For Quick Alerts
  ALLOW NOTIFICATIONS  
  For Daily Alerts

  ಎದೆಗಾರಿಕೆ ಚಿತ್ರ ಕಂಡ ವರ್ಮಾ ಅಚ್ಚರಿ

  By Mahesh
  |

  "Hi Sumana this is Ram gopal varma from Mumbai..I just saw your film and am very impressed..it was a pleasant surprise to me that such a film can be made in that market..congrats!" ಸ್ನೇಹಿತರೆ, ಎದೆಗಾರಿಕೆ ಚಿತ್ರ ನೋಡಿ ಇಂದು ಬೆಳಿಗ್ಗೆ ರಾಮ್ ಗೋಪಾಲ್ ಸರ್ ಕಳುಹಿಸಿದ ಸಂದೇಶವಿದು. ಇಂದು ಸಂಜೆ phone ಮಾಡುತ್ತಾರಂತೆ. ಅವರ ಕರೆಗೆ ಹೃದಯ ಹರುಷಗೊಂಡಿದೆ. ಯಾಕೆಂದರೆ, ನಾನೂ ಕೂಡ ಅವರ ಪರಮ ಅಭಿಮಾನಿ ಎಂದು ಕನ್ನಡ ಹೆಮ್ಮೆಯ ನಿರ್ದೇಶಕಿ ಸುಮನಾ ಕಿತ್ತೂರು ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಹಾಕಿಕೊಂಡಿದ್ದಾರೆ.

  ಮುಂಬೈನಲ್ಲಿ ನಡೆದಿರುವ ಮಹಿಳಾ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್(MWIFF) ನಲ್ಲಿ ಎದೆಗಾರಿಕೆ ಚಿತ್ರ ನೋಡಿ ರಾಮ್ ಗೋಪಾಲ್ ವರ್ಮಾ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಭೂಗತ ಜಗತ್ತಿನ ಬಗ್ಗೆ ತರಾವರಿ ಚಿತ್ರಗಳನ್ನು ತೆರೆಗೆ ಬಂದು ಯಶಸ್ವಿಯಾಗಿರುವ ವರ್ಮಾ ಅವರ ಹೊಗಳಿರುವುದು ಮೆಚ್ಚುಗೆಯ ಸಂಗತಿ.

  ಮುಂಬೈ ಚಲನಚಿತ್ರೋತ್ಸವದಲ್ಲಿ ಯುಎಸ್, ಫ್ರಾನ್ಸ್,ಸ್ಪೇನ್ ದೇಶದ ಮಹಿಳಾ ನಿರ್ದೇಶಕಿಯರ ಚಿತ್ರಗಳ ಜತೆಗೆ ಸುಮನಾ ಅವರ ಚಿತ್ರ ಪ್ರದರ್ಶನವಾಗಿ ಪ್ರಶಂಸೆ ಪಡೆದಿದೆ. ರಾಮ್ ಗೋಪಾಲ್ ವರ್ಮಾ ಅವರ ಪ್ರಶಂಸೆ ಅದಕ್ಕೆ ಕಿತ್ತೂರು ಅವರ ಪ್ರತಿಕ್ರಿಯೆ ಎಲ್ಲವೂ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ನಡೆದಿದೆ. ಇನ್ನಷ್ತು ಮಾಹಿತಿ ನಿಮ್ಮ ಮುಂದಿದೆ.

  ನಿರ್ದೇಶಕಿ ಸುಮನಾ ಹೇಳಿಕೆ

  ನಿರ್ದೇಶಕಿ ಸುಮನಾ ಹೇಳಿಕೆ

  ಕಾದಂಬರಿ ಓದುವ ಅನುಭವವೇ ಬೇರೆ. ಎದೆಗಾರಿಕೆ ಚಿತ್ರವನ್ನು ಕಣ್ತುಂಬಿಕೊಳ್ಳುವ ಅನುಭವವೇ ಬೇರೆ. ಪ್ರೇಕ್ಷಕರನ್ನು ಮೂರು ಗಂಟೆಗಳ ಕಾಲ ಚಿತ್ರ ಹಿಡಿದಿಟ್ಟರೆ ಅಷ್ಟೇ ಸಾಕು. "ಚಿತ್ರದಲ್ಲಿನ ಪ್ರತಿಯೊಬ್ಬ ಕಲಾವಿದರೂ ಅಭಿನಯಿಸದೆ ತಮ್ಮ ಪಾತ್ರಗಳನ್ನು ಉಸಿರಾಡಿದ್ದಾರೆ" ಎಂದು ನಿರ್ದೇಶಕಿ ಸುಮನಾ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಹೇಳಿದ್ದರು. ಅವರ ಮಾತಿನಂತೆ ಮೂರು ಗಂಟೆಗಳ ಕಾಲ ಚಿತ್ರ ಪ್ರೇಕ್ಷಕರನ್ನು ರಂಜಿಸಿದೆ.

  ಚಿತ್ರದ ಅನುಭವ ಹೇಗಿರುತ್ತೆ

  ಚಿತ್ರದ ಅನುಭವ ಹೇಗಿರುತ್ತೆ

  ಎದೆಗಾರಿಕೆ ಚಿತ್ರದಲ್ಲಿ ಮಾತು ಮೌನಕ್ಕೆ ಶರಣಾಗುತ್ತದೆ. ಮೌನ ಸಾವಿನಲ್ಲಿ ಲೀನವಾಗುತ್ತದೆ! ಇಡೀ ಚಿತ್ರ ಒಂದು ಜರ್ನಿ. ಭೂಗತ ಜಗತ್ತಿನ ಜೊತೆ ಸಾಗುವ ಪಯಣ. ಸಾವು ಬದುಕಿನ ನಡುವೆ ಒಂದು ಚೈನ್ ಲಿಂಕ್ ಇದೆ ಎಂದು ನಂಬಿದವರಿಗೆ ಅಲ್ಲಿ ಸಾವು ಬದುಕಾಗಿ ಕಾಣುತ್ತದೆ. ಬದುಕು ಸಾವಾಗಿ ಕಾಡುತ್ತದೆ. ಚಿತ್ರದ ವಿಮರ್ಶೆ ಇಲ್ಲಿ ಓದಿ

  ನಿರ್ದೇಶಕಿ ಸುಮನಾ ಪ್ರತಿಕ್ರಿಯೆ

  ವರ್ಮಾ ಅವರ ಅಭಿಮಾನಿ ನಿರ್ದೇಶಕಿ ಸುಮನ್ ಕಿತ್ತೂರು ಅವರು ವರ್ಮಾ ಅವರ ಹೊಗಳಿಕೆಯ ಮಾತು ಕಂಡು ಪುಳಕಿತರಾಗಿದ್ದಾರೆ.

  ಚಿತ್ರದ ಸಂಗೀತದ ಬಗ್ಗೆ

  ರಾಮ್ ಗೋಪಾಲ್ ವರ್ಮಾ ಅವರು ತಮ್ಮ ಮುಂದಿನ ಟ್ವೀಟ್ ನಲ್ಲಿ ಚಿತ್ರದ ಹಿನ್ನೆಲೆ ಸಂಗೀತ ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋಕಿಲ ಅವರಿಗೆ ನನ್ನ ಅಭಿನಂದನೆಗಳನ್ನು ತಿಳಿಸಿ ಎಂದಿದ್ದಾರೆ.

  ವರ್ಮಾ ಈಗೇನು ಮಾಡ್ತಿದ್ದಾರೆ?

  ರಾಮ್ ಗೋಪಾಲ್ ವರ್ಮಾ ಅವರು ಸದ್ಯಕ್ಕೆ ಸತ್ಯ 2 ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಸತ್ಯ 2 ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ಬಗ್ಗೆ ಇಲ್ಲಿ ಓದಿ

  ಸಾಧು ಮಹಾರಾಜ್ ಕಿ ಜೈ

  ಸಾಧು ಅವರ ಹಿನ್ನೆಲೆ ಸಂಗೀತ ಕೇಳಲು ಚಿತ್ರಮಂದಿರಕ್ಕೆ ಹೋಗುತ್ತೇನೆ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ

  ಎದೆಗಾರಿಕೆ ತಪ್ಪದೇ ನೋಡಿ

  ಎದೆಗಾರಿಕೆ ತಪ್ಪದೇ ನೋಡಿ

  ಅಗ್ನಿ ಶ್ರೀಧರ್ ಅವರ ಕಾದಂಬರಿ ಆಧಾರಿತ ಈ ಚಿತ್ರಕ್ಕೆ ಅವರೇ ಸಂಭಾಷಣೆ, ಚಿತ್ರಕಥೆ ಒದಗಿಸಿದ್ದು ಮತ್ತಷ್ಟು ಬಲ ನೀಡಿದೆ. ಚಿತ್ರದ ನಾಯಕ ಆದಿತ್ಯ, ನಾಯಕಿ ಆಕಾಂಕ್ಷಾ. ಅತುಲ್ ಕುಲಕರ್ಣಿ, ರವಿಶಂಕರ್, ಅಚ್ಯುತ ಕುಮಾರ್, ಶರತ್ ಲೋಹಿತಾಶ್ವ, ಸೃಜನ್ ಲೋಕೇಶ್, ಧರ್ಮ ಮುಂತಾದ ಕಲಾವಿದರು ಉತ್ತಮ ಪಾತ್ರ ನಿರ್ವಹಣೆ ಮಾಡಿ ಚಿತ್ರವನ್ನು ಚೆಂದವಾಗಿಸಿದ್ದಾರೆ. ಈ ಚಿತ್ರ ಸದ್ಯ ಯೂಟ್ಯೂಬ್ ನಲ್ಲೂ ಲಭ್ಯವಿದ್ದು ತಪ್ಪದೇ ನೋಡಿ

  MWIFF

  ಎದೆಗಾರಿಕೆ ಚಿತ್ರ ಪ್ರದರ್ಶನ ಮುಂಬೈನಲ್ಲಿ ಸದ್ದು ಮಾಡಿದೆ.

  English summary
  Director Ram Gopal Varma , who is famous for the action thriller movies in Hindi and Telugu industry has praised Kannada movie Edegarike. The director has watched the movie in Mumbai Women International Film Festival (MWIFF).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X