Don't Miss!
- News
World Cancer Day 2023: ವಿಶ್ವ ಕ್ಯಾನ್ಸರ್ ದಿನ- ನಿಮ್ಮ ಜೀವನಶೈಲಿಯಲ್ಲಿರಲಿ ಈ ಬದಲಾವಣೆಗಳು
- Technology
ನಿಮ್ಮ ಮೊಬೈಲ್ನಲ್ಲಿ ಹೀಗೆ ಮಾಡಿ, ಸುಲಭವಾಗಿ ತಿಂಗಳ ಆದಾಯ ಗಳಿಸಿ!
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2020ಕ್ಕೆ ಹಸೆಮಣೆ ಏರಲು ಸಜ್ಜಾಗಿರುವ ಸಿನಿತಾರೆಯರು
ಸೆಲೆಬ್ರಿಟಿಗಳ ಮದುವೆ ಅಂದ್ರೆ ಅಭಿಮಾನಿಗಳಿಗೂ ಒಂಥರ ಸಂಭ್ರಮ. ನೆಚ್ಚಿನ ನಟ-ನಟಿಯರ ಮದುವೆಯನ್ನು ದೂರದಿಂದ ನೋಡಿ ಆನಂದಿಸುತ್ತಾರೆ. ಅದ್ದೂರಿಯಾಗಿ ನಡೆಯುವ ಮದುವೆ ಸಮಾರಂಭದಲ್ಲಿ ಯಾರೆಲ್ಲ ಸ್ಟಾರ್ ಬರ್ತಾರೆ. ಯಾವ ರೀತಿಯ ಕಾಸ್ಟ್ಯೂಮ್ ಧರಿಸಿರುತ್ತಾರೆ ಹೀಗೆ ಒಂದಿಷ್ಟು ವಿಚಾರಗಳ ಮೇಲೆ ಕುತೂಹಲ ಇಟ್ಟಿಕೊಂಡು ನೋಡುತ್ತಾರೆ.
ಬಾಲಿವುಡ್ ನಲ್ಲಿ ಈಗ ಮತ್ತೆ ಮದುವೆ ಸಂಭ್ರಮ ಶುರುವಾಗುತ್ತಿದೆ. ಸಾಲು ಸಾಲು ಸೆಲೆಬ್ರಿಟಿ ಜೋಡಿಗಳು ಮದುವೆ ಸಿದ್ಧರಾಗ್ತಿದ್ದಾರೆ. 2018ರಲ್ಲಿ ದೊಡ್ಡ ದೊಡ್ಡ ಸ್ಟಾರ್ಸ್ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋನಂ ಕಪೂರ್, ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್, ಪ್ರಿಯಾಂಕಾ ಚೋಪ್ರ ಹಸೆಮಣೆ ಏರಿದ್ದಾರೆ.
ಈ ವರ್ಷ ಬಾಲಿವುಡ್ ನಲ್ಲಿ ಇನ್ನು ಮದುವೆ ಸಂಭ್ರಮ ಪ್ರಾರಂಭವಾಗಿಲ್ಲ. ಸದ್ಯ ಡೇಟಿಂಗ್ ನಲ್ಲಿರುವ, ಪ್ರೀತಿಯಲ್ಲಿ ಬಿದ್ದಿರುವ ಕೆಲವು ಸೆಲೆಬ್ರಿಟಿ ಸ್ಟಾರ್ಸ್ ಮುಂದಿನ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ವರುಣ್ ಧವನ್- ನಟಾಶಾ
ಬಾಲಿವುಡ್ ನಟ ವರುಣ್ ಧವನ್ ಬಾಲ್ಯದ ಗೆಳತಿ ನಟಾಶಾ ದಲಾಲ್ ಜೊತೆ ಪ್ರೀತಿಯಲ್ಲಿ ಇದ್ದಾರೆ. ಇಬ್ಬರು ಈ ವರ್ಷದ ಕೊನೆಯಲ್ಲೆ ಮದುವೆ ಆಗ್ತಾರೆ ಎನ್ನುವ ಸುದ್ದಿ ಜೋರಾಗೆ ಹಬ್ಬಿತ್ತು. ಆದ್ರೆ ಮೂಲಗಳ ಪ್ರಕಾರ ಈ ಜೋಡಿ ಮುಂದಿನ ವರ್ಷ ಹಸೆಮಣೆ ಏರಲಿದೆಯಂತೆ. 'ಕಳಂಕ್' ಸಿನಿಮಾದ ನಂತರ ವರುಣ್ ಈಗ ಸ್ಟ್ರೀಟ್ ಡ್ಯಾನ್ಸರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ರಣಬೀರ್ ಮತ್ತು ಅಲಿಯಾ
ಮದುವೆ ವಿಚಾರದಲ್ಲಿ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಲ್ಲಿರುವ ಜೋಡಿ ಅಂದ್ರೆ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್. ಇಬ್ಬರು ಲವ್ ರಿಲೇಶನ್ ಶಿಪ್ ನಲ್ಲಿ ಇದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಲ್ಲೆ ಇದೆ. ಸದ್ಯ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅಲಿಯಾ ಮತ್ತು ರಣಬೀರ್ ಮುಂದಿನ ವರ್ಷ ಸಮ್ಮರ್ ನಲ್ಲಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೆ ಅಲಿಯಾ ಮದುವೆ ಕಾಸ್ಟ್ಯೂಮ್ ಕೂಡ ತಯಾರಾಗುತ್ತಿದೆಯಂತೆ.

ಅರ್ಜುನ್-ಮಲೈಕಾ
ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರ ಮುಂದಿನ ವರ್ಷ ಮದುವೆಯಾಗಲಿದ್ದಾರೆ. ವಯಸ್ಸಿನಲ್ಲಿ ಅರ್ಜುನ್ ಗಿಂತ ತುಂಬಾ ದೊಡ್ಡವಳು ಮಲೈಕಾ. ಮಲೈಕಾ ನಟ ಮತ್ತು ನಿರ್ಮಾಪಕ ಅರ್ಬಾಜ್ ಖಾನ್ ಗೆ ವಿಚ್ಛೇದನ ನೀಡಿದ ನಂತರ ನಟ ಅರ್ಜುನ್ ಕಪೂರ್ ಜೊತೆ ಸುತ್ತಾಡುತ್ತಿದ್ದಾರೆ. ಇಬ್ಬರು ಕೂಡ ಪರಸ್ಪರ ಪ್ರೀತಿಸುತ್ತಿದ್ದು ಮುಂದಿನ ವರ್ಷ ಸಪ್ತಪದಿ ತುಳಿಯುವ ಸಾಧ್ಯತೆ ಇದೆ.

ಫರಾನ್ ಅಖ್ತಾರ್- ಶಿಬಾನಿ
ನಟ ಫರಾನ್ ಅಖ್ತಾರ್ ಕೂಡ ಎರಡನೆ ಮದುವೆಗೆ ಸಿದ್ಧರಾಗಿದ್ದಾರೆ. 2000ರಲ್ಲಿ ಅಧುನಾ ಭಬಾನಿ ಕೈಹಿಡಿದಿದ್ದ ಫರಾನ್ 2016ರಲ್ಲಿ ಪತ್ನಿಗೆ ವಿಚ್ಛೇದನ ನೀಡುವ ಮೂಲಕ ದಾಂಪತ್ಯ ಜೀವನಕ್ಕೆ ಎಳ್ಳು ನೀರು ಬಿಟ್ಟಿದ್ದರು. ಆ ನಂತರ ಶಿಬಾನಿ ದಾಂಡೇಕರ್ ಜೊತೆ ಡೇಟಿಂಗ್ ನಲ್ಲಿರುವ ಫರಾನ್ ಆಖ್ತಾರ್ ಮುಂದಿನ ವರ್ಷ ಮದುವೆಯಾಗುವ ನಿರ್ಧಾರ ಮಾಡಿದ್ದಾರಂತೆ.

ಸುಶ್ಮಿತಾ ಸೇನ್-ರೋಹ್ಮಾನ್
ಸುಶ್ಮಿತಾ ಸೇನ್ ಮತ್ತು ರೋಹ್ಮಾನ್ ಶಾನ್ ಇಬ್ಬರು ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷ ಹಸೆಮಣೆ ಏರಲು ಪ್ಲಾನ್ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೆ ಈ ಜೋಡಿ ಮದುವೆಗೆ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸುಮಾರು ಎರಡು ವರ್ಷಗಳಿಂದ ಒಟ್ಟಿಗೆ ಸುತ್ತಾಡಿಕೊಂಡಿದ್ದ ಈ ಜೋಡಿ ತಮ್ಮ ಸ್ನೇಹವನ್ನು ಮತ್ತೊಂದು ಲೆವೆಲ್ ಗೆ ತೆಗೆದುಕೊಂಡು ಹೋಗಲು ನಿರ್ಧಾರಿಸಿದ್ದಾರೆ. ಈ ವರ್ಷದ ಕೊನೆ ಅಂದ್ರೆ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಅಥವಾ ಮುಂದಿನ ವರ್ಷಾರಂಭದಲ್ಲಿ ಹಸೆಮಣೆ ಏರುವ ಸಾಧ್ಯತೆ ಇದೆ.