For Quick Alerts
  ALLOW NOTIFICATIONS  
  For Daily Alerts

  ಮದುವೆಯ ಬೆನ್ನಲ್ಲೇ ಬಂಧನಕ್ಕೊಳಗಾದ ರಾಖಿ ಸಾವಂತ್; ಕಾರಣ ಈ ನಟಿ!

  |

  ಬಾಲಿವುಡ್‌ನಲ್ಲಿ ವಿವಾದ ಮಾಡಿಕೊಳ್ಳುವ ಕಲಾವಿದರಿಗೇನೂ ಕಡಿಮೆಯಿಲ್ಲ. ಒಂದು ಕಾಲದಲ್ಲಿ ಸಿನಿ ರಸಿಕರ ಫೇವರಿಟ್ ಆಗಿದ್ದವರೇ ಇಂದು ವಿವಾದಗಳ ಕಿಂಗ್ ಅಥವಾ ಕ್ವೀನ್ ಎನಿಸಿಕೊಂಡಿದ್ದಾರೆ. ಈ ಸಾಲಿಗೆ ಸೇರುವ ನಟಿಯೇ ರಾಖಿ ಸಾವಂತ್. ಹೌದು, ಸಿನಿಮಾ ನಟಿಯಾಗಿ ಹಾಗೂ ಬಿಗ್ ಬಾಸ್ ಸ್ಪರ್ಧಿಯಾಗಿ ಯಶಸ್ಸು ಗಳಿಸಿದ್ದ ರಾಖಿ ಸಾವಂತ್ ಸದ್ಯ ಒಂದಿಲ್ಲೊಂದು ಕಾರಣದಿಂದಾಗಿ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇದ್ದಾರೆ.

  ಇತ್ತೀಚೆಗಷ್ಟೆ ಆದಿಲ್ ಖಾನ್ ಜತೆ ಪ್ರೀತಿ ಪ್ರೇಮ ಎಂಬ ವಿಷಯದ ಕುರಿತಾಗಿ ಭಾರೀ ಸುದ್ದಿಗೀಡಾಗಿ ವಿವಾದವನ್ನೂ ಸಹ ಮಾಡಿಕೊಂಡಿದ್ದ ರಾಖಿ ಸಾವಂತ್ ಬಳಿಕ ಆತನನ್ನೇ ಮದುವೆಯಾಗಿರುವುದಾಗಿ ಘೋಷಣೆ ಮಾಡುವ ಮೂಲಕ ಆಶ್ಚರ್ಯ ಹುಟ್ಟಿಸಿದ್ದರು. ಇನ್ನು ನಟಿಯೇನೋ ನನಗೆ ಮದುವೆಯಾಗಿದೆ ಎಂದರೆ ಆದಿಲ್ ಮಾತ್ರ ಈ ಕುರಿತು ಮೌನವಹಿಸಿದ್ದ. ಇದರಿಂಹ ರಾಖಿ ಸಾವಂತ್ ತನಗೆ ಮೋಸವಾಗಿದೆ ಎಂದು ರಂಪಾಟವನ್ನೂ ಸಹ ಮಾಡಿದ್ದಳು.

  ಹೀಗೆ ಸಾಲು ಸಾಲು ವಿವಾದಗಳಿಗೆ ಕಾರಣವಾಗಿದ್ದ ಈ ಜೋಡಿಯ ಮದುವೆ ಗಲಾಟೆಗೆ ಆದಿಲ್ ಖಾನ್ ಎರಡು ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವುದರ ಮೂಲಕ ಖಚಿತಪಡಿಸಿದ್ದರು. ಇಬ್ಬರೂ ಸಹ ಮದುವೆಯಾಗಿರುವುದು ನಿಜ ಎಂದು ಒಪ್ಪಿಕೊಂಡ ಆದಿಲ್ ರಾಖಿ ಸಾವಂತ್‌ಗೂ ಶುಭ ಕೋರಿದ್ದರು. ಹೀಗೆ ಇಬ್ಬರ ವಿವಾಹದ ಗಲಾಟೆ ಸುಖಾಂತ್ಯ ಕಂಡಿತು ಎನ್ನುವಾಗಲೇ ಮತ್ತೊಂದು ವಿವಾದ ಹಾಗೂ ಸಂಕಷ್ಟಕ್ಕೆ ರಾಖಿ ಸಾವಂತ್ ಒಳಗಾಗಿದ್ದಾರೆ. ಹೌದು, ರಾಖಿ ಸಾವಂತ್ ಮುಂಬೈ ಪೊಲೀಸರ ಅತಿಥಿಯಾಗಿದ್ದಾರೆ.

  ರಾಖಿ ಸಾವಂತ್ ಬಂಧನವನ್ನು ಖಚಿತಪಡಿಸಿದ ಶೆರ್ಲಿನ್

  ರಾಖಿ ಸಾವಂತ್ ಬಂಧನವನ್ನು ಖಚಿತಪಡಿಸಿದ ಶೆರ್ಲಿನ್

  ರಾಖಿ ಸಾವಂತ್ ಅವರು ಬಂಧನಕ್ಕೆ ಒಳಗಾಗಲು ಕಾರಣ ಮತ್ತೋರ್ವ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ. ಹೌದು, ನಟಿ ಶೆರ್ಲಿನ್ ಚೋಪ್ರಾ ನೀಡಿದ್ದ ಮಾನನಷ್ಟ ಮೊಕದ್ದಮೆ ಮೇಲೆ ರಾಖಿ ಸಾವಂತ್ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ತನ್ನ ಟ್ವಿಟರ್ ಖಾತೆಯಲ್ಲಿ ಈ ಕುರಿತು ಟ್ವೀಟ್ ಮಾಡಿರುವ ಶೆರ್ಲಿನ್ ಚೋಪ್ರಾ 'ಬ್ರೇಕಿಂಗ್ ನ್ಯೂಸ್. ಮುಂಬೈನ ಅಂಬೊಲಿ ಪೊಲೀಸರು ಎಫ್‌ಐಆರ್ 883/2022 ಅಡಿಯಲ್ಲಿ ರಾಖಿ ಸಾವಂತ್‌ರನ್ನು ಬಂಧಿಸಿದ್ದಾರೆ. ನಿನ್ನೆ ಮುಂಬೈ ಸೆಷನ್ ಕೋರ್ಟ್ ರಾಖಿ ಸಾವಂತ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ 1870/2022 ಅನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ' ಎಂದು ಬರೆದುಕೊಂಡಿದ್ದಾರೆ.

  ಇಬ್ಬರ ನಡುವಿನ ಕಿತ್ತಾಟವೇನು?

  ಇಬ್ಬರ ನಡುವಿನ ಕಿತ್ತಾಟವೇನು?

  ಇನ್ನು ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಮೀಟೂ ಆರೋಪಿ ಸಾಜಿದ್ ಖಾನ್ ವಿರುದ್ಧ ನಟಿ ಶೆರ್ಲಿನ್ ಚೋಪ್ರಾ ಕಿಡಿಕಾರಿದ್ದರು. ಈ ವಿಷಯಕ್ಕೆ ತಲೆ ಹಾಕಿದ್ದ ನಟಿ ರಾಖಿ ಸಾವಂತ್ ಶೆರ್ಲಿನ್ ಚೋಪ್ರಾ ವಿರುದ್ಧವೇ ಮಾತನಾಡಿದ್ದಳು. ಇನ್ನು ಶೆರ್ಲಿನ್ ಚೋಪ್ರಾ ನೀಡಿದ್ದ ಸಲ್ಮಾನ್ ಖಾನ್ ನಿರ್ಮಾಪಕರಿಗೆ ರಕ್ಷಣೆ ನೀಡುತ್ತಿದ್ದಾರೆ ಎಂಬ ಹೇಳಿಕೆಗೂ ಸಹ ರಾಖಿ ಸಾವಂತ್ ಕಿಡಿಕಾರಿದ್ದಳು. ಇನ್ನು ಇಷ್ಟೆಲ್ಲಾ ಗಲಾಟೆಯಾದ ಬಳಿಕ ರಾಖಿ ಸಾವಂತ್ ತನ್ನ ಕೆಲ ಆಕ್ಷೇಪಾರ್ಹ ಫೋಟೊ ಹಾಗೂ ವಿಡಿಯೊಗಳನ್ನು ಹಂಚಿಕೊಂಡಿದ್ದಾಳೆ ಎಂದು ಶೆರ್ಲಿನ್ ಚೋಪ್ರಾ ದೂರು ನೀಡಿದ್ದರು.

  ಹೆಸರು ಬದಲಿಸಿಕೊಂಡಿದ್ದ ರಾಖಿ ಸಾವಂತ್

  ಹೆಸರು ಬದಲಿಸಿಕೊಂಡಿದ್ದ ರಾಖಿ ಸಾವಂತ್

  ಕೆಲ ದಿನಗಳ ಹಿಂದಷ್ಟೇ ನಟಿ ರಾಖಿ ಸಾವಂತ್ ತನ್ನ ಹೆಸರನ್ನು ಫಾತಿಮಾ ಎಂದು ಬದಲಿಸಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ಇಬ್ಬರೂ ಸಹ ವಿವಾಹವಾಗಿರುವ ವರದಿಯೊಂದರಲ್ಲಿ ರಾಖಿ ಸಾವಂತ್ ಹೆಸರು ಫಾತಿಮಾ ದುರ್ರಾನಿ ಎಂದು ಬರೆಯಲಾಗಿತ್ತು ಎಂದು ಸುದ್ದಿಯಾಗಿತ್ತು. ಇನ್ನು ರಾಖಿ ಸಾವಂತ್ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಹ ಈ ಸುದ್ದಿಯನ್ನು ಶೇರ್ ಮಾಡಿದ್ದಾರೆ.

  English summary
  Rakhi Sawant arrested by Mumbai Police says Sherlyn Chopra via twitter. Take a look
  Thursday, January 19, 2023, 18:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X