ರಾಖಿ ಸಾವಂತ್ ಗೆ ಬೆದರಿಕೆ ಕರೆಗಳು ಬರ್ತಿವ್ಯಂತೆ.! ಯಾರು ಕಾರಣ.?

ಒಳ್ಳೆಯದ್ದೋ, ಕೆಟ್ಟದ್ದೋ.. ಸದಾ ಸುದ್ದಿಯಲ್ಲಿ ಇರಬೇಕು ಅಂತ ಬಯಸುವಾಕೆ ರಾಖಿ ಸಾವಂತ್. ಅಷ್ಟಿಲ್ದೇ ಆಕೆಗೆ ವಿವಾದಾತ್ಮಕ ನಟಿ ಅಂತ ಕರೀತಾರಾ ಹೇಳಿ.? ಒಂದಲ್ಲಾ ಒಂದು ಕಾಂಟ್ರೋವರ್ಸಿಗಳನ್ನ ಮೈ ಮೇಲೆ ಎಳೆದುಕೊಂಡು ರಂಪ ಮಾಡಿಕೊಳ್ಳುವುದರಲ್ಲಿ ರಾಖಿ ಸಾವಂತ್ ಎತ್ತಿದ ಕೈ.

ನಟ ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಲೈಂಗಿಕ ಕಿರುಕುಳದ ಆರೋಪ ಮಾಡಿದರು. ಈ ವಿಚಾರದಲ್ಲೂ ಮೂಗು ತೂರಿಸಿ ನಾನಾ ಪಾಟೇಕರ್ ಪರವಾಗಿ ಮಾತನಾಡಿ ರಾಖಿ ಸಾವಂತ್ ಬ್ರೇಕಿಂಗ್ ನ್ಯೂಸ್ ಮಾಡಿದರು.

ತನುಶ್ರೀ ದತ್ತಾ ವಿರುದ್ಧವಾಗಿ ಮಾತನಾಡಿದ್ದಕ್ಕೆ ರಾಖಿ ಸಾವಂತ್ ಗೆ ಬೆದರಿಕೆ ಕರೆಗಳು ಬರುತ್ತಿವೆಯಂತೆ. ಇದೇ ಕಾರಣಕ್ಕೆ ಸದ್ಯ ರಾಖಿ ಸಾವಂತ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಪೊಲೀಸ್ ಮೊರೆ ಹೋದ ರಾಖಿ

ಪೊಲೀಸ್ ಮೊರೆ ಹೋದ ರಾಖಿ

ಪದೇ ಪದೇ ಬೆದರಿಕೆ ಕರೆಗಳು ಬರುತ್ತಿರುವ ಕಾರಣ ನಟಿ ರಾಖಿ ಸಾವಂತ್ ಪೊಲೀಸರ ಮೊರೆ ಹೋಗಿದ್ದಾರೆ. ತನುಶ್ರೀ ದತ್ತಾ ಪರವಾಗಿ ಇರುವ ಅನಾಮಧ್ಯೇಯ ವ್ಯಕ್ತಿ ಕರೆ ಮಾಡಿ ನಿಂದಿಸಿದರಿಂದ Oshiwara ಪೊಲೀಸ್ ಸ್ಟೇಷನ್ ನಲ್ಲಿ ರಾಖಿ ಸಾವಂತ್ ದೂರು ದಾಖಲಿಸಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿರುವ ರಾಖಿ

ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿರುವ ರಾಖಿ

''Oshiwara ಪೊಲೀಸ್ ಠಾಣೆಯಲ್ಲಿ ಇಂದು ನಾನು ದೂರು ದಾಖಲಿಸಿರುವೆ. ಕೆಲವು ದಿನಗಳಿಂದ ನನಗೆ ಅನಾಮಿಕ ವ್ಯಕ್ತಿಯಿಂದ ಫೋನ್ ಕರೆಗಳು ಬರುತ್ತಿವೆ. ತನುಶ್ರೀ ದತ್ತಾ ವಿರುದ್ಧವಾಗಿ ಮಾತನಾಡಿದ್ದಕ್ಕೆ ನನ್ನನ್ನು ನಿಂದಿಸುತ್ತಿದ್ದಾರೆ'' ಎಂದು ಇನ್ಸ್ಟಾಗ್ರಾಮ್ ನಲ್ಲಿ ರಾಖಿ ಸಾವಂತ್ ಬರೆದುಕೊಂಡಿದ್ದಾರೆ.

ನಾನಾ ಪಾಟೇಕರ್ ಗೆ ಸಪೋರ್ಟ್ ಮಾಡಿದ್ದ ರಾಖಿ

ನಾನಾ ಪಾಟೇಕರ್ ಗೆ ಸಪೋರ್ಟ್ ಮಾಡಿದ್ದ ರಾಖಿ

''ಸಾಂಗ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳದೇ, ಡ್ರಗ್ಸ್ ತೆಗೆದುಕೊಂಡು ತನುಶ್ರೀ ದತ್ತಾ ಮೂರ್ಛೆ ಹೋಗಿದ್ದರು. ಹೀಗಾಗಿ ತನುಶ್ರೀ ದತ್ತಾ ಬದಲು ಹಾಡಿಗೆ ನಾನು ಹೆಜ್ಜೆ ಹಾಕಿದೆ'' ಎಂದು ಇತ್ತೀಚೆಗಷ್ಟೇ ಪ್ರೆಸ್ ಮೀಟ್ ನಲ್ಲಿ ರಾಖಿ ಸಾವಂತ್ ಹೇಳಿದ್ದರು.

ತನುಶ್ರೀ ಬಿಟ್ಟು ಹೋದ ಜಾಗಕ್ಕೆ ಬಂದ ರಾಖಿ

ತನುಶ್ರೀ ಬಿಟ್ಟು ಹೋದ ಜಾಗಕ್ಕೆ ಬಂದ ರಾಖಿ

ಹಾರ್ನ್ ಓಕೆ ಪ್ಲೀಸ್' ಚಿತ್ರದ ಸೆಟ್ ನಲ್ಲಿ ನಾನಾ ಪಾಟೇಕರ್ ಅಸಭ್ಯವಾಗಿ ವರ್ತಿಸಿದ ಮೇಲೆ ಚಿತ್ರೀಕರಣವನ್ನ ಅರ್ಧಕ್ಕೆ ಬಿಟ್ಟು ತನುಶ್ರೀ ದತ್ತಾ ಹೊರಟು ಹೋದರು. ಆಗ, ತನುಶ್ರೀ ದತ್ತಾ ಬದಲು ಹಾಡಿಗೆ ಡ್ಯಾನ್ಸ್ ಮಾಡಿದವರು ರಾಖಿ ಸಾವಂತ್.

More from Filmibeat

English summary
Bollywood Actress Rakhi Sawant files police complaint after receiving threatening calls.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X