For Quick Alerts
  ALLOW NOTIFICATIONS  
  For Daily Alerts

  64ನೇ ಫಿಲಂಫೇರ್ ಪ್ರಶಸ್ತಿ, ಶಾರುಖ್ ನಿರೂಪಣೆ, ರಣವೀರ್ ಆಕರ್ಷಣೆ

  By ಜೇಮ್ಸ್ ಮಾರ್ಟಿನ್
  |

  ಈ ವರ್ಷದ ಬಹು ನಿರೀಕ್ಷಿತ ಪ್ರಶಸ್ತಿ ಸಮಾರಂಭ, 64ನೇ ವಿಮಲ್ ಫಿಲಂ ಫೇರ್ ಪ್ರಶಸ್ತಿ 2019 ಸಮಾರಂಭವು ಮಾರ್ಚ್ 23, 2019 ರಂದು ಜಿಯೋ ಗಾರ್ಡನ್ ನಲ್ಲಿ ನಡೆಯಲಿದೆ. ವೈಕಾಮ್ 18 ಮತ್ತು ಸೂಪರ್ ಸ್ಟಾರ್ ರಣ್ ವೀರ್ ಸಿಂಗ್ ಅವರು ಪ್ರತಿಷ್ಠಿತ ಪ್ರಶಸ್ತಿ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ. ಶಾರುಖ್ ಖಾನ್ ಕಾರ್ಯಕ್ರಮವನ್ನು ಹೋಸ್ಟ್ ಮಾಡಲಿದ್ದಾರೆ ಮತ್ತು ಹಾಸ್ಯಭರಿತ ಮಾತುಗಳಿಂದ ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಎಂದು ಫಿಲಂ ಫೇರ್ ಸಂಪಾದಕರಾದ ಜಿತೇಶ್ ಪಿಳ್ಳೈ ಘೋಷಿಸಿದರು.

  ಫಿಲಂ ಫೇರ್ ಸಂಪಾದಕರಾದ ಜಿತೇಶ್ ಪಿಳ್ಳೈ, ಹಿಂದಿ ಮಾಸ್ ಎಂಟರ್ ಟೈನ್ ಮೆಂಟ್ ಹಾಗೂ ಕಿಡ್ಸ್ ಟಿವಿ ನೆಟ್ವರ್ಕ್ ನ ಮುಖ್ಯಸ್ಥೆ ನಿನಾ ಎಲಾವಿಯಾ ಜೈಪುರಿಯಾ ಅವರು ಫಿಲಂಫೇರ್ ಪ್ರಶಸ್ತಿ ಸಮಾರಂಭ ದಿನಾಂಕವನ್ನು ಪ್ರಕಟಿಸಿದರು.

  ಕಳೆದ ಹಲವಾರು ವರ್ಷಗಳಿಂದ, ಫಿಲಂ ಫೇರ್ ದೇಶದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ವಿಮಲ್ ಅವರ ಮೊದಲ ಸಹಭಾಗಿತ್ವದಲ್ಲಿ, ಈ ಬಾರಿ ತನ್ನ 64 ನೇ ವರ್ಷದ ಪ್ರಶಸ್ತಿಗೆ ಹಲವಾರು ವರ್ಗಗಳ ಅಡಿಯಲ್ಲಿ ಅತ್ಯುತ್ತಮವಾದುದನ್ನು ಆಯ್ಕೆ ಮಾಡಲು ನಿರ್ಧರಿಸಿದೆ.

  ಸಂಜೆ ನಡೆಯುವ ಸಮಾರಂಭದಲ್ಲಿ ಯಾವೆಲ್ಲಾ ಸೆಲೆಬ್ರಿಟಿಗಳು ಪಾಲ್ಗೊಳ್ಳುತ್ತಾರೆ ಎಂಬುದೂ ಕುತೂಹಲ ಹೆಚ್ಚಿಸುವ ಅಂಶವಾಗಿರಲಿದೆ. ಈ ಕಾರ್ಯಕ್ರಮದಲ್ಲಿ ಅತ್ಯುತ್ತಮ ಚಲನಚಿತ್ರಗಳು ಮತ್ತು ನಟ/ನಟಿಯರು ಮತ್ತು ಫಿಲಂ ಫೇರ್ ಶಾರ್ಟ್ ಫಿಲ್ಮ್ ಪ್ರಶಸ್ತಿಗಳ ಮೂರನೇ ಆವೃತ್ತಿಯ ವಿಜೇತರ ಹೆಸರುಗಳನ್ನು ಪ್ರಕಟಿಸಲಾಗುತ್ತದೆ.

  ಫಿಲಂ ಫೇರ್ ಸಂಪಾದಕ, ಜಿತೇಶ್ ಪಿಳ್ಳೈ

  ಫಿಲಂ ಫೇರ್ ಸಂಪಾದಕ, ಜಿತೇಶ್ ಪಿಳ್ಳೈ

  ಫಿಲಂ ಫೇರ್ ಪ್ರಶಸ್ತಿ ಅರಂಭವಾದಂದಿನಿಂದ ಒಡನಾಟ ಹೊಂದಿರುವ ಫಿಲಂ ಫೇರ್ ಸಂಪಾದಕ, ಜಿತೇಶ್ ಪಿಳ್ಳೈ, "ಹಿಂದಿನ ವರ್ಷಕ್ಕಿಂತ ಈ ವರ್ಷದಲ್ಲಿ ಕಾರ್ಯಕ್ರಮ ಹೆಚ್ಚು ಅದ್ದೂರಿಯಾಗಿ ನಡೆಯಲಿದೆ. ರಣವೀರ್ ತನ್ನ ಪ್ರದರ್ಶನದಿಂದ ಕಾರ್ಯಕ್ರಮದ ರಂಗನ್ನು ಹೆಚ್ಚಿಸಲಿದ್ದಾರೆ. ಅವರ ಪ್ರದರ್ಶನದ ವೀಕ್ಷಣೆಗೆ ಫಿಲಂ ಫೇರ್ ರಾತ್ರಿಯ ತನಕ ಕಾಯಲೇಬೇಕಿದೆ" ಎಂದರು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬಾಲಿವುಡ್ ನ ಸೂಪರ್ ಸ್ಟಾರ್ ಗಳಾದ ವಿಕಿ ಕೌಶಲ್, ಕೃತಿ ಸನೋನ್, ಜಾನ್ವಿ ಕಪೂರ್, ರಾಜ್ ಕುಮಾರ್ ರಾವ್ ಅವರೊಂದಿಗೆ ಹಲವು ನಟ/ನಟಿಯರು ಪ್ರದರ್ಶನ ನೀಡಲಿದ್ದಾರೆ.

  ಬಾಲಿವುಡ್ ನ ಪವರ್ ಸ್ಟಾರ್ ರಣವೀರ್ ಸಿಂಗ್

  ಬಾಲಿವುಡ್ ನ ಪವರ್ ಸ್ಟಾರ್ ರಣವೀರ್ ಸಿಂಗ್

  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಲಿವುಡ್ ನ ಪವರ್ ಸ್ಟಾರ್ ರಣವೀರ್ ಸಿಂಗ್, "ಫಿಲಂ ಫೇರ್ ನೊಂದಿಗಿನ ನನ್ನ ಸಹಭಾಗಿತ್ವ ಸದಾ ಅದ್ಭುತವಾದದ್ದು. ಮನರಂಜನೆ ವಿಷಯಕ್ಕೆ ಬಂದಾಗ ಇದು ಬಹು ದೊಡ್ಡ ವೇದಿಕೆ. ನನ್ನ ಅಭಿಮಾನಿಗಳಿಗಾಗಿ ನೇರ ಪ್ರದರ್ಶನ ನೀಡುವುದು ನನಗೆ ಸಂತೋಷ ತಂದಿದೆ ಮತ್ತು ಈ ವರ್ಷ ನಾವು ನಮ್ಮ ಪ್ರೇಕ್ಷಕರಿಗೆ ವಿಶೇಷ ಯೋಜನೆಯನ್ನು ಹೊಂದಿದ್ದೇವೆ" ಎಂದರು.

  ರಣವೀರ್ ಶೋ ಸ್ಟಾಪರ್ ಆಗಿ ಆಯ್ಕೆ

  ರಣವೀರ್ ಶೋ ಸ್ಟಾಪರ್ ಆಗಿ ಆಯ್ಕೆ

  ಈ ಸಂದರ್ಭದಲ್ಲಿ ಮಾತನಾಡಿದ ವರ್ಲ್ಡ್ ವೈಡ್ ಮೀಡಿಯಾದ ಸಿಇಒ ದೀಪಕ್ ಲಂಬಾ, " ಕಳೆದ ಹಲವಾರು ವರ್ಷಗಳಿಂದ, ಫಿಲಂ ಫೇರ್ ಮನರಂಜನಾ ಉದ್ಯಮದಲ್ಲಿ ಬೆಂಚ್ ಮಾರ್ಕ್ ಅನ್ನು ಸ್ಥಾಪಿಸಿದೆ. ಮೂಲತಃ ಟಿವಿ ಕಾರ್ಯಕ್ರಮವಾಗಿ ಆರಂಭವಾದ ಫಿಲಂಫೇರ್ ಇದೀಗ ದೊಡ್ಡಪ್ರಮಾಣದಲ್ಲಿ ಮನರಂಜನಾ ಕಾರ್ಯಕ್ರಮವಾಗಿ ಬದಲಾಗಿದೆ. ಫಿಲಂ ಫೇರ್ ವೇದಿಕೆಯಲ್ಲಿ ರಣವೀರ್ ಗಿಂತ ಉತ್ತಮವಾಗಿ ಮನರಂಜನೆ ನೀಡಬಲ್ಲವರು ಬೇರಾರಿದ್ದಾರೆ? ಅವರು ಫಿಲಂ ಫೇರ್ ಕುಟುಂಬದ ಭಾಗವಾಗಿದ್ದಾರೆ, ಮತ್ತು ಈ ವರ್ಷದ ಶೋ ಸ್ಟಾಪರ್ ಆಗಿ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಲು ನಮಗೆ ಆನಂದವಾಗುತ್ತದೆ.

  ವರ್ಲ್ಡ್ ವೈಡ್ ಮೀಡಿಯಾದ ಸಿಇಒ ದೀಪಕ್ ಲಂಬಾ

  ವರ್ಲ್ಡ್ ವೈಡ್ ಮೀಡಿಯಾದ ಸಿಇಒ ದೀಪಕ್ ಲಂಬಾ

  ಮೊದಲ ಬಾರಿಗೆ ನಮ್ಮ ಶೀರ್ಷಿಕೆಯ ಪಾಲುದಾರರಾಗಿರುವ ವಿಮಲ್ ಗೆ ನಾನು ಸ್ವಾಗತ ಕೋರುತ್ತಿದ್ದೇನೆ ಮತ್ತು ಈ ಸಂಬಂಧ ಫಲಪ್ರದವಾಗಿ ಮುಂದುವರಿಯಲಿ ಎಂದು ನಾನು ಬಯಸುತ್ತೇನೆ. ಈ ಪ್ರದರ್ಶನಕ್ಕೆ ಅತ್ಯುತ್ತಮವಾಗಿ ಪ್ರಚಾರ ನೀಡುತ್ತಿರುವ ಕಲರ್ಸ್ ಚಾನೆಲ್ ಗೂ ನಾನು ಧನ್ಯವಾದ ತಿಳಿಸುತ್ತಿದ್ದೇನೆ. ವಿವಿಧ ಬ್ರಾಡ್ ಕಾಸ್ಟರ್ ಮತ್ತು ಡಿಜಿಟಲ್ ಮಾಧ್ಯಮಗಳೊಂದಿಗಿನ ನಮ್ಮ ಪಾಲುದಾರಿಕೆಯಿಂದ, ಇಂದು ಫಿಲಂಫೇರ್ ಪ್ರಶಸ್ತಿಗಳು 2 ಬಿಲಿಯನ್ ಜನರನ್ನು ತಲುಪುತ್ತಿದೆ. ಪರಿಣಾಮವಾಗಿ ಬಾಲಿವುಡ್ ನಲ್ಲಿ ಆಸಕ್ತಿ ಹೊಂದಿರುವ ಮಂದಿ ನಮ್ಮ ವಿಷಯವನ್ನು ಕೆಲವು ವೇದಿಕೆಯಲ್ಲಿ ಅಥವಾ ಇನ್ನಿತರ ಭಾಗಗಳಲ್ಲಿ ಬಳಸಿಕೊಳ್ಳುತ್ತಾರೆ. ಇದು ಭಾರತೀಯ ಚಲನಚಿತ್ರೋದ್ಯಮದಲ್ಲಿ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸುವ ಅತಿದೊಡ್ಡ ವೇದಿಕೆಯಾಗಿದೆ ಎಂಬುದರಲ್ಲಿ ಅನುಮಾನವಿಲ್ಲ" ಎಂದರು.

  English summary
  64th Vimal Filmfare Awards 2019. The highly-anticipated award ceremony of the year will soon commemorate the best of Bollywood, as Filmfare today announced that the prestigious 64th Vimal Filmfare Awards 2019 will be held on 23rd March, 2019 at the Jio Garden.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X