For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಂದ್ರ ಅಶ್ಲೀಲ ವಿಡಿಯೋ ದಂಧೆ: ತಪ್ಪೊಪ್ಪಿಕೊಳ್ಳುವಂತೆ ಶಿಲ್ಪಾ ಶೆಟ್ಟಿಗೆ ಶೆರ್ಲಿನ್ ಒತ್ತಾಯ

  |

  ಪತಿ, ಉದ್ಯಮಿ ರಾಜ್ ​ಕುಂದ್ರಾ ಬ್ಲೂ ಫಿಲ್ಮ್ ದಂಧೆ ಪ್ರಕರಣದಿಂದ ಶಿಲ್ಪಾ ಶೆಟ್ಟಿ ಮುಜುಗರ ಅನುಭವಿಸುವಂತಾಗಿದೆ. ಈ ವಿಚಾರವಾಗಿ ಶಿಲ್ಪಾ ಶೆಟ್ಟಿಯನ್ನು ಟ್ರೋಲ್ ಮಾಡಲಾಗುತ್ತಿದೆ. ಈಗ ನಟಿ ಶೆರ್ಲಿನ್​ ಚೋಪ್ರಾ ಅವರು ಶಿಲ್ಪಾಗೆ ನೇರ ಸವಾಲು ಎಸೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಶೆರ್ಲಿನ್ ಚೋಪ್ರಾ, ಶಿಲ್ಪಾ ಶೆಟ್ಟಿಯ ಮಾತುಗಳಿಗೆ ತಿರುಗೇಟು ನೀಡಿದ್ದಾರೆ. 'ಹಾಯ್​ ಶಿಲ್ಪಾ ದೀದಿ.. ಸಂತ್ರಸ್ತ ಯುವತಿಯರ ಬಗ್ಗೆ ಸ್ವಲ್ಪ ಕರುಣೆ ತೋರಿಸಿ ಅಂತ ಮನವಿ ಮಾಡಿಕೊಳ್ಳುತ್ತೇನೆ. ತಪ್ಪು ಒಪ್ಪಿಕೊಳ್ಳುವುದರಿಂದ ಯಾರೂ ಚಿಕ್ಕವರಾಗುವುದಿಲ್ಲ' ಎಂಬ ಕ್ಯಾಪ್ಷನ್​ನೊಂದಿಗೆ ಶೆರ್ಲಿನ್​ ಈ ವಿಡಿಯೋ ಪೋಸ್ಟ್​ ಮಾಡಿದ್ದಾರೆ.

  'ಸೂಪರ್​ ಡ್ಯಾನ್ಸರ್​ 4' ರಿಯಾಲಿಟಿ ಶೋನಲ್ಲಿ ಜಡ್ಜ್​ ಆಗಿರುವ ಶಿಲ್ಪಾ ಶೆಟ್ಟಿ ಇತ್ತೀಚಿಗಷ್ಟೆ ರಾಣಿ ಲಕ್ಷ್ಮೀ ಬಾಯಿ ಬಗ್ಗೆ ಇತ್ತೀಚೆಗೆ ಮಾತನಾಡಿದ್ದರು. ಸಮಸ್ಯೆಗಳನ್ನು ಎದುರಿಸಿ ಬದುಕುತ್ತಿರುವ ಮಹಿಳೆಯರ ಬಗ್ಗೆ ತಮಗೆ ತುಂಬ ಗೌರವ ಇದೆ ಎಂದು ಅವರು ಹೇಳಿದ್ದರು. ಅದೇ ಮಾತನ್ನು ಇಟ್ಟುಕೊಂಡು ಈಗ ಶೆರ್ಲಿನ್​ ಚೋಪ್ರಾ, ಶಿಲ್ಪಾ ಶೆಟ್ಟಿಯನ್ನು ಟೀಕಿಸಿದ್ದಾರೆ. "ಅಶ್ಲೀಲ ವಿಡಿಯೋ ದಂಧೆಯ ವಿರುದ್ಧ ಬೇರೆ ಬೇರೆ ಪೊಲೀಸ್​ ಠಾಣೆಗಳಿಗೆ ತೆರಳಿ ಧೈರ್ಯವಾಗಿ ತಮ್ಮ ಹೇಳಿಕೆಗಳನ್ನು ನೀಡುತ್ತಿರುವ ಯುವತಿಯರು ಕೂಡ ನೀವು ಹೇಳುವಂತೆ ಸಮಸ್ಯೆಗಳನ್ನು ಎದುರಿಸಿ ಬದುಕುತ್ತಿರುವ ಮಹಿಳೆಯರ ಸಾಲಿಗೆ ಸೇರುತ್ತಾರಾ?" ಎಂದು ಶೆರ್ಲಿನ್​ ಪ್ರಶ್ನಿಸಿದ್ದಾರೆ.

  "ಇತ್ತೀಚಿನ ದಿನಗಳಲ್ಲಿ ನಾನು ಏನೇ ಪೋಸ್ಟ್​ ಮಾಡಿದರೂ ನಿಮ್ಮ ಅಭಿಮಾನಿಗಳು ಬಂದು ನನ್ನನ್ನು ಟ್ರೋಲ್​ ಮಾಡುತ್ತಾರೆ. ನಾನು ಹಾಕುವ ಫೋಟೋಗಳೆಲ್ಲವೂ ಫೋಟೋಶಾಪ್​ ಮಾಡಿರುವಂಥವು ಎನ್ನುತ್ತಾರೆ. ಆದರೆ ಈ ಪ್ರಕರಣವನ್ನು ತನಿಖೆ ಮಾಡುತ್ತಿರುವ ಅಧಿಕಾರಿಗಳು ನನಗಿಂತ, ನಿಮಗಿಂತ ಹಾಗೂ ನಿಮ್ಮ ಅಭಿಮಾನಿಗಳಿಗಿಂತಲೂ ಬುದ್ಧಿವಂತರು. ಸತ್ಯ ಹೇಗೆ ಹೊರತೆಗೆಯಬೇಕು ಎಂಬುದು ಅವರಿಗೆ ಗೊತ್ತು" ಎಂದು ಶೆರ್ಲಿನ್​ ಹೇಳಿದ್ದಾರೆ.

  ರಾಜ್​ ಕುಂದ್ರಾ ಅಶ್ಲೀಲ ವಿಡಿಯೋ ದಂಧೆ ಪ್ರಕರಣದಲ್ಲಿ ನಟಿ ಶೆರ್ಲಿನ್ ಚೋಪ್ರಾ ಹೆಸರು​ ಕೂಡ ಕೇಳಿಬಂದಿದೆ. ಶರ್ಲಿನ್ ಮೇಲು ಆರೋಪ ಇದ್ದು, ರಾಜ್ ಕುಂದ್ರ ವಿರುದ್ಧವೇತಿರುಗಿ ಬಿದ್ದಿದ್ದಾರೆ. ತಮ್ನನ್ನು ರಾಜ್​ ಕುಂದ್ರಾ ಅವರು ಯಾಮಾರಿಸಿ ಈ ಕೆಲಸಕ್ಕೆ ತಳ್ಳಿದರು ಎಂದು ಶೆರ್ಲಿನ್​ ದೂರಿಸಿದ್ದಾರೆ. ರಾಜ್​ ಕುಂದ್ರಾ ವಿರುದ್ಧ ಅವರು ಹಲವು ಕೇಸ್​ಗಳನ್ನು ದಾಖಲಿಸಿದ್ದಾರೆ.

  ಇತ್ತೀಚಿಗಷ್ಟೆ ಶರ್ಲಿನ್ ಚೋಪ್ರಾ ಮೊದಲ ದಿನ ಕುಂದ್ರಾ ಸಂಸ್ಥೆಯ ಜೊತೆ ಶಾರ್ಟ್‌ ವಿಡಿಯೋ ಮಾಡುವ ಸಂದರ್ಭದಲ್ಲಿ ತೆಗೆದ ಫೋಟೋ ಎಂದು ಹೇಳಿ ಹಳೆಯ ಫೋಟೋ ಶೇರ್ ಮಾಡಿ ಅಚ್ಚರಿ ಮೂಡಿಸಿದ್ದರು. ಫೋಟ ತೆಗೆದ ದಿನಾಂಕ ಸಮೇತ ಪೋಸ್ಟ್ ಹಾಕಿದ್ದರು. ''ಅದು 2019 ಮಾರ್ಚ್ 29 ಆಗಿತ್ತು. ಆರ್ಮ್ಸ್ ಪ್ರೈಮ್ ಸಂಸ್ಥೆ ಆಯೋಜಿಸಿದ್ದ 'ದಿ ಶೆರ್ಲಿನ್ ಚೋಪ್ರಾ ಆಪ್‌ನ ಮೊದಲ ಕಂಟೆಂಟ್ ವಿಡಿಯೋ ಚಿತ್ರೀಕರಣ ನಡೆಯುತ್ತಿತ್ತು. ಅಲ್ಲಿಯವರೆಗೂ ನಾನು ಯಾವುದೇ ಆಪ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರಲಿಲ್ಲ. ಇದು ನನಗೆ ಹೊಸ ಅನುಭವ ಆಗಿತ್ತು. ಅಲ್ಲಿ ಭರವಸೆ ಮತ್ತು ಉತ್ಸಾಹದ ವಾತಾವರಣ ಮನೆ ಮಾಡಿತ್ತು' ಎಂದು ಪೋಸ್ಟ್ ಹಾಕಿದ್ದರು.

  ಈ ಫೋಟೋದಲ್ಲಿ ಒಂದು ಕಡೆ ರಾಜ್ ಕುಂದ್ರಾ ಮತ್ತೊಂದೆಡೆ ವ್ಯಕ್ತಿಯೊಬ್ಬ ಕೂತಿದ್ದು, ನಡುವಲ್ಲಿ ಶೆರ್ಲಿನ್ ಚೋಪ್ರಾ ಕುಳಿತುಕೊಂಡಿದ್ದಾರೆ. ನಟಿ ಶೆರ್ಲಿನ್ ಚೋಪ್ರಾ ಸೆಮಿ ಬಿಕಿನಿ ತೊಟ್ಟಿದ್ದಾರೆ. ಬಹಳಷ್ಟು ಜನರು ಈ ಫೋಟೋ ಫೇಕ್ ಎಂದು ಹೇಳುತ್ತಿದ್ದು, ಕುಂದ್ರಾ ಅವರನ್ನು ಎಡಿಟ್ ಮಾಡಲಾಗಿದೆ ಎಂದು ಕಾಮೆಂಟ್ ಮಾಡಿದ್ದರು.

  ಸದ್ಯ ಶೆರ್ಲಿನ್​ ಹಂಚಿಕೊಂಡಿರುವ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಕೆಲವರು ಶೆರ್ಲಿನ್​ಗೆ ಬೆಂಬಲ ಸೂಚಿಸಿದ್ದಾರೆ. ಮತ್ತೆ ಕೆಲವರು ಶಿಲ್ಪಾ ಶೆಟ್ಟಿ ಪರವಾಗಿ ಕಮೆಂಟ್​ ಮಾಡುತ್ತಿದ್ದಾರೆ.

  English summary
  Raj Kundra pornography case: Sherlyn Chopra requests Shilpa Shetty Accept her mistakes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X