For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ಜೊತೆ ಮದುವೆ ಬಗ್ಗೆ ರಣವೀರ್ ಏನಂತಾರೆ.?

  By ಸೋನು ಗೌಡ
  |

  ಬಾಲಿವುಡ್ ನಲ್ಲಿ ಹಲವು ಸಮಯಗಳಿಂದ ಭಾರಿ ಸುದ್ದಿಯಲ್ಲಿರುವ ಜೋಡಿ ಹಕ್ಕಿಗಳಾದ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಮದುವೆ ಸುದ್ದಿ ಕಳೆದೆರಡು ವರ್ಷಗಳಿಂದ ಬಿಟೌನ್ ನಲ್ಲಿ ಓಡಾಡುತ್ತಲೇ ಇದೆ.

  ಅದಕ್ಕೆ ತಕ್ಕಂತೆ ಇತ್ತೀಚೆಗೆ ಇವರಿಬ್ಬರು ನಿಶ್ಚಿತಾರ್ಥ ಬೇರೆ ಮಾಡಿಕೊಂಡಿದ್ದಾರೆ ಅಂತ ಊರು ತುಂಬಾ ಗುಲ್ಲೋ-ಗುಲ್ಲು. ಜೊತೆಗೆ ಈ ಜೋಡಿ ಇನ್ನು ಎರಡು ವರ್ಷ ಆದ ಮೇಲೆ ಮದುವೆ ಆಗೋಣ ಅಂತ ನಿರ್ಧಾರ ಬೇರೆ ಮಾಡಿದ್ದಾರಂತೆ.[ದೀಪಿಕಾ ಪಡುಕೋಣೆ ಬಗ್ಗೆ ನಿಮಗೆ ಗೊತ್ತಿರದ 9 ಸಂಗತಿಗಳು]

  ಅಂದಹಾಗೆ ಇತ್ತೀಚೆಗೆ ನಟ ರಣವೀರ್ ಅವರು ಏರ್ ಪೋರ್ಟ್ ನಲ್ಲಿ ಸಿಕ್ಕಾಗ ಈ ನಿಶ್ಚಿತಾರ್ಥ-ಮದುವೆಯ ಅಂತೆ-ಕಂತೆಗಳ ಬಗ್ಗೆ ಕೇಳೋಣ ಅಂತ ಪ್ರಶ್ನೆ ಮಾಡಿದಾಗ ರಣವೀರ್ ಅವರು "ಅರೆ ನೀವು ಏನು ಮಾತೂಂತ ಆಡುತ್ತಿದ್ದೀರಾ?, ಬೆಳಗ್ಗೆ ಬೆಳಗ್ಗೆ ನಿದ್ದೆ ಬೇರೆ ಸರಿ ಆಗಿಲ್ಲ. ಈಗ್ತಾನೆ ಶುರು ಆಗಿದೆ, ಹೋಗ್ತಾ ಹೋಗ್ತಾ ಇನ್ನೇನು ಎಲ್ಲಾ ಗೊತ್ತಾಗುತ್ತೆ" ಅಂತ ಒಗಟು-ಒಗಟಾಗಿ ಉತ್ತರ ನೀಡಿದ್ದಾರೆ.[ಮದುವೆಯ ಸಂಭ್ರಮದಲ್ಲಿ ಬಾಲಿವುಡ್ ನ ಪ್ರಣಯ ಹಕ್ಕಿಗಳು]

  ನಟ ರಣವೀರ್ ಮತ್ತು ನಟಿ ದೀಪಿಕಾ ಪಡುಕೋಣೆ ತಮ್ಮಿಬ್ಬರ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಸದ್ಯಕ್ಕೆ ದೀಪಿಕಾ ಅವರು ತಮ್ಮ ಕೆರಿಯರ್ ಮೇಲೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಎರಡು ವರ್ಷಗಳ ನಂತರ ಮದುವೆ ಮಾಡಿಕೊಳ್ಳಲು ಜೋಡಿ ಹಕ್ಕಿಗಳು ನಿರ್ಧಾರ ತೆಗೆದುಕೊಂಡಿದ್ದಾರೆ.[ರಣವೀರ್-ದೀಪಿಕಾ ನಡುವೆ ಏನಿಲ್ಲ, ಏನೇನಿಲ್ಲ!]

  ಸದ್ಯಕ್ಕೆ ಈ ಪ್ರಣಯ ಹಕ್ಕಿಗಳಿಬ್ಬರು ಆಸ್ಟ್ರೇಲಿಯಾದಲ್ಲಿ ಹಾಲಿಡೇ ಎಂಜಾಯ್ ಮಾಡಿ ಮುಂಬೈಗೆ ವಾಪಸ್ ಬಂದಿದ್ದಾರೆ. ದೀಪಿಕಾ ಅವರು 'ಪದ್ಮಾವತಿ' ಚಿತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ, ರಣವೀರ್ ಅವರು 'ಬೇಫಿಕರ್' ಚಿತ್ರದ ಶೂಟಿಂಗ್ ಮುಗಿಸಿ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ.

  English summary
  Hindi Actor Ranveer Singh reply About His Marriage With Actress Deepika Padukone.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X