Don't Miss!
- News
Bengaluru Airport: ವಿಮಾನ ನಿಲ್ದಾಣ ಸ್ಪೋಟಿಸುವುದಾಗಿ ಯುವತಿಯಿಂದ ಬೆದರಿಕೆ
- Technology
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕಾನೂನಾತ್ಮಕವಾಗಿ ನಾನು ಅವರ ಹೆಂಡತಿಯೋ ಅಥವಾ ಇಲ್ಲವೋ?': ಪತಿ ಬಗ್ಗೆ ವರಸೆ ಬದಲಿಸಿದ ರಾಖಿ
ಬಾಲಿವುಡ್ ನಟಿ ರಾಖಿ ಸಾವಂತ್ ತಮ್ಮ ಮದುವೆ ವಿಚಾರದಲ್ಲಿ ಪದೇ ಪದೇ ಸುದ್ದಿಯಾಗುತ್ತಿದ್ದಾರೆ. ಉದ್ಯಮಿ ರಿತೇಶ್ ಎನ್ನುವವರ ಜೊತೆ ವಿವಾಹವಾಗಿದ್ದೇನೆ ಎಂದು ಹೇಳಿಕೊಂಡಿದ್ದ ರಾಖಿ ನಂತರ ರಿತೇಶ್ ವಿರುದ್ಧ ತಿರುಗಿಬಿದ್ದರು. ಮದುವೆ ಆಗಿ ನಾನು ದಿವಾಳಿಯಾಗಿದ್ದೇನೆ, ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದೇನೆ ಎಂದು ಅಳಲು ತೋಡಿಕೊಂಡಿದ್ದರು. ಈ ಮದುವೆಯಾಗಬಾರದಿತ್ತು. ಮದುವೆ ಆಗಿ ತಪ್ಪು ಮಾಡಿದೆ ಎಂದು ಗೋಳಾಡಿದ್ದರು.
ಇದೀಗ, ರಾಖಿ ಸಾವಂತ್ ತಮ್ಮ ವರಸೆ ಬದಲಿಸಿದ್ದಾರೆ. ಪತಿ ರಿತೇಶ್ ಕುರಿತು ಮೃದುವಾಗಿ ಮಾತನಾಡಿದ್ದಾರೆ. ಸದ್ಯದಲ್ಲೇ ನಾವಿಬ್ಬರು ಒಂದಾಗುತ್ತೇವೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಮದುವೆಯಾಗಿದ್ದೇನೆ ಎಂದು ಪ್ರಕಟಿಸಿಕೊಂಡಿದ್ದ ರಾಖಿ ಇದುವರೆಗೂ ತಮ್ಮ ಪತಿಯನ್ನು ಪರಿಚಯ ಮಾಡಿಕೊಟ್ಟಿಲ್ಲ. ಪತಿ ಯುಎಸ್‌ನಲ್ಲಿ ನೆಲೆಸಿದ್ದಾನೆ, ಭಾರತಕ್ಕೆ ಬಂದ ತಕ್ಷಣ ಮಾಧ್ಯಮದ ಮುಂದೆ ಬರುತ್ತೇವೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ, ತನ್ನ ಮದುವೆ ಕುರಿತು ಪ್ರಸ್ತುತವಾಗಿ ರಾಖಿ ಹೇಳುವುದೇನು? ಮುಂದೆ ಓದಿ...

ರಿತೇಶ್‌ಗೆ ಮದುವೆಯಾಗಿ ಮಗು ಇದೆ
2019ರಲ್ಲಿ ರಾಖಿ ಸಾವಂತ್ ಉದ್ಯಮಿ ರಿತೇಶ್ ಎನ್ನುವರ ಜೊತೆ ವಿವಾಹವಾದರು ಎಂದು ಕೆಲವು ಫೋಟೋಗಳು ಹರಿದಾಡಿದವು. ಈ ಫೋಟೋದಲ್ಲಿ ಮದುಮಗಳಂತೆ ಕೂತಿದ್ದ ರಾಖಿ ಮಾತ್ರ ಇದ್ದರು. ರಿತೇಶ್ ಯಾರೆಂದು ಇದುವರೆಗೂ ಯಾರಿಗೂ ತಿಳಿದಿಲ್ಲ. ಸ್ವತಃ ರಾಖಿ ಹೇಳುವಂತೆ ರಿತೇಶ್ ಉದ್ಯಮಿ, ಯುಎಸ್‌ನಲ್ಲಿದ್ದಾರೆ. ಇತ್ತೀಚಿಗೆ ಬಿಗ್ ಬಾಸ್ ಮನೆಯಲ್ಲಿ ಪತಿ ಬಗ್ಗೆ ಮಾತನಾಡಿದ್ದ ರಾಖಿ 'ರಿತೇಶ್‌ಗೆ ಮದುವೆ ಆಗಿ ಮಗು ಸಹ ಇದೆ' ಎಂಬ ವಿಚಾರ ಬಯಲು ಮಾಡಿದ್ದರು.
ಕೊನೆಗೂ
ಮದುವೆ
ಆಗಿದೆ
ಎಂದು
ಒಪ್ಪಿಕೊಂಡ
ರಾಕಿ
ಸಾವಂತ್

ಮರು ಮದುವೆಯಾಗಲು ಬಯಕೆ
'ಕಾನೂನುಬದ್ದವಾಗಿ ನಾನು ಅವರ ಹೆಂಡತಿಯೋ ಅಥವಾ ಇಲ್ಲವೋ ಗೊತ್ತಿಲ್ಲ. ನಾನು ಮತ್ತು ಅವರು ಈಗಲೂ ಪ್ರತಿದಿನ ವಿಡಿಯೋ ಕಾಲ್ ಮೂಲಕ ಮಾತನಾಡುತ್ತೇವೆ. ಭಾರತಕ್ಕೆ ಬಂದ ಮೇಲೆ ಎಲ್ಲರ ಮುಂದೆಯೇ ಮರು ವಿವಾಹ ಆಗೋಣ ಎಂದು ಹೇಳಿದ್ದಾರೆ' ಎಂಬ ವಿಚಾರವನ್ನು ರಾಖಿ ಬಿಗ್ ಬಾಸ್‌ನಲ್ಲಿ ಸಹ ಸ್ಪರ್ಧಿಯೊಂದಿಗೆ ಹೇಳಿಕೊಂಡಿದ್ದಾರೆ.

ವಿಸಾ ಸಮಸ್ಯೆಯಿಂದ ಬರಲು ಸಾಧ್ಯವಾಗುತ್ತಿಲ್ಲ
ತನ್ನ ಪತಿಯ ಬಗ್ಗೆ ಇ-ಟೈಮ್ಸ್ ಜೊತೆ ಮಾತನಾಡಿರುವ ರಾಖಿ ಸಾವಂತ್ ''ನನ್ನ ಪತಿ ಭಾರತಕ್ಕೆ ಬರಲು ಕಾಯುತ್ತಿದ್ದಾರೆ, ವೀಸಾ ಸಮಸ್ಯೆಯಿಂದ ವಿಳಂಬವಾಗುತ್ತಿದೆ. ಅದನ್ನು ಬಗೆಹರಿಸಿಕೊಂಡು ಬರ್ತಾರೆ. ರಿತೇಶ್ ಎಲ್ಲ ಮುಂದೆಯೂ ತಮ್ಮ ವಿವಾಹವನ್ನು ಖಾತ್ರಿಪಡಿಸಲು ಬಯಸಿದ್ದಾರೆ'' ಎಂದು ರಾಖಿ ತಿಳಿಸಿದ್ದಾರೆ.
ಮದುವೆಯಾಗಿ
ತಪ್ಪು
ಮಾಡಿದೆ,
ಆರ್ಥಿಕವಾಗಿ
ದಿವಾಳಿ
ಆಗಿದ್ದೇನೆ:
ರಾಖಿ
ಸಾವಂತ್
ಅಳಲು
Recommended Video

ಮದುವೆ ಸಂದರ್ಭದಲ್ಲೇ ಹೇಳಿದ್ದೆ
''ಮದುವೆಯಾಗುವ ಸಮಯದಲ್ಲೇ ನಾನು ಅವರಿಗೆ ಹೇಳಿದ್ದೆ. ಮಾಧ್ಯಮಗಳ ಮುಂದೆ ಹೋಗೋಣ ಅಂತ. ಆದರೆ, ರಿತೇಶ್ ಕಾರಣಾಂತರಗಳಿಂದ ಹಿಂಜರಿದರು. ಆದರೆ, ಈ ಬಾರಿ ಆ ತಪ್ಪು ಮಾಡಲ್ಲ. ಸ್ವತಃ ಅವರೇ ಮಾಧ್ಯಮಗಳ ಮುಂದೆ ಬಂದು ತಮ್ಮ ವಿವಾಹದ ಕುರಿತು ಸ್ಪಷ್ಟನೆ ನೀಡಲಿದ್ದಾರೆ. ನಾನು ಸಹ ಅವರು ಭಾರತಕ್ಕೆ ಬರುವುದನ್ನು ಕಾಯುತ್ತಿದ್ದೇನೆ'' ಎಂದು ನಟಿ ರಾಖಿ ಸಾವಂತ್ ಮಾತನಾಡಿದ್ದಾರೆ.