»   » ರಾಜೇಶ್ ಖನ್ನಾರನ್ನು ಡಿಂಪಲ್ ದೂರ ಮಾಡಿದ್ಯಾಕೆ?

ರಾಜೇಶ್ ಖನ್ನಾರನ್ನು ಡಿಂಪಲ್ ದೂರ ಮಾಡಿದ್ಯಾಕೆ?

Posted By:
Subscribe to Filmibeat Kannada

ಇತ್ತೀಚಿಗಷ್ಟೇ ನಮ್ಮನ್ನಗಲಿರುವ ಬಾಲಿವುಡ್ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನಾ, ಡಿಂಪಲ್ ಕಪಾಡಿಯಾರನ್ನು 1973 ರಲ್ಲಿ ಮದುವೆಯಾಗಿದ್ದರು. ಆಗಷ್ಟೇ 16 ನೇ ವಯಸ್ಸಿಗೆ ಕಾಲಿಟ್ಟಿದ್ದ ಡಿಂಪಲ್ ಕಪಾಡಿಯಾ ತಮಗಿಂತ 15 ವರ್ಷ ದೊಡ್ಡವರಾದ ರಾಜೇಶ್ ಖನ್ನಾರನ್ನು ಮದುವೆಯಾಗಿದ್ದರು. ಆಗ ಅವರಿಬ್ಬರ ಮದುವೆಗೆ ವಯಸ್ಸು ಅಡ್ಡ ಬಂದಿರಲಿಲ್ಲ.

ಮದುವೆಗೆ ಮುನ್ನ ಆರು ತಿಂಗಳ ಹಿಂದೆ ಡಿಂಪಲ್ ನಟಿಸಿದ್ದ ಮೊದಲ ಚಿತ್ರ ಬಾಬ್ಬಿ ಬಿಡುಗಡೆಯಾಗಿತ್ತು. ನಂತರ ಮದುವೆಯಾದ ಅವರಿಬ್ಬರಲ್ಲಿ ಅದೇನಾಯ್ತೋ ಏನೋ ಎಂಬಂತೆ ಮದುವೆ ಮುರಿದುಬಿತ್ತು, ಹೆಚ್ಚು ದಿನ ದಂಪತಿಗಳು ಒಟ್ಟಾಗಿ ಬಾಳಲಿಲ್ಲ. ಡಿಂಪಲ್ ಕಪಾಡಿಯಾ ಚಿತ್ರಗಳಲ್ಲಿ ನಟಿಸಲು ರಾಜೇಶ್ ಖನ್ನಾ ಒಪ್ಪಿಗೆ ನೀಡದಿರುವುದೇ ಅವರಿಬ್ಬರ ಸಂಬಂಧ ಹದಗೆಡಲು ಕಾರಣ ಎಂಬ ಸುದ್ದಿ ಆಗ ಸ್ಫೋಟಿಸಿತ್ತು.

ಆದರೆ ಬಲ್ಲ ಕೆಲವರ ಪ್ರಕಾರ, ಡಿಂಪಲ್ ಸಿನಿಮಾ ನಟನೆ ಬಿಟ್ಟು ಕುಟುಂಬಕ್ಕಾಗಿ ತಮ್ಮನ್ನು ಅರ್ಪಿಸಿಕೊಳ್ಳಲು ನಿರ್ಧರಿಸಿದ್ದರು. ಈ ದಿಕ್ಕಿನಲ್ಲಿ ಕಾರ್ಯಪ್ರವೃತ್ತರಾಗಿದ್ದ ಅವರು ತಮ್ಮ ಇಬ್ಬರು ಮಕ್ಕಳಾದ ಟ್ವಿಂಕಲ್ ಖನ್ನಾ ಹಾಗೂ ರಿಂಕಿ ಖನ್ನಾ ಪಾಲನೆ, ಪೋಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಷ್ಟರಲ್ಲಿ ಬರಸಿಡಿಲಿನಂತೆ ಹೊಸ ಗಾಸಿಪ್ ಅವರ ಕಿವಿಗೆ ಅಪ್ಪಳಿಸಿತು.

ರಾಜೇಶ್ ಖನ್ನಾ ಟೀನಾ ಮುನಿಮ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿಗೆ ಡಿಂಪಲ್ ಕಪಾಡಿಯಾ ಬೆಚ್ಚಿಬಿದ್ದರು. ಅವರಿಬ್ಬರ ಪ್ರೀತಿಗೆ ಈ ಹೊಸ ಸಂಬಂಧವೇ ಹುಳಿ ಹಿಂಡಿದ್ದು. ಒಟ್ಟಿನಲ್ಲಿ ನಂತರ ಅವರಿಬ್ಬರ ನಡುವೆ ಬಿರುಕು ಮೂಡಿದ್ದು ಮಾತ್ರ ಸತ್ಯ. ರಾಜೇಶ್ ಖನ್ನಾ ಪತ್ನಿಗೆ ನಿಷ್ಠರಾಗಿದ್ದರೆ ಹೀಗಾಗುತ್ತಿರಲಿಲ್ಲ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರು ಆಗಲೂ ಈಗಲೂ ಹೇಳುವ ಮಾತು.

ಆದರೆ ಒಟ್ಟಿಗಿದ್ದಾಗ ತಾವೆಷ್ಟು ಪ್ರೀತಿಸಿದ್ದೇವೆ ಎಂಬುದನ್ನು ಈ ಜೋಡಿ ಬೇರೆ ತಾರಾಜೋಡಿಗಳಂತೆ ರಹಸ್ಯವಾಗಿಟ್ಟಿಲ್ಲ. ತಾವಿಬ್ಬರೂ ಒಂದೇ ಟೂತ್ ಬ್ರಶ್ ಉಪಯೋಗಿಸುತ್ತಿದ್ದೆವು ಎಂದಿತ್ತು ಈ ಜೋಡಿ. ಆದರೆ ಟೀನಾ ಜೊತೆಗಿನ ಸಂಬಂಧವನ್ನೂ ಬಹುಬೇಗ ಮುರಿದುಕೊಂಡರು ರಾಜೇಶ್ ಖನ್ನಾ. ನಂತರ ಇತ್ತೀಚಿಗಷ್ಟೇ ಮತ್ತೆ ಡಿಂಪಲ್ ಮತ್ತು ರಾಜೇಶ್ ಖನ್ನಾ ಸಂಬಂಧ ಚಿಗುರೊಡೆದಿತ್ತು. ಆಸ್ಪತ್ರೆಗೆ ಡಿಂಪಲ್ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದರು. (ಏಜೆನ್ಸೀಸ್)

English summary
Rajesh Khanna married actress Dimple Kapadia in March 1973. But the marriage did not last long and the couple started living separately.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada