For Quick Alerts
  ALLOW NOTIFICATIONS  
  For Daily Alerts

  ಆತಂಕದಲ್ಲಿ ಅಳುತ್ತಿದ್ದ ನಟನನ್ನು ತಬ್ಬಿಕೊಂಡು ಚುಂಬಿಸಿದ ರಣ್ವೀರ್ ಸಿಂಗ್.!

  |

  ''ಅಂದು ನಾನು ಆತಂಕದಲ್ಲಿ ಅಳುತ್ತಿದ್ದೆ. ನನ್ನನ್ನ ಸಮಾಧಾನ ಪಡಿಸಲು ರಣ್ವೀರ್ ಸಿಂಗ್ ಗಟ್ಟಿಯಾಗಿ ತಬ್ಬಿಕೊಂಡು ಚುಂಬಿಸಿದರು. ರಣ್ವೀರ್ ಸಿಂಗ್ ಜೊತೆಗೆ ನನಗೆ ಅದೊಂದು ಭಾವನಾತ್ಮಕ ರೋಮಾಂಚಕ ಕ್ಷಣ'' - ಹೀಗಂತ ಫಿಲ್ಟರ್ ಇಲ್ಲದೇ ಮಾತನಾಡಿರುವವರು ಸಿದ್ಧಾಂತ್ ಚತುರ್ವೇದಿ.

  ಹೌದು, ಬಾಲಿವುಡ್ ನಟಿ ನೇಹಾ ಧೂಪಿಯಾ ನಡೆಸಿಕೊಡುವ 'ನೋ ಫಿಲ್ಟರ್ ನೇಹಾ-4' ಕಾರ್ಯಕ್ರಮದಲ್ಲಿ 'ಗಲ್ಲಿ ಬಾಯ್' ಚಿತ್ರದ ನಟ ಸಿದ್ಧಾಂತ್ ಚತುರ್ವೇದಿ ಹೀಗೆ ಹೇಳಿದ್ದಾರೆ. ಸಿದ್ಧಾಂತ್ ಚತುರ್ವೇದಿ ಆಡಿದ ಮಾತುಗಳನ್ನು ಕೇಳಿ ನೇಹಾ ಧೂಪಿಯಾ ಅಕ್ಷರಶಃ ಶಾಕ್ ಆದರು. ಆಮೇಲೆ ''ಛೇ.. ಛೇ.. ಅಂತದ್ದೇನೂ ಇಲ್ಲ. ನನ್ನನ್ನ ಸಮಾಧಾನ ಪಡಿಸಲು ರಣ್ವೀರ್ ಸಿಂಗ್ ಹಾಗೆ ಮಾಡಿದರು'' ಅಂತ ಸಿದ್ಧಾಂತ್ ಚತುರ್ವೇದಿ ಸ್ಪಷ್ಟ ಪಡಿಸಿದರು.

  ಅಷ್ಟಕ್ಕೂ ಏನಿದು ಚುಂಬನದ ಕಥೆ ಅಂತ ತಲೆಗೆ ಹುಳ ಬಿಟ್ಟುಕೊಂಡಿದ್ದರೆ, ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ.. ನಿಮಗೆ ಕ್ಲಾರಿಟಿ ಸಿಗುತ್ತದೆ. ಮುಂದೆ ಓದಿರಿ...

  ಗಲ್ಲಿ ಬಾಯ್ ಚಿತ್ರದ ಕುರಿತು...

  ಗಲ್ಲಿ ಬಾಯ್ ಚಿತ್ರದ ಕುರಿತು...

  ಬಾಲಿವುಡ್ ನಟ ರಣ್ವೀರ್ ಸಿಂಗ್, ಸಿದ್ದಾಂತ್ ಚತುರ್ವೇದಿ, ಆಲಿಯಾ ಭಟ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಝೋಯಾ ಅಖ್ತರ್ ನಿರ್ದೇಶನದ 'ಗಲ್ಲಿ ಬಾಯ್' ಚಿತ್ರ ಬಿಡುಗಡೆ ಆಗಿ ಉತ್ತಮ ಕಲೆಕ್ಷನ್ ಮಾಡಿದ್ದು ನಿಮಗೆಲ್ಲ ಗೊತ್ತೇ ಇದೆ. ವಿವಿಯನ್ ಫರ್ನಾಂಡಿಸ್ ಮತ್ತು ನವೇದ್ ಶೇಕ್ ಎಂಬ ಇಬ್ಬರು ಇಂಡಿಯನ್ ಸ್ಟ್ರೀಟ್ ರಾಪರ್ ಗಳ ಜೀವನಚರಿತ್ರೆಯಿಂದ ಸ್ಫೂರ್ತಿ ಪಡೆದ ಮ್ಯೂಸಿಕಲ್ ಸಿನಿಮಾ ಇದು. ಈ ಚಿತ್ರ ಬಿಡುಗಡೆಯಾದಾಗ ನಡೆದ ಒಂದು ಘಟನೆ ಬಗ್ಗೆ ಸಿದ್ಧಾಂತ್ ಚತುರ್ವೇದಿ ಇದೀಗ ಬಾಯಿಬಿಟ್ಟಿದ್ದಾರೆ.

  <br />ವಾವ್.. ರಣ್ವೀರ್ ಸಿಂಗ್ ಆಗಿಬಿಟ್ರು ಕಪಿಲ್ ದೇವ್
  ವಾವ್.. ರಣ್ವೀರ್ ಸಿಂಗ್ ಆಗಿಬಿಟ್ರು ಕಪಿಲ್ ದೇವ್

  ಫಿಲ್ಟರ್ ಇಲ್ಲದೆ ಮಾತನಾಡಿದ ಸಿದ್ದಾಂತ್

  ಫಿಲ್ಟರ್ ಇಲ್ಲದೆ ಮಾತನಾಡಿದ ಸಿದ್ದಾಂತ್

  ಬಾಲಿವುಡ್ ನಟಿ ನೇಹಾ ಧೂಪಿಯಾ ನಡೆಸಿಕೊಡುವ 'ನೋ ಫಿಲ್ಟರ್ ನೇಹಾ-4' ಕಾರ್ಯಕ್ರಮದಲ್ಲಿ 'ಗಲ್ಲಿ ಬಾಯ್' ಚಿತ್ರದ ನಟ ಸಿದ್ಧಾಂತ್ ಚತುರ್ವೇದಿ ಇತ್ತೀಚೆಗಷ್ಟೇ ಭಾಗವಹಿಸಿದ್ದರು. ಇದರಲ್ಲಿ ರಣ್ವೀರ್ ಸಿಂಗ್ ಜೊತೆಗಿನ ತಮ್ಮ ಸ್ನೇಹ, ಅನುಬಂಧದ ಬಗ್ಗೆ ಸಿದ್ಧಾಂತ್ ಚತುರ್ವೇದಿ ಮಾತನಾಡಿದ್ದಾರೆ.

  ಹೋಗಿ ಹೋಗಿ ಹಳೇ ಫೋಟೋವನ್ನ ರಣ್ವೀರ್ ಸಿಂಗ್ ಶೇರ್ ಮಾಡಿದ್ಯಾಕೆ.?ಹೋಗಿ ಹೋಗಿ ಹಳೇ ಫೋಟೋವನ್ನ ರಣ್ವೀರ್ ಸಿಂಗ್ ಶೇರ್ ಮಾಡಿದ್ಯಾಕೆ.?

  ಒಂದು ಚುಂಬನದ ಕಥೆ

  ಒಂದು ಚುಂಬನದ ಕಥೆ

  ''ಗಲ್ಲಿ ಬಾಯ್' ಸಿನಿಮಾ ಬಿಡುಗಡೆಯಾದಾಗ ನಾನು ಆತಂಕಕ್ಕೊಳಗಾಗಿದ್ದೆ. ಆ ದಿನ ನಾನು ಅಳುತ್ತಿದ್ದರೆ, ನನ್ನನ್ನು ಸಮಾಧಾನ ಪಡಿಸಲು ರಣ್ವೀರ್ ಸಿಂಗ್ ಅಪ್ಪಿಕೊಂಡು ಚುಂಬಿಸಿದರು. ರಣ್ವೀರ್ ಸಿಂಗ್ ಜೊತೆಗೆ ನನಗೆ ಅದೊಂದು ಭಾವನಾತ್ಮಕ ರೋಮಾಂಚಕ ಕ್ಷಣ'' ಎಂದು ಸಿದ್ಧಾಂತ್ ಚತುರ್ವೇದಿ ಹೇಳಿದಾಗ ನೇಹಾ ಧೂಪಿಯಾ ಶಾಕ್ ಆದರು. ಆಮೇಲೆ ''ಛೇ.. ಛೇ.. ಅಂತದ್ದೇನೂ ಇಲ್ಲ. ನನ್ನನ್ನ ಸಮಾಧಾನ ಪಡಿಸಲು ರಣ್ವೀರ್ ಸಿಂಗ್ ಹಾಗೆ ಮಾಡಿದರು'' ಅಂತ ಸಿದ್ಧಾಂತ್ ಚತುರ್ವೇದಿ ಸ್ಪಷ್ಟ ಪಡಿಸಿದ್ದಾರೆ.

  ಅಕಾಡೆಮಿ ಪ್ರಶಸ್ತಿಗೆ ಪ್ರವೇಶ

  ಅಕಾಡೆಮಿ ಪ್ರಶಸ್ತಿಗೆ ಪ್ರವೇಶ

  ಹಾಗ್ನೋಡಿದ್ರೆ, ಶೂಟಿಂಗ್ ಸಂದರ್ಭದಲ್ಲಿ ಸಿದ್ಧಾಂತ್ ಚತುರ್ವೇದಿಗೆ ರಣ್ವೀರ್ ಸಿಂಗ್ ತುಂಬಾ ಹೆಲ್ಪ್ ಮಾಡಿದ್ರಂತೆ. ವಾಯ್ಸ್ ಮಾಡ್ಯೂಲೇಶನ್ ಬಗ್ಗೆ ಕೆಲವು ಟಿಪ್ಸ್ ಕೊಟ್ಟಿದ್ದರಂತೆ. ರಣ್ವೀರ್ ಸಿಂಗ್ ನಿಜಕ್ಕೂ ಬುದ್ಧಿವಂತ, ಒಳ್ಳೆಯ ಸ್ನೇಹಿತ ಅಂತಾರೆ ಸಿದ್ಧಾಂತ್. ಅಂದ್ಹಾಗೆ, ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ವಿಭಾಗದಲ್ಲಿ 'ಗಲ್ಲಿ ಬಾಯ್' ಚಿತ್ರ 92ನೇ ಅಕಾಡೆಮಿ ಅವಾರ್ಡ್ಸ್ ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದೆ.

  English summary
  We had a different moment. Ranveer Singh has kissed me. He has hugged me says Gully Boy Actor Siddanth Chaturvedi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X