'ಹೆಣ್ಣೆಂದರೆ ಕೇವಲ ಕಾಮತೃಷೆ ತೀರಿಸುವ ವಸ್ತು'
ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮೈಂಡ್ ಸೆಟ್ ಹೇಗಿರುತ್ತದೋ, ಮಹಿಳೆಯರ ಬಗೆಗಿನ ಅವರ ಅಭಿಪ್ರಾಯ, ಸಮಾಜದ ಬಗ್ಗೆ ಅವರ ಧೋರಣೆ ಎಂಥಹದ್ದು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ವರ್ಮಾ ಅವರ ಮನೋಭಾವಕ್ಕೆ ಕನ್ನಡಿ ಹಿಡಿಯುವ ಅವರ ಪುಸ್ತಕ 'ನಾ ಇಷ್ಟಂ' (ನನ್ನಿಷ್ಟ) ಓದಿದರೆ ಇದು ಮನದಟ್ಟಾಗುತ್ತದೆ.
ಈಗ ವರ್ಮಾಗೆ ಸಂಬಂಧಿಸಿದಂತೆ ತಾಜಾ ಸುದ್ದಿಯೊಂದು ಭಾರಿ ಚರ್ಚೆಗೆ ಗ್ರಾಸವಾಗಿದೆ...ಇದುವರೆಗೂ ವರ್ಮಾ ಬಗ್ಗೆ ಗೊತ್ತಿಲ್ಲದ ಸಂಗತಿಯೊಂದು ಬಹಿರಂಗವಾಗಿದೆ. ಬಾಲಿವುಡ್ ನ ಖ್ಯಾತ ನಿರ್ದೇಶಕ ಶೇಖರ್ ಕಪೂರ್ ಅವರ ಮಾಜಿ ಪತ್ನಿ, ಗಾಯಕಿ, ನಟಿ ಸುಚಿತ್ರಾ ಕೃಷ್ಣಮೂರ್ತಿ (38) ತನ್ನ ಜೀವನದಲ್ಲಿ ನಡೆದಂತಹ ಘಟನೆಗಳನ್ನು 'ಡ್ರಾಮಾ ಕ್ವೀನ್' ಎಂಬ ಪುಸ್ತಕಸಲ್ಲಿ ಬಹಿರಂಗಪಡಿಸಿದ್ದಾರೆ.

ತಮ್ಮನ್ನು ಮದುವೆಯಾಗುತ್ತೀರಾ ಎಂದು ವರ್ಮಾ ಸಾಹೇಬರಿಗೆ ಎಸ್ಎಂಎಸ್ ಸಂದೇಶ ಕಳುಹಿಸಿದ್ದರಂತೆ. ಇದಕ್ಕೆ ಪ್ರತಿಕ್ರಿಯಿಸಿದ ವರ್ಮಾ, ಮದುವೆಯಲ್ಲಿ ನನಗೆ ನಂಬಿಕೆ ಇಲ್ಲ. ನಮ್ಮಿಬ್ಬರ ಮನೋಭಾವ ಒಂದೇ ರೀತಿ ಇಲ್ಲ. ನಮ್ಮಿಬ್ಬರ ಮದುವೆ ಎಂದೆಂದಿಗೂ ಸಾಧ್ಯವಿಲ್ಲ...
"ನಾನು ಹೆಣ್ಣನ್ನು ಕೇವಲ ಕಾಮತೃಷೆಗಾಗಿ ಬಳಸುತ್ತೇನೆ. ಆದರೆ ನೀವು ಅದನ್ನು ನನ್ನಿಂದ ಬಯಸುತ್ತಿಲ್ಲ ಎಂದುಕೊಂಡಿದ್ದೇನೆ. ನಾನು ಮಹಿಳೆಯರ ದೇಹವನ್ನು ಇಷ್ಟಪಡುತ್ತೇನೆ. ಮೆದುಳನ್ನಲ್ಲ. ಮಹಿಳೆಯರನ್ನು ನೋಡಬೇಕೆ ಹೊರತು ಅವರನ್ನು ಕೇಳಿಸಿಕೊಳ್ಳಬಾರದು" ಎಂದು ತಮಗೆ ಸಂದೇಶ ಕಳುಹಿಸಿದ್ದಾಗಿ ಸುಚಿತ್ರಾ ಹೇಳಿಕೊಂಡಿದ್ದಾರೆ. ವರ್ಮಾ ಅವರು ಹೀಗೆಂದಿರುವುದು ಭಾರಿ ಚರ್ಚೆಗೆ ಹಾಗೂ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.


Click it and Unblock the Notifications











