For Quick Alerts
  ALLOW NOTIFICATIONS  
  For Daily Alerts

  ಪಾಕಿಸ್ತಾನದ ಧ್ವಜ ಅಪ್ಪಿಕೊಂಡು ವಿವಾದಕ್ಕೆ ಗುರಿಯಾದ ನಟಿ ರಾಖಿ ಸಾವಂತ್

  |
  ಯಡವಟ್ಟು ಮಾಡಿಕೊಂಡು ಸ್ಪಷ್ಟನೆ ನೀಡಿದ ಬಾಲಿವುಡ್ ನಟಿ..!? | FILMIBEAT KANNADA

  ಬಾಲಿವುಡ ನಟಿ ರಾಖಿ ಸಾವಂತ್ ವಿವಾದದ ಮೂಲಕವೆ ಖ್ಯಾತಿಗಳಿಸಿದವರು. ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿರುವ ರಾಖಿ ಈ ಬಾರಿ ಮತ್ತೊಂದು ವಿವಾದ ಸೃಷ್ಟಿಸಿಕೊಂಡಿದ್ದಾರೆ.

  ಪಾಕಿಸ್ತಾನದ ಧ್ವಜವನ್ನು ಮೈಮೇಲೆ ಹಾಕಿಕೊಂಡು ಪೋಸ್ ನೀಡಿರುವ ರಾಖಿ ಫೋಟೋ ಈಗ ಚಿತ್ರಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೋ ಒಂದು ನದಿ ದಡದಲ್ಲಿ ನಿಂತುಕೊಂಡು ರಾಖಿ ಪಾಕಿಸ್ತಾನದ ಧ್ವಜವನ್ನು ಅಪ್ಪಿಕೊಂಡಿದ್ದಾರೆ. ರೆಡ್ ಮತ್ತು ಗೋಲ್ಡ್ ಬಣ್ಣದ ಹಾಟ್ ಹಾಟ್ ಕಾಸ್ಟ್ಯೂಮ್ ಧರಿಸಿರುವ ರಾಖಿ ಇಷ್ಟು ಸಾಲದಕ್ಕೆ ಪಾಕಿಸ್ತಾನಿ ಧ್ವಜವನ್ನು ಮೈಮೇಲೆ ಹಾಕಿಕೊಂಡು ವೈಯ್ಯಾರ ಮಾಡಿದ್ದಾರೆ.

  ಮದುವೆಗಾಗಿ ಕನ್ಯತ್ವ ಪರೀಕ್ಷೆಯ ಪ್ರಮಾಣಪತ್ರ ಮಾಡಿಸಿದ ರಾಖಿ ಸಾವಂತ್

  ಈ ಪೋಟೋವನ್ನು ಇನ್ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಹಾಕುತ್ತಿದಂತೆ ತರಹೇವಾರಿ ಕಮೆಂಟ್ಸ್ ಹರಿದುಬಂದಿವೆ. ವೈರಲ್ ಆಗಿರುವ ರಾಖಿಯ ಹೊಸ ಅವತಾರ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದಂತೆ ಈ ಫೋಟೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

  ರಾಖಿ ಹೀಗೆ ಮಾಡಲು ಕಾರಣ ಸಿನಿಮಾವಂತೆ. ರಾಖಿ ಅಭಿನಯದ ಹೊಸ ಸಿನಿಮಾದ ದೃಶ್ಯವೊಂದರ ಫೊಟೋವನ್ನು ಹಂಚಿಕೊಂಡಿದ್ದಾರೆ. 'ಧರ 370' ಎನ್ನುವ ಸಿನಿಮಾದಲ್ಲಿ ರಾಖಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಶ್ಮಿರಿ ಪಂಡಿತರ ಬಗ್ಗೆ ಇರುವ ಸಿನಿಮಾ ಇದಾಗಿದೆಯಂತೆ. ಈ ಚಿತ್ರದಲ್ಲಿ ರಾಖಿ ಪಾಕಿಸ್ತಾನಿ ಯುವತಿಯಾಗಿ ಮಕ್ಕಳನ್ನು ಜಿಹಾದಿಯಾಗಿ ಬದಲಾಯಿಸುವ ಸಂಘಟನೆಗಳ ಬಗ್ಗೆ ಬಹಿರಂಗ ಪಡಿಸುವ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರಂತೆ ರಾಖಿ.

  ಸಿನಿಮಾ ಆದ್ರು ಪಾಕಿಸ್ತಾನಿ ಧ್ವಜ ಅಪ್ಪಿಕೊಂಡಿರುವುದು ಸರಿಯಲ್ಲ ಎನ್ನುವ ಪ್ರತಿಕ್ರಿಯೆ ಹರಿದುಬರುತ್ತಿವೆ. ಆದ್ರೆ ಇದ್ಯಾವದಕ್ಕು ತಲೆಕೆಡಿಸಿಕೊಳ್ಳದ ರಾಖಿ ತನ್ನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ವಿವಾದಗಳು, ವಿಚಿತ್ರ ಅವತಾರಗಳು, ನಗೆಪಾಟಲಿಗೆ ಈಡುಮಾಡುವ ಹೇಳಿಕೆ ನೀಡುವುದು ರಾಖಿಗೇನು ಹೊಸದೇನಲ್ಲ. ಎಲ್ಲವನ್ನು ಎಂಜಾಯ್ ಮಾಡಿಕೊಂಡೆ ಹೋಗುತ್ತಿದ್ದಾರೆ ರಾಖಿ.

  English summary
  Bollywood actress rakhi sawant posing with a Pakistani national flag beside a water stream. Rakhi's new look went viral on the Internet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X