For Quick Alerts
  ALLOW NOTIFICATIONS  
  For Daily Alerts

  ಜನತೆಗೆ ಸಹಾಯ ಮಾಡಿ, ಮೊದಲು ಆಕ್ಸಿಜನ್ ವಿತರಿಸಿ; ಕಂಗನಾಗೆ ತಿವಿದ ರಾಖಿ ಸಾವಂತ್

  |

  ದೇಶದಲ್ಲಿ ಮಹಾಮಾರಿ ಕೊರೊನಾ ತಾಂಡವವಾಡುತ್ತಿದೆ. ಸಾವಿರಾರು ಮಂದಿ ಕೊರೊನಾಗೆ ಬಲಿಯಾಗುತ್ತಿದ್ದಾರೆ. ದೇಶದಲ್ಲಿ ಜನ ಆಸ್ಪತ್ರೆ, ಬೆಡ್, ಆಕ್ಸಿಜನ್ ಅಂತ ನರಳಾಡುತ್ತಿದ್ದಾರೆ. ಕೆಲವರು ಇಂಥ ಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸಿದ್ದಾರೆ. ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.

  Recommended Video

  ನಿಮ್ಮ ಬಳಿ ಇರುವ ಕೋಟಿ-ಕೋಟಿ ಹಣ ಖರ್ಚುಮಾಡಿ ಅಂತ ಕಂಗನಾಗೆ ತಿವಿದ ರಾಖಿ ಸಾವಂತ್ | Filmibeat Kannada

  ಬಾಲಿವುಡ್‌ನ ಅನೇಕ ಮಂದಿ ನೆರವಿಗೆ ಧಾವಿಸಿದ್ದಾರೆ. ಆಕ್ಸಿಜನ್, ಬೆಡ್, ಆಸ್ಪತ್ರೆ ವ್ಯವಸ್ಥೆ ಮಾಡಿಸುವ ಮೂಲಕ ಕಷ್ಟದಲ್ಲಿರುವವರಿಗೆ ನೆರವಾಗುತ್ತಿದೆ. ನಟಿ ಪ್ರಿಯಾಂಕಾ ಚೋಪ್ರಾ, ಸುಷ್ಮಿತಾ ಸೇನ್, ಅಜಯ್ ದೇವಗನ್ ಹೀಗೆ ಇನ್ನು ಸಾಕಷ್ಟು ಬಾಲಿವುಡ್ ಸೆಲೆಬ್ರಿಟಿಗಳು ಹೋರಾಡುತ್ತಿದ್ದಾರೆ.

  ಆಮೀರ್ ಖಾನ್‌ಗೆ ಕೊರೊನಾ ಎಂದು ಕೇಳಿ ಆಘಾತಗೊಂಡ ರಾಖಿ ಸಾವಂತ್ಆಮೀರ್ ಖಾನ್‌ಗೆ ಕೊರೊನಾ ಎಂದು ಕೇಳಿ ಆಘಾತಗೊಂಡ ರಾಖಿ ಸಾವಂತ್

  ಆದರೆ ನಟಿ ಕಂಗನಾ ರಣಾವತ್ ಏನು ಮಾಡುತ್ತಿದ್ದಾರೆ ಎನ್ನುವ ಚರ್ಚೆ ಪ್ರಾರಂಭವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಪೋಸ್ಟ್‌ಗಳನ್ನು ಹಾಕುತ್ತಾ, ವಿವಾದಗಳನ್ನು ಸೃಷ್ಟಿಸಿಕೊಳ್ಳುತ್ತಿರುವ ಕಂಗನಾ, ಎಷ್ಟು ಜನಕ್ಕೆ ಸಹಾಯ ಮಾಡಿದ್ದಾರೆ ಎನ್ನುವ ಪ್ರಶ್ನೆ ಎದ್ದಿದೆ.

  ಈ ಬಗ್ಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಮತ್ತು ನಟಿ, ಕೋಟಿ ಕೋಟಿ ಹಣ ಇರುವ ಕಂಗನಾ ಅಕ್ಸಿಜನ್ ವ್ಯವಸ್ಥೆ ಮಾಡಿಸಲಿ ಎಂದು ಹೇಳಿದ್ದಾರೆ. ಮುಂಬೈನ ಪತ್ರಕರ್ತರು, 'ಕಂಗನಾ ದೇಶದ ಸ್ಥಿತಿ ಸರಿ ಇಲ್ಲ ಎಂದು ಹೇಳಿದ್ದಾರೆ. ಆಕ್ಸಿಜನ್ ಸಿಗುತ್ತಿಲ್ಲ, ಏನು ಹೇಳುತ್ತೀರಿ ಎಂದು ಕೇಳಿದ ಪ್ರಶ್ನೆಗೆ ರಾಖಿ ಧೈರ್ಯವಾಗಿ ಉತ್ತರಿಸಿದ್ದಾರೆ.

  'ಕಂಗನಾ ದಯವಿಟ್ಟು ರಾಷ್ಟ್ರಕ್ಕೆ ಸೇವೆ ಮಾಡಿ. ನಿಮ್ಮ ಬಳಿ ಕೋಟಿ ಕೋಟಿ ಹಣವಿದೆ. ಆಕ್ಸಿಜನ್ ಅನ್ನು ಖರೀದಿಸಿ ದೇಶದ ಜನತೆಗೆ ವಿತರಿಸಿ' ಎಂದು ಹೇಳಿದ್ದಾರೆ. ರಾಖಿ ಸಾವಂತ್ ಇತ್ತೀಚಿಗಷ್ಟೆ ತನ್ನ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಕ್ಯಾನ್ಸರ್‌ನಿಂದ ಬಳಲುತ್ತಿರುವ ತಾಯಿಯ ಚಿಕಿತ್ಸೆ ಮಾಡಿಸಿದ್ದಾರೆ.

  English summary
  Rakhi Sawant asks Kangana Ranaut to help India in procure Oxygen Cylinders.
  Thursday, April 29, 2021, 16:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X