For Quick Alerts
  ALLOW NOTIFICATIONS  
  For Daily Alerts

  ರಣವೀರ್ ಸಿಂಗ್ ಅಂತಹ ಪತಿ ಯಾರಿಗುಂಟು ಯಾರಿಗಿಲ್ಲ.!

  |

  ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಮತ್ತು ಬಾಲಿವುಡ್ ನಟ ರಣವೀರ್ ಸಿಂಗ್ ರವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ.

  ಪತ್ನಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ರಣವೀರ್ ಸಿಂಗ್, ಅದನ್ನ ಕ್ಯಾಮೆರಾ ಮುಂದೆ ಹಲವು ಬಾರಿ ಸಾಬೀತುಪಡಿಸಿದ್ದಾರೆ. ಮೊನ್ನೆ ಮೊನ್ನೆ ನಡೆದ ಘಟನೆಯನ್ನೇ ತೆಗೆದುಕೊಳ್ಳಿ... ದೀಪಿಕಾ ಮತ್ತು ಪತಿ ರಣವೀರ್ ಸಿಂಗ್ ಮುಂಬೈ ನ ರೆಸ್ಟೋರೆಂಟ್ ಒಂದಕ್ಕೆ ಡಿನ್ನರ್ ಮಾಡಲು ಹೋಗಿದ್ದರು.

  ''ಪತ್ನಿಯಿಂದ ದೂರ ಮಾಡಬೇಡಿ'' ಅಂತ ಆರತಕ್ಷತೆಯಲ್ಲಿ ರಣ್ವೀರ್ ಸಿಂಗ್ ಹೇಳಿದ್ಯಾಕೆ.?

  ಊಟ ಮುಗಿಸಿ ಇಬ್ಬರೂ ಹೊರಗೆ ಬರುತ್ತಿದ್ದ ಹಾಗೆ, ಕ್ಯಾಮೆರಾ ಕಂಗಳು ಅವರಿಬ್ಬರನ್ನು ಸೆರೆಹಿಡಿಯಲು ಸಜ್ಜಾಗಿದ್ದವು. ಇನ್ನೇನು ಫೋಟೋಗಳು ಕ್ಲಿಕ್ ಆಗಬೇಕು... ಅಷ್ಟರಲ್ಲಿ ದೀಪಿಕಾ ಧರಿಸಿದ್ದ ಜೀನ್ಸ್ ಪ್ಯಾಂಟ್ ಮೇಲೆ ಕಸ ಬಿದ್ದಿರುವುದನ್ನು ರಣವೀರ್ ಸಿಂಗ್ ಗಮನಿಸಿದರು.

  ಮದುವೆ ಬಳಿಕ ಕಿಸ್ಸಿಂಗ್ ಸೀನ್ ಮಾಡ್ತೀರಾ? ಎಂದವರಿಗೆ ದೀಪಿಕಾ ಉತ್ತರ

  ಕೂಡಲೇ ಅದನ್ನು ಸ್ವಚ್ಛಗೊಳಿಸಿ, ದೀಪಿಕಾ ಹಣೆಗೆ ರಣವೀರ್ ಸಿಂಗ್ ಮುತ್ತಿಟ್ಟರು. ಇದಿಷ್ಟು ಕ್ಯಾಮೆರಾ ಕಂಗಳಲ್ಲಿ ಸರಿಯಾಗಿದೆ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  ದೀಪಿಕಾ ರನ್ನ ಜೋಪಾನವಾಗಿ ನೋಡಿಕೊಳ್ಳುವ ರಣವೀರ್ ಸಿಂಗ್ ರವರ ಈ ವರ್ತನೆಗೆ ಸೋಷಿಯಲ್ ಮೀಡಿಯಾದಲ್ಲಿ ಹಲವರು ಫಿದಾ ಆಗಿದ್ದಾರೆ. ದೀಪಿಕಾ ಮತ್ತು ರಣವೀರ್ ಕ್ಯೂಟ್ ಕಪಲ್, ಮೇಡ್ ಫಾರ್ ಈಚ್ ಅದರ್ ಎಂದೇ ಅಭಿಮಾನಿಗಳು ಕರೆಯುತ್ತಿದ್ದಾರೆ. ದೀಪಿಕಾ ಲಕ್ಕಿ ಅಂತ ಹಲವರು ಕಾಮೆಂಟ್ ಮಾಡಿದರೆ, ಇಂಥ ಗಂಡ ಯಾರಿಗುಂಟು ಯಾರಿಗಿಲ್ಲ ಅನ್ನೋದು ಹಲವರ ಮಾತು.

  English summary
  Watch video: Bollywood Actor Ranveer Singh-Deepika Padukone's adorable PDA.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X