»   » ಐಶ್ವರ್ಯ ರೈ ಆಕ್ಟ್ ಮಾಡಿ ಅಂತ ಕೇಳಿದ್ರೂ ರಿಜೆಕ್ಟ್ ಮಾಡಿದ ನಟ

ಐಶ್ವರ್ಯ ರೈ ಆಕ್ಟ್ ಮಾಡಿ ಅಂತ ಕೇಳಿದ್ರೂ ರಿಜೆಕ್ಟ್ ಮಾಡಿದ ನಟ

Posted By:
Subscribe to Filmibeat Kannada

ಬಾಲಿವುಡ್ ನಟಿ ಐಶ್ವರ್ಯ ರೈ ಅವರ ಜೊತೆಯಲ್ಲಿ ಒಂದು ಸಿನಿಮಾ ಮಾಡಿದ್ರೆ ಸಾಕು ಎನ್ನುವ ನಟರು ಚಿತ್ರರಂಗದಲ್ಲಿದ್ದಾರೆ. ಐಶ್ ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಇದ್ರು ಓಕೆ ಎನ್ನುವ ನಟರಿದ್ದಾರೆ. ಆದ್ರೆ, ಐಶ್ವರ್ಯ ರೈ ಜೊತೆ ನಾಯಕನಾಗಿ ನಟಿಸಿ ಎಂದರೇ ನಟನೊಬ್ಬ ಆಗಲ್ಲ ಎಂದಿದ್ದಾರೆ.

ಹೌದು, ಐಶ್ವರ್ಯ ರೈ ಅಭಿನಯಿಸುತ್ತಿರುವ 'ಫ್ಯಾನಿ ಖಾನ್' ಚಿತ್ರದಲ್ಲಿ ಅಭಿನಯಿಸಲು ಹ್ಯಾಂಡ್ ಸಮ್ ನಟ ಮಾಧವನ್ ಅವರಿಗೆ ಅಪ್ರೋಚ್ ಮಾಡಲಾಗಿತ್ತು. ಆದ್ರೆ, ಈ ಆಫರ್ ನ್ನ ಮಾಧವನ್ ತಳ್ಳಿ ಹಾಕಿದ್ದಾರೆ. ಹೀಗಾಗಿ, ಈ ಅವಕಾಶ ಈಗ ಮತ್ತೋರ್ವ ನಟನ ಪಾಲಾಗಿದೆ.

ಇದೇನಿದು.!? ತಲೆ ಬೋಳಿಸಿಕೊಂಡ್ರಾ ನಟಿ ಐಶ್ವರ್ಯ ರೈ.?

R Madhavan rejects Aishwarya's Fanney Khan Movie

'ಫ್ಯಾನಿ ಖಾನ್' ಚಿತ್ರದಲ್ಲಿ ಮಾಧವನ್ ಅವರನ್ನ ನಾಯಕನಾಗಿ ಕರೆತರಲು ನಿರ್ದೇಶಕರು ಆಸೆ ಪಟ್ಟಿದ್ದರು. ನಟಿ ಐಶ್ವರ್ಯ ಅವರು ಕೂಡ ನಿರ್ದೇಶಕರ ಆಸೆಗೆ ಬೆಂಬಲ ನೀಡಿ, ಮಾಧವನ್ ಅವರೇ ಬೇಕು ಎಂದಿದ್ದರು. ಆದ್ರೆ, ಮಾಧವನ್ ಮಾತ್ರ ಈ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲವೆಂದಿದ್ದಾರೆ. ಇದಕ್ಕೆ ಅವರು ಕೊಟ್ಟಿರುವ ಕಾರಣ ಡೇಸ್ ಸಮಸ್ಯೆ.

ದೇಹ ಕಾಂತಿ ಹೆಚ್ಚಿಸಲು ಐಶ್ವರ್ಯ ರೈ ಗುಟ್ಟಾಗಿ ಮಾಡುತ್ತಿರುವುದೇನು?

R Madhavan rejects Aishwarya's Fanney Khan Movie

ಇನ್ನು ಮಾಧವನ್ ಅವರು ಬಿಟ್ಟು ಹೋದ ಪಾತ್ರಕ್ಕೀಗ ಮತ್ತೋರ್ವ ಬಾಲಿವುಡ್ ನಟ ರಾಜ್ ಕುಮಾರ್ ರಾವ್ ಆಯ್ಕೆಯಾಗಿದ್ದಾರೆ. ಅಂದ್ಹಾಗೆ, ರಾಕೇಶ್ ಓಂಪ್ರಕಾಶ್ ಮೆಹ್ರಾ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಐಶ್ ಜೊತೆ ಅನಿಲ್ ಕಪೂರ್ ಪ್ರಮುಖ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಶುರುವಾಗಿದ್ದು, ಅನಿಲ್ ಕಪೂರ್ ಮತ್ತು ಐಶ್ವರ್ಯ ಅವರ ಭಾಗದ ಚಿತ್ರೀಕರಣ ನಡೆಯುತ್ತಿದೆಯಂತೆ.

English summary
Just a while back, there were reports that R Madhavan will be romancing Aishwarya in the film. but now, Rajkummar Rao replaced in R Madhavan in Aishwarya Rai Bachchan's Fanney Khan

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada