For Quick Alerts
  ALLOW NOTIFICATIONS  
  For Daily Alerts

  ಐತಿಹಾಸಿಕ ಚಿತ್ರಗಳ ರೇಸ್‌ನಲ್ಲಿ 'ಛತ್ರಪತಿ ಶಿವಾಜಿ' ಹೊಸ ಎಂಟ್ರಿ

  By Suneel
  |

  ಯಾರಿಗೂ ಹೆದರದೇ ಯಾವಾಗಲು ಶಾಕಿಂಗ್, ಬ್ರೇಕಿಂಗ್, ವಿವಾದಾತ್ಮಕ ಹೇಳಿಕೆ ನೀಡುತ್ತಾ ಟ್ವಿಟರ್ ರಾಕ್ ಸ್ಟಾರ್ ಎಂದೇ ಹೆಸರು ಪಡೆದಿದ್ದಾರೆ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕರಾದ ರಾಮ್ ಗೋಪಾಲ್ ವರ್ಮಾ. ಅಂದಹಾಗೆ ನಿರ್ದೇಶಕ ಈಗ ಆಶ್ಚರ್ಯಕರ ಮತ್ತು ಸಿನಿಮಾ ಪ್ರೇಮಿಗಳಿಗೆ ಸಂತಸದ ಮಾಹಿತಿಯೊಂದನ್ನು ನೀಡಿದ್ದಾರೆ.

  ಇಂದು(ಮೇ 11) ಸಡೆನ್ ಆಗಿ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ಖ್ಯಾತ ನಟ ರಿತೇಶ್ ದೇಶ್ ಮುಖ್ ರವರು 'ಶಿವಾಜಿ' ಕುರಿತ ಸಿನಿಮಾ ಮಾಡಲಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ. ಈ ಚಿತ್ರ ಮೂಡಿಬರಲಿರುವ ಹಿನ್ನೆಲೆಯಲ್ಲಿ ವರ್ಮಾ ರವರು ಟ್ವೀಟ್ ಮಾಡಿದ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ.

  'ಬಾಹುಬಲಿ' ನಂತರ 'ಶಿವಾಜಿ'

  'ಬಾಹುಬಲಿ' ನಂತರ 'ಶಿವಾಜಿ'

  ಖ್ಯಾತ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ರವರು ಹಿಂದಿ ಮತ್ತು ಮರಾಠಿ ಸಿನಿಮಾಗಳಲ್ಲಿ ಪ್ರಖ್ಯಾತರಾಗಿರುವ ನಟ ರಿತೇಶ್ ದೇಶ್ ಮುಖ್ ರವರ ಕುರಿತು, "ಭಾರತ ಸಿನಿಮಾ ರಂಗದಲ್ಲಿ 'ಬಾಹುಬಲಿ' ಗುಡುಗಿನ ನಂತರ ನಾನು ಕೇಳಿದ ಗ್ರೇಟ್ ನ್ಯೂಸ್ ರಿತೇಶ್ ದೇಶ್ ಮುಖ್ ರವರು 225 ಕೋಟಿ ರೂ ಗಿಂತ ಹೆಚ್ಚಿನ ಬಜೆಟ್ ನಲ್ಲಿ 'ಶಿವಾಜಿ' ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಎಂಬುದು" ಎಂದು ಟ್ವೀಟ್ ಮಾಡಿದ್ದಾರೆ.

  'ಶಿವಾಜಿ' ಕುರಿತ ಸಿನಿಮಾ ಥ್ರಿಲ್ಲಿಂಗ್ ಅನುಭವ ನೀಡಲಿದೆ

  'ಶಿವಾಜಿ' ಕುರಿತ ಸಿನಿಮಾ ಥ್ರಿಲ್ಲಿಂಗ್ ಅನುಭವ ನೀಡಲಿದೆ

  " 'ಬಾಹುಬಲಿ' ಚಿತ್ರಕ್ಕಿಂತ ಶಿವಾಜಿ ಸ್ಟೋರಿ ಅತ್ಯಧಿಕ ಶೌರ್ಯ ಮತ್ತು ಡ್ರಾಮಾ ಸಿನಿಮಾ ಆಗಿ ಮೂಡಿಬರಲಿದೆ. ಬಾಹುಬಲಿ ಚಿತ್ರಕ್ಕಿಂತ ರಿಯಾಲಿಸ್ಟಿಕ್ ಆಗಿ ಥ್ರಿಲ್ಲಿಂಗ್ ಅನುಭವ ನೀಡಲಿದೆ. ಶಿವಾಜಿ ಭಾರತ ಕಂಡ ಮಹಾನ್ ವೀರ ಯೋಧ. ಅವರ ಯುದ್ಧದ ದೃಶ್ಯಗಳು ಭವ್ಯವಾಗಿ ಚಿತ್ರಣಗೊಳ್ಳಲಿವೆ" ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ.

  ಅತ್ಯುತ್ತಮ ಭಾರತೀಯ ಚಿತ್ರ

  ಅತ್ಯುತ್ತಮ ಭಾರತೀಯ ಚಿತ್ರ

  "ನಾನೊಬ್ಬ ಸಿನಿ ಪ್ರೇಮಿಯಾಗಿ 'ಶಿವಾಜಿ' ಕುರಿತ ಮಹಾನ್ ಚಿತ್ರಕ್ಕಾಗಿ ರಿತೇಶ್ ಗೆ ಧನ್ಯವಾದಗಳನ್ನು ಹೇಳುತ್ತೇನೆ. ಇದೊಂದು ಭಾರತದ ಅತ್ಯುತ್ತಮ ಚಿತ್ರವಾಗಿ ಮೂಡಿಬರಲಿದೆ" - ರಾಮ್ ಗೋಪಾಲ್ ವರ್ಮಾ, ಬಾಲಿವುಡ್ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ.

  ಶಿವಾಜಿ ಪಾತ್ರದಲ್ಲಿ ರಿತೇಶ್ ದೇಶ್ ಮುಖ್

  ಶಿವಾಜಿ ಪಾತ್ರದಲ್ಲಿ ರಿತೇಶ್ ದೇಶ್ ಮುಖ್

  "ರಿತೇಶ್ ದೇಶ್ ಮುಖ್ ಶಿವಾಜಿ ಪಾತ್ರದಲ್ಲಿ ನಟಿಸಲಿದ್ದಾರೆ. ಆಂಧ್ರ ಪ್ರದೇಶಕ್ಕೆ 'ಬಾಹುಬಲಿ' ಹೆಮ್ಮೆ ತಂದಂತೆ ಮಹಾರಾಷ್ಟ್ರದ ಹಿರಿಮೆಯನ್ನು 'ಶಿವಾಜಿ' ಸಿನಿಮಾ ಹೆಚ್ಚಿಸಲಿದೆ" ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

  ನಿರ್ದೇಶಕ ಯಾರು?

  ನಿರ್ದೇಶಕ ಯಾರು?

  ಫಿಲ್ಮ್ ಮೇಕರ್ ರವಿ ಜಾಧವ್ ರವರು 'ಛತ್ರಪತಿ ಶಿವಾಜಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ರಿತೇಶ್ ನಟನೆ ಜೊತೆಗೆ ನಿರ್ಮಾಣ ಮಾಡಲಿದ್ದಾರೆ.

  English summary
  Filmmaker Ram Gopal Varma on Thursday tweeted, "After the 'Baahubali' thunder I just heard great news that Riteish Deshmukh is making Shivaji at a whopping cost of more than Rs 225 crore."

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X