»   » ಪಟೌಡಿ ಬಯೋಪಿಕ್ ನಲ್ಲಿ ರಣಬೀರ್

ಪಟೌಡಿ ಬಯೋಪಿಕ್ ನಲ್ಲಿ ರಣಬೀರ್

Posted By: Chethan
Subscribe to Filmibeat Kannada

ಮುಂಬೈ, ಜ. 3: ಭಾರತೀಯ ಕ್ರಿಕೆಟ್ ಲೋಕದ ದಂತಕತೆ ದಿವಂಗತ ಮನ್ಸೂರ್ ಅಲಿ ಖಾನ್ ಪಟೌಡಿಯವರ ಜೀವನಾಧಾರಿತ ಚಲನಚಿತ್ರ ನಿರ್ಮಿಸಲು ಅವರ ಪುತ್ರ ಹಾಗೂ ನಟ ಸೈಫ್ ಅಲಿ ಖಾನ್ ಸಜ್ಜಾಗಿದ್ದಾರೆಂಬ ಸುದ್ದಿ ಬಾಲಿವುಡ್ ಅಂಗಳದಿಂದ ಬಂದಿದೆ.

ಹಾಗಾದರೆ, ಪಟೌಡಿ ಪಾತ್ರಕ್ಕೆ ಜೀವ ತುಂಬಲು ಸೈಫ್ ಯಾರನ್ನು ಆರಿಸಿಕೊಳ್ಳಲಿದ್ದಾರೆಂಬ ಸಹಜ ಕುತೂಹಲಕ್ಕೆ ಉತ್ತರವನ್ನೂ ಅವರೇ ಕೊಟ್ಟಿದ್ದಾರೆ. ಬಾಲಿವುಡ್ ನ ದಂತಕತೆಗಳಲ್ಲೊಬ್ಬರಾದ ರಾಜ್ ಕಪೂರ್ ಅವರ ಮೊಮ್ಮಗ ರಣಬೀರ್ ಕಪೂರ್ ಅವರನ್ನು ಪಟೌಡಿ ಪಾತ್ರಕ್ಕೆ ಆಯ್ದುಕೊಳ್ಳಲು ಸೈಫ್ ಚಿಂತನೆ ನಡೆಸಿದ್ದಾರೆ.

Ranbir Kapoor in Pataudi biopic?

ಆದರಿದು ಸೈಫ್ ಅವರ ಆಯ್ಕೆಯಲ್ಲ! ಅವರ ತಾಯಿ ಹಾಗೂ ಬಾಲಿವುಡ್ ನ ಮಾಡಿ ನಟಿ ಶರ್ಮಿಳಾ ಠಾಗೋರ್ ಅವರ ಆಯ್ಕೆಯಂತೆ. ನಡೆದಾಡುವುದು, ಸಿಗರೇಟ್ ಸೇದುವುದು, ಮಾತನಾಡುವುದು ಎಲ್ಲರದಲ್ಲೂ ಸ್ಟೈಲಿಷ್ ಆಗಿದ್ದ ಪಟೌಡಿ ಅವರ ಪಾತ್ರಕ್ಕೆ ನಟ ರಣಬೀರ್ ಅವರೇ ಸೂಕ್ತ ಎಂದು ನಮ್ಮ ತಾಯಿ ಹೇಳಿದ್ದಾರೆನ್ನುವುದು ಸೈಫ್ ಮಾತು. ಆದರೆ ಯಾವುದೂ ಫೈನಲ್ ಆಗಿಲ್ಲ. ಸೂಕ್ತ ತಯಾರಿ, ಪಾತ್ರಧಾರಿಗಳ ಆಯ್ಕೆ ಮುಂತಾದ ಚಿತ್ರತಯಾರಿಕೂ ಪೂರ್ವ ಪ್ರಕ್ರಿಯೆಗಳು ನಡೆದ ಮೇಲೆ ಚಿತ್ರವನ್ನು ಅನೌನ್ಸ್ ಮಾಡುವುದಾಗಿ ಹೇಳಿದ್ದಾರೆ ಸೈಫ್.

ಅಂದಹಾಗೆ, ಬಾಲಿವುಡ್ ನಲ್ಲಿ ಮೂರ್ನಾಲ್ಕು ವರ್ಷಗಳ ಹಿಂದೆ ಶುರುವಾದ ಕ್ರೀಡಾಪಟುಗಳ ಜೀವನಾಧಾರಿತ ಚಿತ್ರಗಳ ಸದ್ದು ಇಂದಿಗೂ ಮುಂದುವರಿದಿದೆ. ಒಂದರ ಹಿಂದೊಂದರಂತೆ ಬರುತ್ತಿರುವ ಇಂಥ ಚಿತ್ರಗಳು ಚಿತ್ರ ನಿರ್ಮಾಪಕರಿಗೆ ಕಾಂಚಾಣದ ಸುಗ್ಗಿಯನ್ನೂ ತಂದಿತ್ತಿವೆ. ಹೀಗೆ, ಚಾಲ್ತಿ ಇರುವ ಟ್ರೆಂಡ್ ಹಿಂದೆ ಬೀಳುವುದು ಸಿನಿಮಾ ರಂಗದ ಚಾಳಿಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರೀಡಾಪಟುಗಳ ಜೀವನಕಥೆಯನ್ನಾಧರಿಸಿದ ಚಿತ್ರಗಳು ಬರುತ್ತಲೇ ಇರುತ್ತವೆಂಬುದು ಅಪ್ಪಟ ಸತ್ಯ.

English summary
Bollywood actor Saif ali Khan has decided to do a biopic on his father and former cricketer Mansoor Ali Khan Pataudi. He wants Ranbir Kapoor to do his father's role in that biopic.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada