For Quick Alerts
  ALLOW NOTIFICATIONS  
  For Daily Alerts

  ರಿಯಾ ಚಕ್ರವರ್ತಿ ಜೊತೆ ಡ್ರಗ್ ಚಾಟ್ ಮಾಡಿರುವುದಾಗಿ NCB ಮುಂದೆ ಒಪ್ಪಿಕೊಂಡ ರಕುಲ್

  |

  ಡ್ರಗ್ಸ್ ಮಾಫಿಯಾ ಜಾಲದ ಬೆನ್ನತ್ತಿರುವ ಎನ್ ಸಿ ಬಿ ಈಗಾಗಲೇ ಅನೇಕರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ಇನ್ನೂ ಕೆಲವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಡ್ರಗ್ಸ್ ದಂಧೆ ಪ್ರಕರಣದಲ್ಲಿ ಸ್ಟಾರ್ ನಟಿಯರ ಹೆಸರು ಕೇಳಿಬರುತ್ತಿದ್ದು, ದೀಪಿಕಾ ಪಡುಕೋಣೆ ಸೇರಿದಂತೆ ಅನೇಕರಿಗೆ ಎನ್ ಸಿ ಬಿ ನಮನ್ಸ್ ನೀಡಿದೆ.

  ಇಂದು (ಸೆಪ್ಟಂಬರ್ 25) ಎನ್ ಸಿ ಬಿ ವಿಚಾರಣೆಗೆ ಹಾಜರಾಗಿದ್ದ ನಟಿ ರಕುಲ್ ಪ್ರೀತ್ ಸಿಂಗ್, ಈಗಾಗಲೇ ಅರೆಸ್ಟ್ ಆಗಿರುವ ರಿಯಾ ಜೊತೆ ಡ್ರಗ್ಸ್ ಚಾಟ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಟೈಮ್ಸ್ ನೌ ವಾಹಿನಿ ವರದಿ ಮಾಡಿದೆ. ಇಂದು ಬೆಳಗ್ಗೆ 10.30ಕ್ಕೆ ಮುಂಬೈನ ಎನ್ ಸಿ ಬಿ ಅಧಿಕಾರಿಗಳ ಮುಂದೆ ಹಾಜರಾದ ರಕುಲ್ ಪ್ರೀತ್ ಸಿಂಗ್ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

  ಡ್ರಗ್ಸ್ ಪ್ರಕರಣ: ಬಾಲಿವುಡ್ ಸ್ಟಾರ್ ನಟರು ಮೌನವಹಿಸಿದ್ದೇಕೆ?ಡ್ರಗ್ಸ್ ಪ್ರಕರಣ: ಬಾಲಿವುಡ್ ಸ್ಟಾರ್ ನಟರು ಮೌನವಹಿಸಿದ್ದೇಕೆ?

  ರಿಯಾ ಜೊತೆ ಡ್ರಗ್ಸ್ ಚಾಟ್ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುವ ರಕುಲ್, ಡ್ರಗ್ಸ್ ಸೇವಿಸುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಯಾವುದೇ ಡ್ರಗ್ಸ್ ಪೆಡ್ಲರ್ ಗಳ ಜೊತೆಯೂ ಸಂಪರ್ಕ ಹೊಂದಿಲ್ಲ ಎಂದಿದ್ದಾರಂತೆ. ಇಂದು ವಿಚಾರಣೆ ಮುಗಿಸಿರುವ ರಕುಲ್ ಅವರನ್ನು ಮತ್ತೆ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

  ಈ ಮೊದಲು ರಾಕುಲ್ ಎನ್ ಸಿ ಬಿಯಿಂದ ಯಾವುದೇ ನೋಟಿಸ್ ಬಂದಿಲ್ಲ, ಸುಮ್ಮನೆ ತನ್ನ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ಮಾಧ್ಯಮದವರ ವಿರುದ್ಧ ಕಿಡಿ ಕಾರಿದ್ದರು. ಆದರೆ ನಿನ್ನೆ ಗುರುವಾರ ನೋಟಿಸ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ರಕುಲ್ ಮೌನಕ್ಕೆ ಶರಣಾಗಿದ್ದಾರೆ.

  ಅನುಶ್ರೀ ಹುಡುಕಿಕೊಂಡು ಮಂಗಳೂರಿನಿಂದ ಬೆಂಗಳೂರಿಗೆ ಬಂದ CCB ಪೊಲೀಸ್ | Filmibeat Kannada

  ಇನ್ನು ಮೂವರು ಸ್ಟಾರ್ ನಟಿಯರಿಗೆ ನೋಟಿಸ್ ನೀಡಿದ್ದು, ನಾಳೆ ಸೆಪ್ಟಂಬರ್ 26ರಂದು ಎನ್ ಸಿ ಬಿ ಮುಂದೆ ಹಾಜರಾಗಲಿದ್ದಾರೆ. ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಎನ್ ಸಿ ಬಿ ವಿಚಾರಣೆ ಎದುರಿಸಲಿದ್ದಾರೆ.

  English summary
  Rakul Preet Singh confesses to chat with Rhea Chakraborty. But she denied consumining drugs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X