twitter
    For Quick Alerts
    ALLOW NOTIFICATIONS  
    For Daily Alerts

    ಕಚ್ಚಾ ಬಾದಾಮ್ ಹಾಡು ಹಾಡಿ ಟೀಕೆಗೆ ಗುರಿಯಾದ ರಾನು ಮಂಡಲ್ ನೆಟ್ಟಿಗರಿಂದ ಫುಲ್ ಕ್ಲಾಸ್!

    |

    ಸೋಶಿಯಲ್ ಮೀಡಿಯದಲ್ಲಿ ಈಗ ದಿನಬೆಳಗಾದರೆ ಒಬ್ಬರು ಫೇಮಸ್ ಆಗಿರುತ್ತಾರೆ. ಹಾಡು ಹೇಳಿ ಅಥವಾ ಡ್ಯಾನ್ಸ್ ಮಾಡಿ ರಾತ್ರೋ ರಾತ್ರಿ ಸ್ಟಾರ್‌ಗಳಾಗಿ ಗುರುತಿಸಿಕೊಂಡಿರುತ್ತಾರೆ. ಆದರೆ ತಮಗೆ ಒಲಿದುಬಂದ ಆ ಖ್ಯಾತಿಯನ್ನು ಉಳಿಸಿಕೊಳ್ಳುವುದು ಹೇಗೆ ಎನ್ನುವುದು ಕೂಡಾ ನಿಮಗೆ ಗೊತ್ತಿರಬೇಕು. ರಾನು ಮಂಡಲ್, ಹೆಸರನ್ನು ನೀವು ಕೇಳಿರಲೇಬೇಕು. ರೈಲ್ವೆ ಸ್ಟೇಷನ್, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಹಾಡುತ್ತಾ ಜೀವನ ಸಾಗಿಸುತ್ತಿದ್ದ ರಾನು ಮಂಡಲ್ ಹಾಡಿನ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಗಾಯಕ, ಸಂಗೀತ ನಿರ್ದೇಶಕ ಹಿಮೇಶ್​​​​​ ರೆಶಮಿಯಾ, ರಾನು ಮಂಡಲ್ ರನ್ನು ಕರೆದು ತಮ್ಮ ಸಿನಿಮಾದಲ್ಲಿ ಹಾಡಲು ಅವಕಾಶ ನೀಡಿದರು. ತೇರಿ ಮೇರಿ ಕಹಾನಿ ಹಾಡು ಹಾಡಿದ ನಂತರ ರಾನು ಏಕಾ ಏಕಿ ಸ್ಟಾರ್ ಆಗಿಬಿಟ್ರು. ಆದರೆ ಎಷ್ಟು ಬೇಗ ಅವರು ಖ್ಯಾತಿ ಗಳಿಸಿದರೋ, ಅವರ ವರ್ತನೆಯಿಂದ ಅಷ್ಟೇ ಬೇಗ ಅದನ್ನು ಕಳೆದುಕೊಂಡರು. ಈಗ ಒಂದಲ್ಲಾ ಒಂದು ವಿಚಾರಕ್ಕೆ ರಾನು ಮಂಡಲ್ ಟ್ರೋಲ್ ಆಗುತ್ತಲೇ ಇದ್ದಾರೆ.

    ಕಳೆದ ಡಿಸೆಂಬರ್​​​​ನಿಂದ ಸೋಷಿಯಲ್ ಮೀಡಿಯಾದಲ್ಲಿ ಕಚ್ಛಾ ಬಾದಾಮ್ ಹಾಡು ವೈರಲ್ ಆಗುತ್ತಿರುವುದು ಬಹಳ ಜನರಿಗೆ ತಿಳಿದ ವಿಚಾರ. ದೇಶಾದ್ಯಂತ ಜನರು ಈ ಹಾಡಿಗೆ ರೀಲ್ಸ್ ಮಾಡಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​​​ಲೋಡ್ ಮಾಡುತ್ತಾ ಲೈಕ್ಸ್, ಕಮೆಂಟ್ ನೋಡಿ ಖುಷಿ ಪಡುತ್ತಿದ್ದಾರೆ. ಈ ನಡುವೆ ಈ ಕಚ್ಛಾ ಬಾದಾಮ್ ಹಾಡು ಹಾಡಿ ರಾನು ಮಂಡಲ್ ಟ್ರೋಲ್ ಆಗಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದು ಎಲ್ಲರೂ ರಾನು ಮಂಡಲ್​​​​​​​​​ ಈ ಹಾಡನ್ನು ಹಾಡದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು RIP ಬಾದಾಮ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ಹಾಡು ಕೇಳಿದ ನಂತರ ನಾನು ಕಡ್ಲೆಕಾಯಿ ತಿನ್ನುವುದನ್ನೇ ಬಿಟ್ಟೆ ಎಂದು ಮತ್ತೊಬ್ಬರು ರಾನುವನ್ನು ಅಪಹಾಸ್ಯ ಮಾಡಿದ್ದಾರೆ. ಕಳೆದ ವರ್ಷ ಶ್ರೀಲಂಕಾ ಮೂಲಕ ಯುವ ಗಾಯಕಿ ಯೊಹಾನಿ ಹಾಡಿದ್ದ ಮನಕೇ ಮಗೇ ಹಿತೇ ಹಾಡನ್ನು ಕೂಡಾ ರಾನು ಮಂಡಲ್ ಹಾಡಿದ್ದರು. ಆಗಲೂ ಕೂಡಾ ಇದೇ ರೀತಿ ಆಕೆ ಟ್ರೋಲ್ ಆಗಿದ್ದರು.

    Ranu Mandal sang the song ‘Kachha Badam

    ಅಷ್ಟೇ ಅಲ್ಲ, ಮತ್ತೊಂದು ವಿಡಿಯೋದಲ್ಲಿ ರಾನು ಮಂಡಲ್, ಈ ಕಚ್ಚಾ ಬಾದಾಮ್ ಹಾಡಿಗೆ ಡ್ಯಾನ್ಸ್ ಕೂಡಾ ಮಾಡಿದ್ದಾರೆ. ಈ ವಿಡಿಯೋ ಕೂಡಾ ವೈರಲ್ ಆಗುತ್ತಿದೆ. "ಹೇಗೋ ಹಿಮೇಶ್ ರೇಶಮಿಯಾ, ನಿಮಗೊಂದು ಒಳ್ಳೆ ಬದುಕು ನೀಡಿದ್ದರು. ನಿಮ್ಮ ಅಹಂಕಾರದ ವರ್ತನೆಯಿಂದ ಸಿಕ್ಕಿದ್ದನ್ನೂ ಕಳೆದುಕೊಂಡಿರಿ. ಇದೀಗ ಮತ್ತೆ ಈ ರೀತಿ ಹಾಡು ಹಾಡಿ, ಡ್ಯಾನ್ಸ್ ಮಾಡಿ ಇರುವ ಒಂದಿಬ್ಬರು ಅಭಿಮಾನಿಗಳನ್ನೂ ಕಳೆದುಕೊಳ್ಳಬೇಡಿ" ಎಂದು ಮನವಿ ಮಾಡುತ್ತಿದ್ದಾರೆ. ಆದರೆ ರನು ಮಂಡಲ್​​​ ಹಾಡನ್ನು ಇಷ್ಟಪಡುವವರು ಮಾತ್ರ, "ದೇಶದಲ್ಲಿ ಯಾರ್ಯಾರೋ ಕಚ್ಚಾ ಬಾದಾಮ್ ಹಾಡಿಗೆ ರೀಲ್ಸ್ ಮಾಡಿ ಅಪ್​​​ಲೋಡ್ ಮಾಡುತ್ತಿರುವಾಗ ರಾನು ಮಂಡಲ್ ಮಾಡುವುದರಲ್ಲಿ ತಪ್ಪೇನಿದೆ" ಎಂದು ಪ್ರಶ್ನಿಸುತ್ತಿದ್ದಾರೆ.

    ಪಶ್ಚಿಮ ಬಂಗಾಳದ ಭುಬನ್ ಬದ್ಯಕರ್ ಎಂಬ ಕಡಲೆಕಾಯಿ ವ್ಯಾಪಾರಿ ಕಿಲೋ ಮೀಟರ್​​​ಗಟ್ಟಲೆ ಸೈಕಲ್ ತುಳಿದು ಕಡಲೆಕಾಯಿ ಮಾರಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಭುಬನ್ ಕಡಲೆಕಾಯಿ ಮಾರುವಾಗ ಜನರನ್ನು ಸೆಳೆಯಲು ಹಾಡುತ್ತಿದ್ದ ಹಾಡನ್ನು ಯಾರೋ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಇದನ್ನು ನೋಡಿದ ನಮ್ಜು ರಿಚತ್ ಎಂಬ Rapper ಈ ಹಾಡನ್ನು ರಿಮಿಕ್ಸ್ ಮಾಡಿದ್ದಾರೆ. ಜೊತೆಗೆ ಈ ಆಲ್ಬಂನಲ್ಲಿ ಭುಬನ್ ಬದ್ಯಕರ್ ಅವರನ್ನೂ ಬಳಸಿಕೊಂಡಿದ್ದಾರೆ. ಯೂಟ್ಯೂಬ್​​​​​ನಲ್ಲಿ ಈ ಹಾಡಿಗೆ 34 ಮಿಲಿಯನ್​​ಗೂ ಹೆಚ್ಚು ವ್ಯೂವ್ಸ್ ದೊರೆತಿದೆ.

    ಈ ಹಾಡು ಕೇಳಿ ಯಾವ ಭಾಷೆಯ ಹಾಡಿದು ಅಂಥ ಹುಡುಕಿ ಜನ ತಲೆಕಡಿಸಿಕೊಂಡಿದ್ದರು. ಇದು ಇಂಥ ಹಾಡು, ಇಲ್ಲಿಂದ ಹುಟ್ಟಿ ಬಾಂಗ್ಲಾ ನಾಡಿಗೆ ಕಾಲಿಟ್ಟು ಅಲ್ಲಿಂದ ರಿಮಿಕ್ಸ್ ಡಿಜೆಯಾಗಿ ಅಲ್ಲಿಂದ ಎಲ್ಲೆಡೆ ಹರಡಿ ಬಾದಾಮ್​ ಬಾದಾಮ್​ ಆದ ಈ ಹಾಡು ಓರ್ವ ಶೇಂಗಾ ವ್ಯಾಪಾರಿಯ ಬಾಯಿಂದ ಹೊರಬಿದ್ದ ಅಪ್ಪಟ ದೇಸಿತನದ ತುಣುಕು. ಆತ ಶೇಂಗಾವನ್ನು 'ಬದಾಮ್ ಕಾಚಾ ಬದಾಮ್' ಅಂದಿದ್ದಾನೆ. ಏನೇನೋ ವಿಶೇಷತೆ ಕೊಟ್ಟು ಬಿಕರಿಗಿಳಿದಿದ್ದಾನೆ. ತನ್ನ ಜೀವನ ನೋಡಿಕೊಳ್ಳಲು ಕಡಲೆಕಾಯಿ ಮಾರುವಾಗ ಹೇಳಿದ ಹಾಡು ಇಷ್ಟು ಫೇಮಸ್ ಆಗುತ್ತೆ ಎಂದ ಆತ ಅಂದುಕೊಂಡಿರಲಿಲ್ಲ ಅನ್ನಿಸುತ್ತೆ.

    Ranu Mandal sang the song ‘Kachha Badam

    ಇನ್ನು ರಾನು ಮಂಡಲ್ ಅವರನ್ನು ಹಿಮೇಶ್​ ಅವರು 'ತೇರಿ ಮೇರಿ ಕಹಾನಿ..' ಹಾಡು ಹೇಳೋಕೆ ಅವಕಾಶ ನೀಡಿದ್ದರು. ಇದಾದ ನಂತರದಲ್ಲಿ ಸಾಕಷ್ಟು ಶೋಗಳಿಗೆ ಅತಿಥಿ​ ಆಗುವ ಅವಕಾಶ ಅವರಿಗೆ ಸಿಕ್ಕಿತ್ತು. ಇದೆಲ್ಲವನ್ನೂ ಅವರು ಬೇಡ ಎನ್ನಲೇ ಇಲ್ಲ. ಈಗ ರಾನು ಜೀವನದ ಕಥೆ ಬಯೋಪಿಕ್​ ಆಗುತ್ತಿದೆ ಎಂಬ ಸುದ್ದಿ ಕೂಡ ಈ ಹಿಂದೆ ಕೇಳಿ ಬಂದಿತ್ತು. ರಿಶಿಕೇಶ್​ ಮಂಡಲ್​ ಅವರು ಈ ಬಯೋಪಿಕ್​ ನಿರ್ದೇಶನ ಮಾಡುತ್ತಿದ್ದಾರೆ. ಇಶಿಕಾ ಡೇ ಅವರು ರಾನು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಮಿಸ್​ ರಾನು ಮರಿಯಾ' ಎಂದು ಸಿನಿಮಾಗೆ ಟೈಟಲ್​ ಫಿಕ್ಸ್​ ಮಾಡಲಾಗಿದೆ ಎನ್ನಲಾಗುತ್ತಿತ್ತು.

    ರಾನು ಪಶ್ಚಿಮ ಬಂಗಾಳದವರು. ಹೀಗಾಗಿ, ಬೆಂಗಾಲಿ ಭಾಷೆಯಲ್ಲಿ ಮಾತ್ರ ಈ ಸಿನಿಮಾ ಮಾಡುವ ಆಲೋಚನೆ ಚಿತ್ರತಂಡದ್ದಾಗಿತ್ತು. ಆದರೆ, ರಾನುಗೆ ದೇಶಾದ್ಯಂತ ಪ್ರಚಾರ ಸಿಕ್ಕಿದೆ. ಈ ಕಾರಣಕ್ಕೆ ಹಿಂದಿ ಭಾಷೆಯಲ್ಲೂ ಸಿನಿಮಾ ಮಾಡುವ ಆಲೋಚನೆ ಚಿತ್ರತಂಡಕ್ಕೆ ಬಂದಿದೆ. ಹಿಮೇಶ್​ ಕೂಡ ಈ ಸಿನಿಮಾಗಾಗಿ ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ಮಾರ್ಚ್​ ಅಥವಾ ಏಪ್ರಿಲ್​ ವೇಳೆಗೆ ಸಿನಿಮಾ ರಿಲೀಸ್​ ಆಗುವ ನಿರೀಕ್ಷೆ ಇದೆ. ಈ ಬಯೋಪಿಕ್​ ವಿಚಾರ ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಈ ಸಿನಿಮಾ ಹೇಗಿರಬಹುದು ಎನ್ನುವ ಪ್ರಶ್ನೆ ಪ್ರೇಕ್ಷಕರನ್ನು ಕೊರೆಯೋಕೆ ಆರಂಭಿಸಿದೆ.

    English summary
    now this song has been sung by Ranu Mandal in her own style. Which is becoming quite viral on social media.
    Saturday, February 5, 2022, 9:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X