For Quick Alerts
  ALLOW NOTIFICATIONS  
  For Daily Alerts

  ರಾಜ್‌ ಕುಂದ್ರಾಗೆ ಇನ್ನಷ್ಟು ದಿನ ಜೈಲೇ ಗಟ್ಟಿ

  By ಫಿಲ್ಮಿಬೀಟ್ ಡೆಸ್ಕ್
  |

  ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ವಿತರಣೆ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್‌ ಕುಂದ್ರಾ ಇನ್ನೂ ಕೆಲವು ದಿನ ಜೈಲಿನಲ್ಲಿಯೇ ಕಳೆಯಬೇಕಿದೆ.

  ರಾಜ್ ಕುಂದ್ರಾ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಇಂದು ನಡೆದಿದ್ದು ವಿಚಾರಣೆಯನ್ನು ಮುಂದೂಡಲಾಗಿದೆ. ಇದರಿಂದಾಗಿ ರಾಜ್ ಕುಂದ್ರಾಗೆ ಇನ್ನಷ್ಟು ದಿನ ಜೈಲುವಾಸ ಅನುಭವಿಸಲೇ ಬೇಕಾದ ಪರಿಸ್ಥಿತಿ ಒದಗಿಬಂದಿದೆ.

  ರಾಜ್ ಕುಂದ್ರಾ ನ್ಯಾಯಾಂಗ ಬಂಧನದ ಅವಧಿ ಆಗಸ್ಟ್ 11ಕ್ಕೆ ಅಂತ್ಯವಾಗುವುದರಲ್ಲಿತ್ತು. ಇದೇ ವೇಳೆ ರಾಜ್ ಕುಂದ್ರಾ ಸಲ್ಲಿಸಿದ್ದ ಜಾಮೀನು ಅರ್ಜಿ ಸಹ ವಿಚಾರಣೆಗೆ ಬಂದು ಮುಂದಿನ ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಲಾಗಿದೆ. ಅಲ್ಲಿಯವರೆಗೆ ರಾಜ್ ಕುಂದ್ರಾ ಜೈಲಿನಲ್ಲಿಯೇ ಉಳಿಯಬೇಕಾಗುತ್ತದೆ.

  ರಾಜ್ ಕುಂದ್ರಾ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಪ್ರತಿಯಾಗಿ ವಾದ ಮಾಡಿದ ಮುಂಬೈ ಕ್ರೈಂ ಬ್ರ್ಯಾಂಚ್ ಪರ ವಕೀಲರು ''ರಾಜ್ ಕುಂದ್ರಾ ಸಾಕಷ್ಟು ಪ್ರಭಾವಿ ವ್ಯಕ್ತಿಯಾಗಿದ್ದು, ಆತ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಜೊತೆಗೆ ರಾಜ್ ಕುಂದ್ರಾ ಬ್ರಿಟೀಷ್ ಪ್ರಜೆ ಆಗಿದ್ದು ಯಾವಾಗ ಬೇಕಾದರೂ ದೇಶ ಬಿಟ್ಟು ಲಂಡನ್‌ಗೆ ಹಾರುವ ಸಾಧ್ಯತೆಯೂ ಇದೆ'' ಎಂದು ಕ್ರೈಂ ಬ್ರ್ಯಾಂಚ್ ಹೇಳಿದೆ.

  ಪ್ರಭಾವ ಬೀರುವ ಸಾಧ್ಯತೆ ಇದೆ ರಾಜ್ ಕುಂದ್ರಾ

  ಪ್ರಭಾವ ಬೀರುವ ಸಾಧ್ಯತೆ ಇದೆ ರಾಜ್ ಕುಂದ್ರಾ

  ಬಂಧನಕ್ಕೆ ಒಳಗಾದಾಗಿನಿಂದಲೂ ರಾಜ್ ಕುಂದ್ರಾ ವಿಚಾರಣೆಗೆ ಸೂಕ್ತವಾಗಿ ಸ್ಪಂದಿಸಿಲ್ಲ. ಈ ಪ್ರಕರಣದಲ್ಲಿ ಈಗಾಗಲೇ ಕೆಲವರು ಸ್ವಯಂ ಪ್ರೇರಿತವಾಗಿ ತಮ್ಮ ಹೇಳಿಕೆ ನೀಡಿದ್ದಾರೆ. ಇನ್ನೂ ಕೆಲವರು ಹೀಗೆ ಹೇಳಿಕೆ ನೀಡುವವರಿದ್ದಾರೆ ಒಂದೊಮ್ಮೆ ರಾಜ್ ಕುಂದ್ರಾ ಜಾಮೀನಿನ ಮೇಲೆ ಹೊರಗೆ ಬಂದರೆ ಅಂಥಹವರು ಧೈರ್ಯದಿಂದ ಹೇಳಿಕೆ ನೀಡುವುದು ಕಷ್ಟವಾಗಲಿದೆ. ಉಳಿದ ಸಾಕ್ಷ್ಯಗಳ ಮೇಲೆ ರಾಜ್ ಕುಂದ್ರಾ ಪ್ರಭಾವ ಬೀರಬಹುದು ಎಂದು ಕ್ರೈಂ ಬ್ರ್ಯಾಂಚ್‌ ಪರ ವಕೀಲರು ಹೇಳಿದ್ದಾರೆ.

  ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ

  ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ

  ರಾಜ್ ಕುಂದ್ರಾ ಬಂಧನವಾಗುವುದಕ್ಕೆ ಮುನ್ನವೇ ಕೆಲವು ಸಾಕ್ಷ್ಯಗಳನ್ನು ನಾಶ ಮಾಡಿದ್ದರು. ಈ ಪ್ರಕರಣದಲ್ಲಿ ಇನ್ನೂ ಕೆಲವು ಸಾಕ್ಷ್ಯಗಳನ್ನು ಕಲೆ ಹಾಕಬೇಕಿದ್ದು, ಒಂದೊಮ್ಮೆ ರಾಜ್ ಕುಂದ್ರಾ ಜಾಮೀನಿನ ಮೇಲೆ ಹೊರಗೆ ಬಂದರೆ ಆ ಸಾಕ್ಷ್ಯಗಳನ್ನು ನಾಶ ಮಾಡುವ ಸಾಧ್ಯತೆ ಇದೆ. ಅಶ್ಲೀಲ ವಿಡಿಯೋಗಳನ್ನು ಪ್ರದರ್ಶಿಸುತ್ತಿದ್ದ ಹಾಟ್‌ಶಾಟ್ಸ್ ಅಪ್ಲಿಕೇಶನ್ ಸಂಪೂರ್ಣ ರಾಜ್ ಕುಂದ್ರಾ ಹಿಡಿದಲ್ಲಿಯೇ ಇದ್ದು ಅದನ್ನು ಲಂಡನ್‌ನಲ್ಲಿನ ತಮ್ಮ ಸಂಬಂಧಿಯೊಬ್ಬರ ಸಂಸ್ಥೆಯಿಂದ ಅಪ್‌ಲೋಡ್ ಮಾಡಿಸುತ್ತಿದ್ದ ಒಂದೊಮ್ಮೆ ರಾಜ್ ಕುಂದ್ರಾ ಬಿಡುಗಡೆ ಆದರೆ ಆ ಮುಖ್ಯ ಸಾಕ್ಷಿಯ ಮೇಲೆಯೂ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದಿದೆ ಕ್ರೈಂ ಬ್ರ್ಯಾಂಚ್.

  ಅಶ್ಲೀಲ ವಿಡಿಯೋ ನಿರ್ಮಾಣ ಮಾಡುತ್ತಿದ್ದ ರಾಜ್ ಕುಂದ್ರಾ

  ಅಶ್ಲೀಲ ವಿಡಿಯೋ ನಿರ್ಮಾಣ ಮಾಡುತ್ತಿದ್ದ ರಾಜ್ ಕುಂದ್ರಾ

  ಮಾಡೆಲ್‌ಗಳು, ನಟಿಯರಿಂದ ಅಶ್ಲೀಲ ವಿಡಿಯೋಗಳನ್ನು ಚಿತ್ರಿಸಿಕೊಂಡು, ಹಾಟ್‌ಶಾಟ್ಸ್ ಎಂಬ ಆಪ್‌ ಮೂಲಕ ರಾಜ್ ಕುಂದ್ರಾ ಪ್ರದರ್ಶನ ಮಾಡಿ ಕೋಟ್ಯಂತರ ಹಣ ಗಳಿಸುತ್ತಿದ್ದ ಎಂದು ಮುಂಬೈ ಪೊಲೀಸರು ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಸೇರಿ ಇನ್ನೂ ಕೆಲವರ ಬಂಧನವಾಗಿದೆ. ರಾಜ್ ಕುಂದ್ರಾ ವಿರುದ್ಧವಾಗಿ ಶೆರ್ಲಿನ್ ಚೋಪ್ರಾ, ಪೂನಂ ಪಾಂಡೆ ಸೇರಿ ಇನ್ನೂ ಕೆಲವು ನಟಿಯರು ಹೇಳಿಕೆಗಳನ್ನು ನೀಡಿದ್ದಾರೆ. ಕೆಲವರು ರಾಜ್ ಕುಂದ್ರಾಗೆ ಬೆಂಬಲವನ್ನೂ ನೀಡಿದ್ದಾರೆ.

  ರಾಜ್ ಕುಂದ್ರಾ ವಿರುದ್ಧ ಅಗತ್ಯ ಸಾಕ್ಷ್ಯಗಳಿವೆ ಎಂದಿದ್ದ ಮುಂಬೈ ಪೊಲೀಸ್

  ರಾಜ್ ಕುಂದ್ರಾ ವಿರುದ್ಧ ಅಗತ್ಯ ಸಾಕ್ಷ್ಯಗಳಿವೆ ಎಂದಿದ್ದ ಮುಂಬೈ ಪೊಲೀಸ್

  ಇದೇ ತಿಂಗಳ ಆರಂಭದಲ್ಲಿ ಮುಂಬೈ ಪೊಲೀಸರಿಗೆ ಮಾಡೆಲ್ ಒಬ್ಬರು ನೀಡಿದ ತನಿಖೆ ನಡೆಸಿದಾಗ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ. ಫೆಬ್ರವರಿ ತಿಂಗಳಲ್ಲಿ ಮುಂಬೈ ಪೊಲೀಸರು ಅಶ್ಲೀಲ ವಿಡಿಯೋ ನಿರ್ಮಾಣ ಸೆಟ್ ಒಂದಕ್ಕೆ ದಾಳಿ ನಡೆಸಿ ಹಲವರನ್ನು ಬಂಧಿಸಿದ್ದರು. ಆ ಸೆಟ್‌ನಲ್ಲಿ ಚಿತ್ರೀಕರಣವಾಗುತ್ತಿದ್ದ ಅಶ್ಲೀಲ ವಿಡಿಯೋ ಅನ್ನು ರಾಜ್ ಕುಂದ್ರಾರೆ ನಿರ್ಮಾಣ ಮಾಡಿದ್ದರು ಎಂಬುದು ವಿಚಾರಣೆ ವೇಳೆ ಮುಂಬೈ ಪೊಲೀಸರಿಗೆ ಗೊತ್ತಾಗಿದೆ. ರಾಜ್ ಕುಂದ್ರಾ ಬಂಧನದ ಬಳಿಕ ಹೇಳಿಕೆ ಬಿಡುಗಡೆ ಮಾಡಿದ್ದ ಮುಂಬೈ ಪೊಲೀಸರು ರಾಜ್ ಕುಂದ್ರಾ ವಿರುದ್ಧ ಅಗತ್ಯ ಸಾಕ್ಷಿಗಳಿವೆ ಎಂದಿದ್ದರು.

  English summary
  Shilpa Shetty's husband Raj Kundra's bail plea hearing postponed to August 20. Raj Kundra arrested by Mumbai police on July 19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X