»   » ರಾಹುಲ್ ಗಾಂಧಿಗೆ ರಾಖಿ ಸಾವಂತ್ ಆಫರ್:ಕಂಡೀಷನ್ ಅಪ್ಲೈ

ರಾಹುಲ್ ಗಾಂಧಿಗೆ ರಾಖಿ ಸಾವಂತ್ ಆಫರ್:ಕಂಡೀಷನ್ ಅಪ್ಲೈ

Posted By:
Subscribe to Filmibeat Kannada

ಸುದ್ದಿಯಲ್ಲಿರಲು ಏನಾದರೊಂದು ಕಿರಿಕ್ ಮಾಡಿಕೊಂಡು ಬರುವ ಜಾಯಮಾನದ ಬಾಲಿವುಡ್ ಐಟಂ ಕ್ವೀನ್ ರಾಖಿ ಸಾವಂತ್ ಈಗ ಮತ್ತೊಂದು ವಿವಾದಕಾರಿ ಹೇಳಿಕೆ ನೀಡಿದ್ದಾರೆ.

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬಯಸಿದರೆ ನಾನು ಅವರನ್ನು ಮದುವೆಯಾಗಲು ಸಿದ್ದ ಎಂದು ಹೇಳಿದ್ದಾರೆ. ಆದರೆ ಅವರನ್ನು ಮದುವೆ ಆಗಲು ಒಂದೇ ಒಂದು ಕಂಡಿಷನ್ ಅಪ್ಲೈ ಎಂದಿದ್ದಾರೆ.

ಏನಪ್ಪಾ ಅದು ಕಂಡೀಷನ್ ಅಂದ್ರೆ, ರಾಹುಲ್ ಜೊತೆ ಮದುವೆ ಆಗಲು ನಾನು ಸಿದ್ದ ಆದರೆ ದೇಶದ ಮುಂದಿನ ಪ್ರಧಾನಿ ಮಾತ್ರ ನರೇಂದ್ರ ಮೋದಿಯೇ ಆಗ ಬೇಕೆಂದಿದ್ದಾರೆ. (ಡ್ರಾಮಾ ಕ್ವೀನ್ ರಾಖಿಗೆ ಕಡೆಗೂ ಕಂಕಣ ಭಾಗ್ಯ)

'ಕಟ್ಟಾ ತನಾಲ್ ದುಪಟ್ಟಾ' ಎನ್ನುವ ಭೋಜಪುರಿ ಚಿತ್ರದ ಪ್ರಮೋಷನ್ ಗಾಗಿ ಬಿಹಾರದ ಹಾಜಿಪುರಕ್ಕೆ ಬಂದಿದ್ದ ರಾಖಿ ಸಾವಂತ್, ರಾಹುಲ್ ಗಾಂಧಿಗೆ ಈ ಆಫರ್ ನೀಡಿ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕಾರ್ಯವೈಖರಿಗೂ ಶಹಬ್ಬಾಸ್ ಎಂದಿದ್ದಾರೆ.

ಬಿಹಾರದ ಅಭಿವೃದ್ದಿಗೆ ನಿತೀಶ್ ಕುಮಾರ್ ಕೊಡುಗೆ ಅಪಾರ. ಅವರು ಮುಖ್ಯಮಂತ್ರಿ ಆದ ನಂತರ ಬಿಹಾರ ಗಣನೀಯವಾಗಿ ಬೆಳವಣಿಗೆ ಕಂಡಿದೆ ಎಂದು ರಾಖಿ ಸರ್ಟಿಫಿಕೇಟ್ ನೀಡಿದ್ದಾರೆ.

ಕೇಜ್ರಿವಾಲ್ ಮತ್ತು ಮೋದಿ ಬಗ್ಗೆ ಮುಂದುವರಿದು ಮಾತನಾಡುತ್ತಾ ರಾಖಿ ಸಾವಂತ್ ಹೇಳಿದ್ದೇನು?

ದೆಹಲಿ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್

ದೆಹಲಿ ಮಾಜಿ ಮುಖ್ಯಮಂತ್ರಿ ಮತ್ತು ಆಪ್ ಮುಖಂಡ ಅರವಿಂದ್ ಕೇಜ್ರಿವಾಲ್ ದೆಹಲಿ ಜನರಿಗೆ ಮೋಸ ಮಾಡಿದ ಹಾಗೆ ದೇಶಕ್ಕೆ ಮೋಸ ಮಾಡಲು ಸಾಧ್ಯವಿಲ್ಲ. ಆಡಳಿತ ಯಂತ್ರ ಸರಿಯಾಗಿ ನಿಭಾಯಿಸಲು ಸಾಧ್ಯವಾಗದೇ ಕೇಜ್ರಿವಾಲ್ ರಾಜೀನಾಮೆ ನೀಡಿದರು ಎಂದು ರಾಖಿ ಲೇವಡಿ ಮಾಡಿದ್ದಾರೆ.

ಮೋದಿ ಬಗ್ಗೆ ಏನಂತೀರಿ?

ನರೇಂದ್ರ ಮೋದಿ ಒಳ್ಳೆ ವ್ಯಕ್ತಿ. ದೇಶ ಮುನ್ನಡೆಸುವ ಸಾಮರ್ಥ್ಯ ಅವರಿಗಿದೆ. ಅವರಿಗೊಂದು ಚಾನ್ಸ್ ನೀಡಬೇಕಿದೆ. ನಾನು ಮುಂದಿನ ಪ್ರಧಾನಿಯನ್ನಾಗಿ ನರೇಂದ್ರ ಮೋದಿಯವರನ್ನು ನೋಡಲು ಬಯಸುತ್ತೇನೆ - ರಾಖಿ ಸಾವಂತ್

ಟಿಕೆಟ್ ಸಿಕ್ಕರೆ ಸ್ಪರ್ಧಿಸುತ್ತೇನೆ

ಲೋಕಸಭೆಗೆ ಸ್ಪರ್ಧಿಸ ಬೇಕೆನ್ನುವ ಆಸೆ ಇದೆಯೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ ರಾಖಿ, ಯೆಸ್, ಟಿಕೆಟ್ ಸಿಕ್ಕರೆ ಖಂಡಿತಾ ಸ್ಪರ್ಧಿಸುತ್ತೇನೆ. ಆದರೆ ಬಿಜೆಪಿ ಟಿಕೆಟಿನಿಂದ ಮಾತ್ರ ಎಂದಿದ್ದಾರೆ.

ದಿಗ್ವಿಜಯ್ ಸಿಂಗ್ ವಿರುದ್ದ ತಿರುಗಿ ಬಿದ್ದಿದ್ದ ರಾಖಿ

ಅರವಿಂದ್ ಕೇಜ್ರಿವಾಲ್ ಮತ್ತು ರಾಖಿ ಸಾವಂತ್ ಅವರನ್ನು ಹೋಲಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಟ್ವೀಟ್ ಮಾಡಿದ್ದರು. "Arvind Kejriwal is like Rakhi Sawant. They both try and expose but with no substance. Apologies to Rakhi Sawant I am an old fan of hers !" ಎಂದು ಟ್ವೀಟ್ ಮಾಡಿದ್ದರು.

ರಾಖಿ ಸಾವಂತ್ ಲಿಖಿತ ದೂರು

ದಿಗ್ವಿಜಯ್ ಹೇಳಿಕೆ ಖಂಡಿಸಿ ರಾಖಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಮುಂಬೈ ಕಮೀಷನರ್ ಕಚೇರಿ ಹಾಗೂ ಮಹಾರಾಷ್ಟ್ರ ಗೃಹ ಇಲಾಖೆ ಕಾರ್ಯದರ್ಶಿ ಭೇಟಿ ಮಾಡಿ ದೂರು ಪತ್ರ ನೀಡಿದ್ದರು. ದಿಗ್ವಿಜಯ್ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದರು.

English summary
Bollywood actress and Item Girl Rakhi Sawant said, she ie ready to marry Rahul Gandhi, but wants to see Narendra Modi as Prime Minister of India. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada