»   » 'ಜ್ಯೂಲಿ'ಯ ಬಿಕಿನಿ ಮೈಮಾಟಕ್ಕೆ 'ವಾಹ್' ಎನ್ನುತ್ತಿರುವ ಚಿತ್ರಜಗತ್ತು

'ಜ್ಯೂಲಿ'ಯ ಬಿಕಿನಿ ಮೈಮಾಟಕ್ಕೆ 'ವಾಹ್' ಎನ್ನುತ್ತಿರುವ ಚಿತ್ರಜಗತ್ತು

Posted By:
Subscribe to Filmibeat Kannada

ದಕ್ಷಿಣ ಭಾರತದ ಖ್ಯಾತ ತಾರೆ ಲಕ್ಷ್ಮಿ ರೈ ಬಾಲಿವುಡ್ ನಲ್ಲಿ ಭಾರಿ ಸುದ್ದಿಯಾಗಿದ್ದಾಳೆ. ಇದಕ್ಕೆ ಕಾರಣ ಲಕ್ಷ್ಮಿ ರೈ ಅಭಿನಯಿಸುತ್ತಿರುವ 'ಜ್ಯೂಲಿ-2' ಚಿತ್ರ.

ಈ ಒಂದು ಚಿತ್ರದಿಂದ ಇಡೀ ಬಾಲಿವುಡ್ ನಟಿಯರೆಲ್ಲ ಲಕ್ಷ್ಮಿ ರೈ ಕಡೆ ಮುಖ ಮಾಡಿ ನೋಡವಂತೆ ಆಗಿದೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮೂಲಕ ಚಿತ್ರಲೋಕದ ಗಮನ ಸೆಳೆದಿದ್ದ ಲಕ್ಷ್ಮಿ ರೈ, ಈಗ ಮತ್ತಷ್ಟು ಕಿಕ್ಕೇರಿಸಿದ್ದಾರೆ.['ಶೃಂಗಾರ' ತಾರೆ ಲಕ್ಷ್ಮಿ ರೈ ಕುರಿತ ಕೆಲವು ಸಂಗತಿಗಳು]

ಹೌದು, 'ಜ್ಯೂಲಿ-2' ಚಿತ್ರದಲ್ಲಿ ಲಕ್ಷ್ಮಿ ರೈ ಅವರ ಹಾಟ್ ಪೋಸ್ಟರ್ ಗಳು ರಿವಿಲ್ ಆಗಿದ್ದು, ಚಿತ್ರದ ಮೇಲೆ ನಿರೀಕ್ಷೆಗಳು ಬೆಟ್ಟದಷ್ಟಾಗಿದೆ. ಪಡ್ಡೆ ಹುಡುಗರಂತೂ ಈ ಫೋಟೋಗಳನ್ನ ನೋಡಿ ಲಕ್ಷ್ಮಿ ರೈ ಅಭಿಮಾನಿಗಳಾಗಿ ಬಿಟ್ಟಿದ್ದಾರೆ. 'ಜ್ಯೂಲಿ-2' ಚಿತ್ರದಲ್ಲಿ ಲಕ್ಷ್ಮಿ ರೈ ಫೋಟೋಗಳು ಹೇಗಿದೆ ಅಂತ ಮುಂದೆ ಓದಿ.......

'ಲಕ್ಷ್ಮಿ ರೈ' ಮೈಮಾಟಕ್ಕೆ ಬಾಲಿವುಡ್ ಫಿದಾ!

'ಜ್ಯೂಲಿ-2' ಚಿತ್ರದಲ್ಲಿ ನಟಿ ಲಕ್ಷ್ಮಿ ರೈ ಮುಖ್ಯ ಪಾತ್ರವನ್ನ ನಿರ್ವಹಿಸುತ್ತಿದ್ದು, ತನ್ನ ಹಾಟ್ ಪೋಟೋಗಳಿಂದ ಕುತೂಹಲ ಹೆಚ್ಚಿಸುತ್ತಿದ್ದಾರೆ.[ಬಾಲಿವುಡ್ ಗೆ ಚೆಂಗನೆ ನೆಗೆದ ಬೆಳಗಾವಿ ಚಿಗರೆ ಲಕ್ಷ್ಮಿ ರೈ]

ಮೊದಲ ಪೋಸ್ಟರ್ ನಲ್ಲಿ ಬೋಲ್ಡ್ ಮಾಡಿದ ನಟಿ

ಜನವರಿ ತಿಂಗಳಿನಲ್ಲಷ್ಟೇ 'ಜ್ಯೂಲಿ-2' ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿತ್ತು. ಈ ಮೊದಲ ಪೋಸ್ಟರ್ ನಲ್ಲಿ ಎಲ್ಲರನ್ನ ಬೋಲ್ಡ್ ಮಾಡಿದ್ದರು ನಟಿ ಲಕ್ಷ್ಮಿ ರೈ. ಪೋಸ್ಟರ್ ನಲ್ಲಿ ತನ್ನ ಬೆನ್ನು ತೋರಿಸಿ ಇಡೀ ಬಾಲಿವುಡ್ ನ್ನೆ ಬೆರಗಾಗಿಸಿದ್ದರು.[ನಟಿ ಲಕ್ಷ್ಮಿ ರೈ ಬಾಳಿಗೆ ಮಗ್ಗುಲಮುಳ್ಳಾದರೆ ಧೋನಿ?]

'ಜ್ಯೂಲಿ'ಗಾಗಿ ಬಿಕಿನಿ ತೊಟ್ಟ ರೈ

ಇನ್ನು 'ಜ್ಯೂಲಿ' ಚಿತ್ರಕ್ಕಾಗಿ ಬಿಕಿನಿ ತೊಟ್ಟು ಮತ್ತಷ್ಟು ಹಾಟ್ ಎನಿಸಿಕೊಂಡಳು. ಯಾವ ಬಿಟೌನ್ ನಟಿಗೂ ಕಮ್ಮಿಯಿಲ್ಲವೆಂಬಂತೆ ಬಾಲಿವುಡ್ ಲೋಕಕ್ಕೆ ಕಾಲಿಟ್ಟಿದ್ದಾಳೆ.['ಖೈದಿ-150' ಚಿತ್ರದ ಸ್ಪೆಷಲ್ ಸಾಂಗ್ ಗೆ 'ಮೆಗಾಸ್ಟಾರ್ ಸ್ಟೆಪ್']

ಬಾಲಿವುಡ್ ನಲ್ಲಿ ಚೊಚ್ಚಲ ಚಿತ್ರ

ಅಂದ್ಹಾಗೆ, 'ಜ್ಯೂಲಿ-2' ನಟಿ ಲಕ್ಷ್ಮಿ ರೈಗೆ ಚೊಚ್ಚಲ ಬಾಲಿವುಡ್ ಚಿತ್ರ. ಹೀಗೆ, ಮೊದಲ ಚಿತ್ರದಲ್ಲೇ ಈ ಮಟ್ಟಿಗೆ ಎಕ್ಸ್ ಪೋಸ್ ಮಾಡುತ್ತಿರುವುದು ಮತ್ತಷ್ಟು ಬೇಡಿಕೆ ಹೆಚ್ಚಿಸಿದೆ.[ಗಿರಿಗಿಟ್ಲೆ ಆಡುತ್ತಿರುವ ಶ್ರೀಶಾಂತ್,ಲಕ್ಷ್ಮಿ ರೈ ಫೋಟೋ]

ಲಕ್ಷ್ಮಿ ರೈ 50ನೇ ಚಿತ್ರ

ಲಕ್ಷ್ಮಿ ರೈಗೆ ಬಾಲಿವುಡ್ ನಲ್ಲಿ ಇದು ಮೊದಲ ಚಿತ್ರವಾದರೇ, ವೃತ್ತಿ ಬದುಕಿನಲ್ಲಿ ಇದು 50ನೇ ಚಿತ್ರ. ಹೀಗಾಗಿ, 50ನೇ ಚಿತ್ರದ ಮೇಲೆ ಸಹಜವಾಗಿ ಕುತೂಹಲ ಡಬಲ್ ಆಗಿದೆ.

'ಜ್ಯೂಲಿ' ಮುಂದುವರೆದ ಭಾಗ 'ಜ್ಯೂಲಿ-2'

ಲಕ್ಷ್ಮಿ ರೈ ನಟಿಸುತ್ತಿರುವ 'ಜ್ಯೂಲಿ-2', 2004ರಲ್ಲಿ ಬಿಡುಗಡೆಯಾಗಿದ್ದ 'ಜ್ಯೂಲಿ' ಚಿತ್ರದ ಮುಂದುವರೆದ ಭಾಗ. ಆ ಚಿತ್ರದಲ್ಲಿ ನೇಹಾ ದುಪಿಯಾ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದರು. ಭಾಗ-2ರಲ್ಲಿ ಲಕ್ಷ್ನಿ ರೈ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ದೀಪಕ್ ಶಿವದಸನಿ ಆಕ್ಷನ್ ಕಟ್!

ಮೊದಲ ಚಿತ್ರವನ್ನ ನಿರ್ದೇಶನ ಮಾಡಿದ್ದ ದೀಪಕ್ ಶಿವದಸನಿ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಗೆ ಬಂಡವಾಳ ಕೂಡ ಹಾಕಿದ್ದಾರೆ. ಇನ್ನು ವಿಜು ಶಾಹ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು, ಸಮೀರ್ ರೆಡ್ಡಿ ಕ್ಯಾಮೆರಾ ವರ್ಕ್ ಇದೆ.

ಬಹುಭಾಷೆಯಲ್ಲಿ ರಿಲೀಸ್!

ಹಿಂದಿಯಲ್ಲಿ ತಯಾರಾಗುತ್ತಿರುವ ಈ ಚಿತ್ರ ದಕ್ಷಿಣ ಭಾರತದ ಭಾಷೆಗಳಲ್ಲೂ ಬಿಡುಗಡೆಯಾಗಲಿದೆಯಂತೆ. ಕನ್ನಡ, ತೆಲುಗು, ತಮಿಳಿನಲ್ಲೂ 'ಜ್ಯೂಲಿ-2' ರಿಲೀಸ್ ಆಗಲಿದೆಯಂತೆ.

ಲಕ್ಷ್ಮಿ, ರಮ್ಯಾ ಅಭಿನಯದಲ್ಲೂ 'ಜ್ಯೂಲಿ' ಬಂದಿತ್ತು!

ಈ ಹಿಂದೆ 1975 ರಲ್ಲಿ ಮೊದಲ ಬಾರಿಗೆ 'ಜ್ಯೂಲಿ' ಹೆಸರಿನಲ್ಲಿ ಸಿನಿಮಾ ಬಂದಿತ್ತು. ಈ ಚಿತ್ರದಲ್ಲಿ ಬಹುಭಾಷಾ ನಟಿ ಲಕ್ಷ್ಮಿ ನಾಯಕಿಯಾಗಿದ್ದರು. ಈ ಚಿತ್ರದಲ್ಲಿ ಅಭಿನಯಸಿದ ನಂತರ 'ಜ್ಯೂಲಿ ಲಕ್ಷ್ಮಿ' ಎಂದೇ ಖ್ಯಾತಿ ಗಳಿಸಿಕೊಂಡರು. ಇನ್ನು ಇದೇ ಚಿತ್ರವನ್ನ 2006 ರಲ್ಲಿ ಮೋಹಕ ತಾರೆ ರಮ್ಯಾ ಕೂಡ ಕನ್ನಡದಲ್ಲಿ ಮಾಡಿದ್ದರು.

'ಜ್ಯೂಲಿ-2' ಯಾವಾಗ ಬಿಡುಗಡೆ

'ಜ್ಯೂಲಿ-2' ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗಾಗಲೇ ಹೇಳಿರುವಾಗೆ, ಆಗಸ್ಟ್ ತಿಂಗಳಲ್ಲಿ ತೆರೆಗೆ ಬರಲಿದೆ.

English summary
Raai Laxmi's Bold Poster's of 'Julie 2'. The movie Marks the Debut of South-Indian Raai Laxmi and is the Sequel of Neha Dhupia Starrer 2004 Movie Julie.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X