾರ ಕೂಡ ಆಯೋಜಕರ ಮುಂದಿರುವ ಪ್ರಶ್ನೆ.

English summary
Salman Khan convicted in black buck poaching case: Race 3, Kick 2, Dabangg 3, Bharat — what happens to star's pending films.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X