For Quick Alerts
  ALLOW NOTIFICATIONS  
  For Daily Alerts

  ಐಶ್ವರ್ಯ ರೈ ಜೊತೆ ನಟಿಸಲು ಈ ನಟ 'ನರ್ವಸ್' ಆಗಿದ್ದಾರಂತೆ.!

  By Bharath Kumar
  |

  ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅವರ ಜೊತೆ ಸಿನಿಮಾ ಮಾಡಬೇಕು ಎನ್ನುವುದು ಬಹುತೇಕ ಯುವನಟರ ಬಹುದೊಡ್ಡ ಆಸೆ. ಇಂತಹ ಬಯಕೆ ಈಡೇರುವುದು ಬಹಳ ಕಡಿಮೆ ನಟರಿಗಷ್ಟೇ. ಇದೀಗ, ಇಂತಹ ಅವಕಾಶ ಯುವ ನಟ ರಾಜ್ ಕುಮಾರ್ ರಾವ್ ಗೆ ಸಿಕ್ಕಿದೆ.

  ಐಶ್ವರ್ಯ ರೈ ಬಚ್ಚನ್ ಅಭಿನಯಿಸಲಿರುವ ಮುಂದಿನ ಸಿನಿಮಾ 'ಫೆನ್ನಿ ಖಾನ್' ಸಿನಿಮಾದಲ್ಲಿ ರಾಜ್ ಕುಮಾರ್ ನಟಿಸುತ್ತಿದ್ದು, ಐಶ್ ಜೊತೆ ನಟಿಸಲು ನರ್ವಸ್ ಆಗಿದ್ದಾರಂತೆ.

  ರಾಜ್ ಕುಮಾರ್ ರಾವ್ ಅಭಿನಯದ 'ಶಾದಿ ಮೈನೆ ಜರೂರ್ ಆನಾ' (Shaadi Mein Zaroor Aana) ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಈ ಚಿತ್ರದ ಸುದ್ಧಿಗೋಷ್ಠಿಯಲ್ಲಿ ಐಶ್ ಬಗ್ಗೆ ಮಾತನಾಡಿದ್ದಾರೆ.

  ''ವಿಶ್ವ ಸುಂದರಿಯ ಐಶ್ವರ್ಯ ರೈ ಅವರ ಜೊತೆ ಅಭಿನಯಿಸಲು ಕಾತುರದಿಂದ ಕಾಯುತ್ತಿದ್ದೇನೆ. ನನ್ನ ಮತ್ತು ಅವರ ಮಧ್ಯೆ ಲವ್ ಆಗಿರುತ್ತೆ, ಹೀಗಾಗಿ, ಅವರ ಜೊತೆ ರೊಮ್ಯಾನ್ಸ್ ದೃಶ್ಯಗಳಿದ್ದು, ನಾನು ತುಂಬ ನರ್ವಸ್ ಆಗಿದ್ದೀನಿ'' ಎಂದಿದ್ದಾರೆ.

  ಅಂದ್ಹಾಗೆ, 'ಫೆನ್ನಿಖಾನ್' ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಅನಿಲ್ ಕಪೂರ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅತುಲ್ ಮಂಜರ್ಕರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  English summary
  Actor Rajkummar Rao has said he is nervous about romancing the "world's most beautiful woman" Aishwarya Rai Bachchan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X