For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್ ಕುಮಾರ್ ದೊಡ್ಡ ಸ್ವಾರ್ಥಿ, ಹಣವಷ್ಟೆ ಆತನಿಗೆ ಮುಖ್ಯ ಎಂದ ನಿರ್ಮಾಪಕ

  |

  ನಟ ಅಕ್ಷಯ್ ಕುಮಾರ್ ಇತ್ತೀಚೆಗಷ್ಟೆ ಕೊರೊನಾ ವಿರುದ್ಧ ಸಮರಕ್ಕೆ ಸರ್ಕಾರಕ್ಕೆ ಕೋಟ್ಯಂತರ ಹಣ ದೇಣಿಗೆ ನೀಡಿದ್ದಾರೆ. ಆದರೆ ಅವರೊಬ್ಬ ಸ್ವಾರ್ಥಿ, ಹಣವೊಂದೇ ಅವರ ಗುರಿ ಎಂಬ ಆರೋಪವನ್ನು ನಿರ್ಮಾಪಕರೊಬ್ಬರು ಮಾಡಿದ್ದಾರೆ.

  ನಾವಿದ್ದೇವೆ ಯೋಚನೆ ಮಾಡಬೇಡಿ ಎಂದ ಶಿವಣ್ಣ | Shivarajkumar | Filmibeat Kannada

  ನಟಿ ಪ್ರಿಯಾಂಕಾ ಚೋಪ್ರಾ ಅವರ ಮಾಜಿ ಮ್ಯಾನೇಜರ್ ಸಹ ಆಗಿರುವ ಪ್ರಕಾಶ್ ಜಾಜು ಎಂಬುವರು ಅಕ್ಷಯ್ ಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ. ಇವರು ನಿರ್ಮಾಪಕ ಹಾಗೂ ಫೈನ್ಯಾನ್ಶಿಯರ್ ಸಹ ಆಗಿದ್ದಾರೆ.

  14 ದಿನಗಳ ಚಿತ್ರೀಕರಣಕ್ಕೆ ಅಕ್ಷಯ್ ಕುಮಾರ್ ಪಡೆಯುತ್ತಿರುವ ಸಂಭಾವನೆ ಇಷ್ಟೊಂದಾ?14 ದಿನಗಳ ಚಿತ್ರೀಕರಣಕ್ಕೆ ಅಕ್ಷಯ್ ಕುಮಾರ್ ಪಡೆಯುತ್ತಿರುವ ಸಂಭಾವನೆ ಇಷ್ಟೊಂದಾ?

  ಪ್ರಕಾಶ್ ಜಾಜು ಟ್ವಿಟ್ಟರ್‌ನಲ್ಲಿ ಹೀಗೊಂದು ಆರೋಪ ಮಾಡಿದ್ದು, ಟ್ವೀಟ್ ವೈರಲ್ ಆಗುತ್ತಿದ್ದಂತೆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಇದೀಗ ಅದರ ಸ್ಕ್ರೀನ್ ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  'ನಾನು ಕುಡಿದಿದ್ದೀನಿ, ಸುಳ್ಳು ಹೇಳುವುದಿಲ್ಲ'

  'ನಾನು ಕುಡಿದಿದ್ದೀನಿ, ಸುಳ್ಳು ಹೇಳುವುದಿಲ್ಲ'

  ಜುಲೈ 23 ರಂದು ಟ್ವೀಟ್‌ ಮಾಡಿದ್ದ ಪ್ರಕಾಶ್ ಜಾಜು, 'ನಾನು ನಾಲ್ಕು ಪೆಗ್ ಕುಡಿದಿದ್ದೀನಿ. ನಾನು ಸುಳ್ಳು ಹೇಳುವುದಿಲ್ಲ. ನನ್ನ 35 ವರ್ಷಗಳ ಸಿನಿ ಜೀವದಲ್ಲಿ ನಾನು ಕಂಡ ಅತ್ಯಂತ ಸ್ವಾರ್ಥ ವ್ಯಕ್ತಿ ಅಕ್ಷಯ್ ಕುಮಾರ್, ಆತನ ಒಂದೇ ಉದ್ದೇಶ ಹಣ ಮಾಡುವುದಷ್ಟೆ' ಎಂದು ಬರೆದಿದ್ದರು.

  ಟ್ವೀಟ್ ಡಿಲೀಟ್ ಮಾಡಿರುವ ಜಾಜು

  ಟ್ವೀಟ್ ಡಿಲೀಟ್ ಮಾಡಿರುವ ಜಾಜು

  ಜುಲೈ 23 ರ ಬೆಳಿಗ್ಗೆ 7:50 ಕ್ಕೆ ಈ ಟ್ವೀಟ್ ಮಾಡಿದ್ದ ಪ್ರಕಾಶ್ ಜಾಜು ಕೆಲವೇ ನಿಮಿಷಗಳಲ್ಲಿ ಟ್ವೀಟ್ ಅನ್ನು ಡಿಲೀಟ್ ಮಾಡಿಬಿಟ್ಟಿದ್ದಾರೆ. ಆದರೆ ಆ ವೇಳೆಗಾಗಲೇ ಹಲವರು ಇದರ ಸ್ಕ್ರೀನ್ ಶಾಟ್ ತೆಗೆದಿಟ್ಟುಕೊಂಡಿದ್ದರು. ಅದೀಗ ವೈರಲ್ ಆಗಿದೆ.

  ಅಧಿಕ ಮೊತ್ತಕ್ಕೆ ಮಾರಾಟವಾದ ಅಕ್ಷಯ್ ಕುಮಾರ್ ಅಭಿನಯದ 'ಲಕ್ಷ್ಮಿ ಬಾಂಬ್'ಅಧಿಕ ಮೊತ್ತಕ್ಕೆ ಮಾರಾಟವಾದ ಅಕ್ಷಯ್ ಕುಮಾರ್ ಅಭಿನಯದ 'ಲಕ್ಷ್ಮಿ ಬಾಂಬ್'

  ಪ್ರಿಯಾಂಕಾ ಚೋಪ್ರಾ ವಿರುದ್ಧ ಕೇಸು ದಾಖಲಿಸಿದ್ದ ಜಾಜು

  ಪ್ರಿಯಾಂಕಾ ಚೋಪ್ರಾ ವಿರುದ್ಧ ಕೇಸು ದಾಖಲಿಸಿದ್ದ ಜಾಜು

  ಪ್ರಿಯಾಂಕಾ ಚೋಪ್ರಾ ಅವರ ಮಾಜಿ ಮ್ಯಾನೇಜರ್ ಆಗಿರುವ ಪ್ರಕಾಶ್ ಜಾಜು 2004 ರಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಿಯಾಂಕಾ ಚೋಪ್ರಾ ಮೇಲೆಯೇ ದಾವೆ ಹೂಡಿದ್ದರು. ಪ್ರಿಯಾಂಕಾ ಚೋಪ್ರಾ ತಮ್ಮ ನಡುವೆ ಆಗಿದ್ದ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಎಂದು ಜಾಜು ಆರೋಪಿಸಿದ್ದರು.

  15 ವರ್ಷ ನಡೆದ ಕಾನೂನು ಹೋರಾಟ

  15 ವರ್ಷ ನಡೆದ ಕಾನೂನು ಹೋರಾಟ

  15 ವರ್ಷ ನಡೆದ ಈ ಕಾನೂನು ಹೊರಾಟವನ್ನು ಕೊನೆಗೆ ಎರಡೂ ಕಡೆಯವರು ಪರಸ್ಪರ ಒಪ್ಪಿಗೆ ಮೇರೆಗೆ ಹಿಂಪಡೆದರು. ಪ್ರಿಯಾಂಕಾ ಚೋಪ್ರಾ ನಿಕ್ ಜೋನಸ್‌ ಜೊತೆಗೆ ವಾಸ್ತವ್ಯ ಬದಲಾಯಿಸುತ್ತಿದ್ದ ಕಾರಣ ಅವರು ಪ್ರಕರಣವನ್ನು ಹಿಂಪಡೆಯುವದಕ್ಕೆ ಒಪ್ಪಿಗೆ ನೀಡಿದರು.

  ಅಕ್ಷಯ್ ಕುಮಾರ್ ಕಾರಣದಿಂದ ಚಿತ್ರರಂಗ ತೊರೆಯುವ ನಿರ್ಧಾರ ಮಾಡಿದ್ದೆ ಎಂದ ನಟಿಅಕ್ಷಯ್ ಕುಮಾರ್ ಕಾರಣದಿಂದ ಚಿತ್ರರಂಗ ತೊರೆಯುವ ನಿರ್ಧಾರ ಮಾಡಿದ್ದೆ ಎಂದ ನಟಿ

  English summary
  Producer and Priyanka Chopra's ex manager Prakash Jaju said actor Akshay Kumar is very selfish person.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X