For Quick Alerts
  ALLOW NOTIFICATIONS  
  For Daily Alerts

  ಬ್ರಹ್ಮಾಸ್ತ್ರದಿಂದ ಪಿವಿಆರ್‌ಗೆ 800 ಕೋಟಿ ನಷ್ಟ; ತುಟಿ ಬಿಚ್ಚಿದ ಪಿವಿಆರ್ ಸಿಇಒ

  |

  ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಇದೇ ಚೊಚ್ಚಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿರುವ ಬ್ರಹ್ಮಾಸ್ತ್ರ ಚಿತ್ರ ಕಳೆದ ಶುಕ್ರವಾರ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಯಿತು. ಇನ್ನು ಬ್ರಹ್ಮಾಸ್ತ್ರ ಬಿಡುಗಡೆಯ ದಿನ ಈ ಚಿತ್ರದಿಂದಾಗಿ ದೇಶದ ಅತಿದೊಡ್ಡ ಮಲ್ಟಿಪ್ಲೆಕ್ಸ್ ಸಂಸ್ಥೆಗಳಾದ ಪಿವಿಆರ್ ಮತ್ತು ಐನಾಕ್ಸ್ ಎರಡಕ್ಕೂ ಬರೋಬ್ಬರಿ 800 ಕೋಟಿ ನಷ್ಟವಾಗಲಿದೆ ಎಂಬ ಸುದ್ದಿ ದೊಡ್ಡಮಟ್ಟದಲ್ಲಿ ಹರಿದಾಡಿತ್ತು.

  ಹೌದು, ಪಿವಿಆರ್ ಮತ್ತು ಐನಾಕ್ಸ್ ಷೇರುಗಳು ಕಳೆದೆರಡು ವಾರಗಳಲ್ಲಿ ಉತ್ತಮ ಹಂತದಲ್ಲಿತ್ತು, ಆದರೆ ಈ ವಾರ ಬ್ರಹ್ಮಾಸ್ತ್ರ ಬಿಡುಗಡೆಯಾಗುತ್ತಿರುವ ಕಾರಣ ಐನಾಕ್ಸ್ ಮತ್ತು ಪಿವಿಆರ್ ತಮ್ಮ ರೇಟಿಂಗ್ ಕಳೆದುಕೊಂಡು ಷೇರುಗಳ ಮೊತ್ತವೂ ಸಹ ಕುಸಿತ ಕಂಡಿದೆ ಹೀಗಾಗಿಯೇ ಎರಡೂ ಸಂಸ್ಥೆಗಳು ಬರೋಬ್ಬರಿ 800 ಕೋಟಿ ಕಳೆದುಕೊಳ್ಳಲಿವೆ ಎಂಬ ಸುದ್ದಿ ಹರಿದಾಡಿತ್ತು.

  ಈ ಸುದ್ದಿ ಇಂದಿಗೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬುದು ಅನೇಕರಿಗೆ ತಿಳಿದಿಲ್ಲ. ಹೌದು, ಪಿವಿಆರ್ ಸಿಇಒ ಕಮಲ್ ಗಿಯಾಂಚಂದಾನಿ ಚಿತ್ರ ಬಿಡುಗಡೆಯಾದ ದಿನ ಟ್ವೀಟ್ ಮಾಡುವ ಮೂಲಕ ಸತ್ಯಾಂಶವನ್ನು ಬಿಚ್ಚಿಟ್ಟಿದ್ದರು. ಬ್ರಹ್ಮಾಸ್ತ್ರದಿಂದ ನಮಗೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ, ಬದಲಾಗಿ ಬ್ರಹ್ಮಾಸ್ತ್ರ ಮೊದಲ ದಿನ ಪಿವಿಆರ್ ಒಂದರಲ್ಲಿಯೇ 8 ಕೋಟಿ ಕಲೆಹಾಕಿದ್ದು, ಶನಿವಾರ 9 ಕೋಟಿ ಮತ್ತು ಭಾನುವಾರ 10 ಕೋಟಿ ಗಳಿಸಬಹುದು ಎನ್ನುವ ಮೂಲಕ ನಷ್ಟದ ಸುದ್ದಿಗೆ ತೆರೆ ಎಳೆದಿದ್ದಾರೆ.

  English summary
  PVR CEO gives clarification about 800 crores loss from Brahmastra

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X