For Quick Alerts
  ALLOW NOTIFICATIONS  
  For Daily Alerts

  ಕತ್ರಿನಾ ಮಾಜಿ ಬಾಯ್‌ಫ್ರೆಂಡ್ ರಣಬೀರ್ ಮದುವೆ ಯಾರ ಜೊತೆ? ರಿವೀಲ್ ಆಯ್ತು!

  By Suneel
  |

  ಬಾಲಿವುಡ್ ನಲ್ಲಿ ಸದ್ಯ ಸಲ್ಮಾನ್ ಖಾನ್ ಮಾತ್ರವಲ್ಲದೇ ಮೋಸ್ಟ್ ಬ್ಯಾಚುಲರ್ ಲಿಸ್ಟ್ ನಲ್ಲಿ ರಣಬೀರ್ ಕಪೂರ್ ಸಹ ಇದ್ದಾರೆ ಅನ್ನೋದನ್ನ ಮರೆಯೋಹಾಗಿಲ್ಲ. ಆದರೆ ಕಳೆದ ವರ್ಷವೇ ರಣಬೀರ್ ಕಪೂರ್ ಮತ್ತು ಕತ್ರಿನಾ ಇಬ್ಬರು ಮದುವೆ ಆಗಲು ಪ್ಲಾನ್ ಮಾಡಿದ್ದಾರೆ ಎಂಬ ಗಾಳಿಸುದ್ದಿ ಬಿಟೌನ್ ನಲ್ಲಿ ಹಾಟ್ ಟಾಪಿಕ್ ಆಗಿತ್ತು. ಆದ್ರೂ ಸಹ ರಣಬೀರ್ ಬ್ಯಾಚುಲರ್ ಲೈಫ್ ಗೆ ಇನ್ನು ಗುಡ್ ಬಾಯ್ ಹೇಳಲು ಸಾಧ್ಯವಾಗಿಲ್ಲ.

  ಈಗ ಕೊನೆಗೂ ರಣಬೀರ್ ಕಪೂರ್ ತಮ್ಮ ಮದುವೆ ಬಗ್ಗೆ ಬಾಯಿಬಿಟ್ಟಿದ್ದು, ಮದುವೆ ಆಗಲಿರುವ ಹುಡುಗಿ ಯಾರು ಎಂಬ ಬಗ್ಗೆಯೂ ರಿವೀಲ್ ಮಾಡಿದ್ದಾರೆ. ಮುಂದೆ ಓದಿರಿ.

  ಚಿತ್ರ ಪ್ರಮೋಷನ್ ವೇಳೆ ತುಟಿಬಿಚ್ಚಿದ ರಣಬೀರ್

  ಚಿತ್ರ ಪ್ರಮೋಷನ್ ವೇಳೆ ತುಟಿಬಿಚ್ಚಿದ ರಣಬೀರ್

  ರಣಬೀರ್ ಕಪೂರ್ ಸದ್ಯ ತಮ್ಮ ಅಭಿನಯದ 'ಜಗ್ಗಾ ಜಸೂಸ್' ಚಿತ್ರ ಪ್ರಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ. ಈ ವೇಳೆ ಇತ್ತೀಚೆಗೆ ಅವರಿಗೆ ಮಾಧ್ಯಮದವರು 'ನಿಮ್ಮ ಆರೇಂಜ್ಡ್ ಮ್ಯಾರೇಜ್ ಗೆ ಪ್ಲಾನ್ ನಡೆದಿದೆ ಎಂದು ವರದಿಗಳಾಗಿವೆ. ಈ ಬಗ್ಗೆ ಏನ್ ಹೇಳ್ತೀರಿ' ಎಂಬ ಪ್ರಶ್ನೆ ಕೇಳಿದ್ದರು. ಅದಕ್ಕೆ ರಣಬೀರ್ ಉತ್ತರಿಸಿ, 'ನಾನು ಯಾವಾಗ್ಲೆ ಮದುವೆ ಆದ್ರು ಅದರ ಬಗ್ಗೆ ಏಕ್ ಮುಚ್ಚಿಡಬೇಕು?' ಎಂದಿದ್ದಾರೆ.

  ಆರೇಂಜ್ಡ್ ಮ್ಯಾರೇಜ್ ಗೆ ಸಿದ್ಧತೆ ನಡೆದಿಲ್ಲ

  ಆರೇಂಜ್ಡ್ ಮ್ಯಾರೇಜ್ ಗೆ ಸಿದ್ಧತೆ ನಡೆದಿಲ್ಲ

  'ನನಗೆ ಹುಡುಗಿ ಹುಡುಕಲು ನಮ್ಮ ಅಮ್ಮ ಲಂಡನ್ ಗೆ ಹೋಗಿದ್ದರು ಎಂದು ಸುದ್ದಿ ಹರಿದಾಡುತ್ತಿದೆ. ಆದರೆ ಆರೇಂಜ್ಡ್ ಮ್ಯಾರೇಜ್ ಗೆ ಈ ರೀತಿ ಯಾವುದೇ ಪ್ಲಾನ್ ನಡೆದಿಲ್ಲ' ಎಂದಿದ್ದಾರೆ 'ಜಗ್ಗಾ ಜಸೂಸ್' ನಟ.

  ಯಾರಿಂದಲೂ ಒತ್ತಡವಿಲ್ಲ

  ಯಾರಿಂದಲೂ ಒತ್ತಡವಿಲ್ಲ

  'ಆರೇಜ್ಡ್ ಮ್ಯಾರೇಜ್ ಗೆ ನಮ್ಮ ಪೋಷಕರಿಂದ ಯಾವುದೇ ರೀತಿಯಲ್ಲಿ ಒತ್ತಡವಿಲ್ಲ. ನಮ್ಮ ತಂದೆ ಆಗಲಿ, ಅಜ್ಜಿ ಆಗಲಿ ಯಾರು ಸಹ ಫೋರ್ಸ್ ಮಾಡಿಲ್ಲ' ಎಂದಿರುವ ರಣಬೀರ್ ಕಪೂರ್ ಕೊನೆಗೂ ತಾವು ಮದುವೆ ಆಗುವ ಹುಡುಗಿ ಬಗ್ಗೆ ರಿವೀಲ್ ಮಾಡಿದ್ದಾರೆ.

  ರಣಬೀರ್ ಮದುವೆ ಆಗುವ ಹುಡುಗಿ ಯಾರು?

  ರಣಬೀರ್ ಮದುವೆ ಆಗುವ ಹುಡುಗಿ ಯಾರು?

  ತಮ್ಮ ದಾಂಪತ್ಯ ಜೀವನದ ಬಗ್ಗೆ ಮಾಧ್ಯಮದವರ ಮುಂದೆ ಮಾತನಾಡಿರುವ ರಣಬೀರ್, 'ಖುಷಿಯ ವಿಚಾರ ಅಂದ್ರೆ ಮನೆಯವರು ನಾನು ಮದುವೆ ಆಗುವ ಹುಡುಗಿ ಆಯ್ಕೆ ವಿಷಯವನ್ನು ನನ್ನ ಮೇಲೆ ಬಿಟ್ಟಿದ್ದಾರೆ. ನಾನು ಯಾರನ್ನು ಪ್ರೀತಿಸುತ್ತಿದ್ದೇನೋ ಅವರನ್ನೇ ಮದುವೆ ಆಗುತ್ತೇನೆ ಎಂದು ಸಿಂಪಲ್ ಆಗಿಯೇ ಹೇಳಿ' ಎಲ್ಲರ ಕುತೂಹಲಕ್ಕೆ ಅಂತ್ಯವಾಡಿದ್ದಾರೆ. ಆದರೆ ರಣಬೀರ್ ತಾವು ಪ್ರೀತಿಸಿರುವ ಆ ಹುಡುಗಿ ಹೆಸರನ್ನು ಹೇಳಿಲ್ಲ.

  English summary
  Bollywood Actor Ranbir Kapoor Finally opens Up about The Woman He Will Marry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X