For Quick Alerts
  ALLOW NOTIFICATIONS  
  For Daily Alerts

  'ಅಂಡರ್ ವರ್ಲ್ಡ್ ಡಾನ್' ಗಳ ಬೆನ್ನತ್ತಿದ ನಿರ್ದೇಶಕ ಆರ್.ಜಿ.ವಿ

  By Suneetha
  |

  ಯಾವಾಗಲೂ ಹೊಸ ಹೊಸ ವಿಚಾರಗಳನ್ನು ಕೈಗೆತ್ತಿಕೊಳ್ಳುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು 'ಕಿಲ್ಲಿಂಗ್ ವೀರಪ್ಪನ್' ಎಂಬ ಹಿಟ್ ಸಿನಿಮಾವನ್ನು ಸ್ಯಾಂಡಲ್ ವುಡ್ ಗೆ ಕೊಟ್ಟ ನಂತರ ಇದೀಗ ಹೊಸತೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ.

  ಹೌದು ಪ್ರತೀ ಬಾರಿ ರಿಯಲ್ ಸ್ಟೋರಿ ಮತ್ತು ವಿಭಿನ್ನ ಕಥಾಹಂದರ ಇರುವ ವಿಷಯಗಳನ್ನು ಕೈಗೆತ್ತಿಕೊಳ್ಳುವ ನಿರ್ದೇಶಕರು ಈ ಬಾರಿ ಭೂಗತ ಲೋಕದ ಡಾನ್ ಗಳಾದ ದಾವೂದ್ ಇಬ್ರಾಹಿಂ, ಚೋಟಾ ಶಕೀಲ್ ಮುಂತಾದವರ ಬಗ್ಗೆ ಬಾಲಿವುಡ್ ನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ.['ವೀರಪ್ಪನ್' ಆಗೋಕೆ ಸಂದೀಪ್ ಏನೆಲ್ಲಾ ಮಾಡಿದ್ರು ಗೊತ್ತಾ]

  ಈ ಚಿತ್ರದಲ್ಲಿ ದಾವೂದ್ ಮತ್ತು ರಾಜನ್ ಮಧ್ಯೆ ಒಡಕುಂಟು ಮಾಡಿ ಅವರಿಬ್ಬರನ್ನು ಸರ್ಕಾರ ಹೇಗೆ ದುರ್ಬಲರನ್ನಾಗಿಸಿತು ಮತ್ತು ಇವರಿಬ್ಬರ ಕಲಹದಲ್ಲಿ ಅಬು ಸಲೇಂ ಹೇಗೆ ಬೆಳೆದು ಬಂದ ಎಂಬುದನ್ನು ಈ ಚಿತ್ರದಲ್ಲಿ ತೋರಿಸುತ್ತಾರಂತೆ ವರ್ಮಾ ಅವರು.

  ಚಿತ್ರದ ಪಾತ್ರವರ್ಗಕ್ಕೆ ಬಂದರೆ, ಚಿತ್ರದಲ್ಲಿ ಮುಖ್ಯವಾಗಿ ಅನೀಸ್ ಇಬ್ರಾಹಿಂ ಹಾಗೂ ಚೋಟಾ ರಾಜನ್ ಪತ್ನಿ ಸುಜಾತಾ, ಮೋನಿಕಾ ಬೇಡಿ, ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಅನೇಕರ ಪಾತ್ರಗಳಿರುತ್ತವೆ ಎಂದು ವರ್ಮಾ ತಿಳಿಸಿದ್ದಾರೆ.[ಹಾಲಿವುಡ್ ನಲ್ಲೂ 'ವೀರಪ್ಪನ್' ಹವಾ ಶುರು ಮಾಡ್ತಾರಂತೆ ವರ್ಮಾ]

  ವರ್ಮಾ ಅವರು ಚಿತ್ರ-ಕಥೆಯನ್ನು ಆದಷ್ಟು ಮಟ್ಟಿಗೆ ವಾಸ್ತವದ ನೆಲಗಟ್ಟಿನ ಮೇಲೆ ರೂಪಿಸಲು ತಯಾರಾಗಿದ್ದು, ದಾವೂದ್ ಮತ್ತು ರಾಜನ್ ನಡುವೆ ಸರ್ಕಾರ ವೈಮನಸ್ಸು ತಂದಿಟ್ಟಾಗ ಅಬು ಸಲೇಂ ಹೇಗೆ ತನ್ನ ಬೇಳೆ ಬೇಯಿಸಿಕೊಂಡ ಎಂಬ ಪರಿಯನ್ನು ಹೈಲೈಟ್ ಮಾಡುತ್ತಾರಂತೆ.

  ಹೊಸ ವರ್ಷಕ್ಕೆ 'ಕಿಲ್ಲಿಂಗ್ ವೀರಪ್ಪನ್' ಎಂಬ ಹಿಟ್ ಸಿನಿಮಾವನ್ನು ಸಿನಿರಸಿಕರಿಗೆ ನೀಡಿ ಸೂಪರ್ ಅನ್ನಿಸಿಕೊಂಡು ನಿರ್ದೇಶಕ ಆರ್.ಜಿ.ವಿ ಅವರು ಮತ್ತೊಂದು ಹೊಸ ಭೂಗತ ಲೋಕವನ್ನು ಪ್ರೇಕ್ಷಕರೆದುರು ತೆರೆದಿಡಲಿದ್ದಾರೆ.

  English summary
  Filmmaker Ram Gopal Varma is all set to direct his next Hindi movie based on the rivalry between Dawood Ibrahim and Chota Rajan. Titled Government, the movie will revolve around the post split intergang enmity between Rajan and Dawood and the sudden rise of Abu Salem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X