For Quick Alerts
  ALLOW NOTIFICATIONS  
  For Daily Alerts

  ವಾಲ್ಮೀಕಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ರಾಖಿ ಸಾವಂತ್‌'ಗೆ ಜಾಮೀನು

  By Suneel
  |

  ಮಹಾಕಾವ್ಯ 'ರಾಮಾಯಣ' ರಚನಾಕಾರ ವಾಲ್ಮೀಕಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ನಟಿ ರಾಖಿ ಸಾವಂತ್'ಗೆ ಪಂಜಾಬ್ ನ ಲುಧಿಯಾನ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

  ಬಾಲಿವುಡ್ ನಟಿ ರಾಖಿ ಸಾವಂತ್ ವಾಲ್ಮೀಕಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಲುಧಿಯಾನಾ ಕೋರ್ಟ್‌ ಬಂಧನ ಆದೇಶ ಹೊರಡಿಸಿತ್ತು. ಆಕೆ ಸರೆಂಡರ್ ಆಗಿ ವಿಚಾರಣೆಗೆ ಒಳಗಾಗಿದ್ದು, ಈಗ ನ್ಯಾಯಲಯದ ಮ್ಯಾಜಿಸ್ಟ್ರೇಟ್ ವಿಶವ್ ಗುಪ್ತ ರವರು ಜಾಮೀನು ನೀಡಿದ್ದಾರೆ.

  ರಾಖಿ ಸಾವಂತ್ ರವರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ-ಪ್ರತಿವಾದಗಳನ್ನು ಆಲಿಸಿದ ನಂತರ ರೂ.1 ಲಕ್ಷದ ಎರಡು ಬಾಂಡ್‌ಗಳನ್ನು ಪಡೆದು ಜಾಮೀನು ನೀಡಲಾಗಿದೆ.

  ನಟಿ ಕಳೆದ ವರ್ಷ ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮುದಾಯದ ಭಾವನೆಗಳಿಗೆ ಧಕ್ಕೆಯುಂಟಾಗುವಂತೆ ಮಾತನಾಡಿದ್ದಾರೆ ಎಂದು ವಾಲ್ಮೀಕಿ ಸಮುದಾಯದವರು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಜೂನ್ 2 ರಂದು ನ್ಯಾಯಲಯ ಜುಲೈ 7 ರ ಒಳಗೆ ಕೋರ್ಟಿಗೆ ಹಾಜರಾಗದಿದ್ದಲ್ಲಿ ಜಾಮೀನು ರಹಿತ ವಾರಂಟ್ ಪ್ರಕಟಿಸುವ ಬಗ್ಗೆ ಆದೇಶ ಹೊರಡಿಸಿತ್ತು. ಈಗ ರಾಖಿ ಸಾವಂತ್ ಸರೆಂಡರ್ ಆಗಿ ಕೋರ್ಟಿಗೆ ಹಾಜರಾಗಿ ವಾಲ್ಮೀಕಿ ಸಮುದಾಯದವರಲ್ಲಿ 'ನನ್ನ ಹೇಳಿಕೆಯಿಂದ ಯಾರಿಗಾದರೂ ನೋವುಂಟಾಗಿದ್ದಲ್ಲಿ ಬೇಷರತ್ ಕ್ಷಮೆ ಕೇಳುತ್ತೇನೆ. ನಾನು ಉದ್ದೇಶ ಪೂರಕವಾಗಿ ಮಾತನಾಡಿಲ್ಲ' ಎಂದಿದ್ದಾರೆ.

  ರಾಖಿ ಸಾವಂತ್ ವಿರುದ್ಧ ಕಳೆದ ವರ್ಷ ಜುಲೈ 9 ರಂದು ಲುಧಿಯಾನ ಸ್ಥಳೀಯ ವಕೀಲರಾದ ನರಿಂದರ್ ಆದಿಯ ಎಂಬುವರು, 'ಖಾಸಗಿ ಚಾನೆಲ್ ಒಂದರ ಕಾರ್ಯಕ್ರಮದಲ್ಲಿ ರಾಖಿ ಸಾವಂತ್ ರವರು ವಾಲ್ಮೀಕಿ ಸಮುದಾಯದವರ ಭಾವನೆಗಳಿಗೆ ದಕ್ಕೆಯಾಗುವ ರೀತಿಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ' ಎಂದು ಪ್ರಕರಣ ದಾಖಲಿಸಿದ್ದರು.

  English summary
  Bollywood Actress Rakhi Sawant was today granted bail by a Ludhiana court in a case related to alleged "objectionable" remarks made by her against Valmiki, the author of the epic 'Ramayana'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X