For Quick Alerts
  ALLOW NOTIFICATIONS  
  For Daily Alerts

  ತಾಪ್ಸಿ ಪನ್ನು, ಸ್ವರಾ ಭಾಸ್ಕರ್ ಮೇಲೆ ಹರಿಹಾಯ್ದ ಕಂಗನಾ ಸಹೋದರಿ

  |

  ತಾಪ್ಸಿ ಪನ್ನು, ಸ್ವರಾ ಭಾಸ್ಕರ್ ವಿರುದ್ಧದ ದ್ವೇಷವನ್ನು ಕಂಗನಾ ಸಹೋದರಿಯರು ಮುಂದುವರೆಸಿದ್ದಾರೆ. ಇದೀಗ ಕಂಗನಾ ಸಹೋದರಿ ರಂಗೋಲಿ ಈ ಇಬ್ಬರು ನಟಿಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ರಂಗೋಲಿ, ತಾಪ್ಸಿ ಮತ್ತು ಹಾಗೂ ಸ್ವರಾ ಭಾಸ್ಕರ್ ಅನ್ನು 'ಬಿ ಗ್ರೇಡ್ ನಟಿಯರು' ಎಂದು ಕರೆದಿದ್ದಾರೆ.

  ನಾನು ನನ್ನ ಕುಟುಂಬ ಕಷ್ಟದ ಸಮಯದಲ್ಲಿದ್ದಾಗ ಬಿ ಗ್ರೇಡ್ ನಟಿಯರಾದ ತಾಪ್ಸಿ ಪನ್ನು ಹಾಗೂ ಸ್ವರಾ ಭಾಸ್ಕರ್ ನಮ್ಮ ನೋವನ್ನು ಎಂಜಾಯ್ ಮಾಡುತ್ತಿದ್ದರು. ಕಂಗನಾರ ಕಚೇರಿಯನ್ನು ಧ್ವಂಸ ಮಾಡಿದಾಗ ಇವರು ಖುಷಿಪಟ್ಟಿದ್ದರು, ಅಲ್ಲದೆ, ಕಚೇರಿಯನ್ನು ಒಡೆದಿದ್ದು ಕಾನೂನಾತ್ಮಕವಾಗಿ ಸರಿ ಎಂದು ವಾದಿಸಿದ್ದರು ಎಂದಿದ್ದಾರೆ ರಂಗೋಲಿ.

  'ನಾನು ಈಗಲೂ ಇವರನ್ನು ಕೋರ್ಟ್‌ ಎಳೆಯಬಲ್ಲೆ, ಆದರೆ ಕಂಗನಾ ಗೆ ಅದು ಇಷ್ಟವಿಲ್ಲ, ಹಾಗಾಗಿ ಇವರುಗಳ ವಿರುದ್ಧ ದೂರು ನೀಡಿಲ್ಲ. ತಾಪ್ಸಿ ಪನ್ನು, ಸ್ವರಾ ಭಾಸ್ಕರ್ ಅವರುಗಳು ಹೊಟ್ಟೆಕಿಚ್ಚಿನ, ಬಿ ಗ್ರೇಡ್ ಮಹಿಳೆಯರು, ಅವರು ಕಂಗನಾ ಬಗ್ಗೆ ಏನೇ ಹೇಳಿದರು ಕೇಳಬೇಡಿ' ಎಂದಿದ್ದಾರೆ.

  English summary
  Kangana Ranaut sister Rangoli called Taapsee pannu and Swara Bhaskar as B-grade women.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X