»   » '1983' ಚಿತ್ರದಲ್ಲಿ ಕಪಿಲ್ ದೇವ್ ಪಾತ್ರಕ್ಕೆ ನಾಯಕ ನಟ ಸಿಕ್ಕಾಯ್ತು

'1983' ಚಿತ್ರದಲ್ಲಿ ಕಪಿಲ್ ದೇವ್ ಪಾತ್ರಕ್ಕೆ ನಾಯಕ ನಟ ಸಿಕ್ಕಾಯ್ತು

Posted By:
Subscribe to Filmibeat Kannada

ಸಚಿನ್ ತೆಂಡೂಲ್ಕರ್, ಎಂ.ಎಸ್ ಧೋನಿ, ಅಜರುದ್ದೀನ್.....ಹೀಗೆ ಕ್ರಿಕೆಟ್ ಆಟಗಾರರ ಕುರಿತು ಹಲವು ಸಿನಿಮಾಗಳು ಬಂದಿದೆ. ಈಗ 1983ರ ವಿಶ್ವಕಪ್ ಕುರಿತು ಸಿನಿಮಾವಾಗುತ್ತಿದ್ದು, ಕಬೀರ್ ಖಾನ್ ನಿರ್ದೇಶನ ಮಾಡುತ್ತಿದ್ದಾರೆ.

1983ರ ವಿಶ್ವಕಪ್ ನ್ನ ಭಾರತ ಗೆದ್ದಿತ್ತು. ಕಪಿಲ್ ದೇವ್ ವಿಶ್ವಕಪ್ ತಂಡದ ನಾಯಕರಾಗಿ ದ್ದರು. ಇದೀಗ, 1983ರ ವಿಶ್ವಕಪ್ ಕುರಿತ ಸಿನಿಮಾದಲ್ಲಿ ಕಪಿಲ್ ದೇವ್ ಪಾತ್ರವನ್ನ ಯಾರು ಮಾಡಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.

Ranveer Singh as Kapil Dev in 1983

ಹೌದು, ರೀಲ್ ನಲ್ಲಿ ಕಪಿಲ್ ದೇವ್ ಅವರ ಪಾತ್ರವನ್ನ ಬಾಲಿವುಡ್ ನಟ ರಣ್ವೀರ್ ಸಿಂಗ್ ನಿರ್ವಹಿಸುತ್ತಿದ್ದಾರೆ. ಸದ್ಯ, ಸಂಜಯ್ ಲೀಲಾ ಬನ್ಸಾಲಿ ಅವರ 'ಪದ್ಮಾವತಿ' ಚಿತ್ರದಲ್ಲಿ ಅಭಿನಯಿಸುತ್ತಿರುವ ರಣ್ವೀರ್ ಸಿಂಗ್, ಅದರ ಜೊತೆ '1983ರ ವಿಶ್ವಕಪ್' ಚಿತ್ರವನ್ನ ಆರಂಭಿಸಲಿದ್ದಾರೆ.

ಈ ಹಿಂದೆ ಅರ್ಜುನ್ ಕಪೂರ್, ಕಪಿಲ್ ದೇವ್ ಪಾತ್ರವನ್ನ ಮಾಡುತ್ತಾರೆ ಎನ್ನಲಾಗಿತ್ತು. ಆದ್ರೆ, ಈ ಪಾತ್ರ ರಣ್ವೀರ್ ಸಿಂಗ್ ಪಾಲಾಗಿದೆ.

Ranveer Singh as Kapil Dev in 1983

ಅಂದ್ಹಾಗೆ. 1983 ರಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡಿಸ್ ವಿರುದ್ಧ ಭಾರತ ಫೈನಲ್ ಗೆದ್ದಿತ್ತು. ಜೂನ್ 25 ರಂದು ಈ ಪಂದ್ಯ ನಡೆದಿದ್ದು, ಇಂಗ್ಲೆಂಡ್ ನ ಲಾರ್ಡ್ಸ್ ಮೈದಾನ ಸಾಕ್ಷಿಯಾಗಿತ್ತು. ಇದು ಭಾರತದ ಗೆದ್ದ ಚೊಚ್ಚಲ ವಿಶ್ವಕಪ್.

English summary
Bollywood Ranveer Singh as Kapil Dev will lead India to World Cup victory in Kabir Khan’s 1983.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada