»   » ಏಕಾಏಕಿ ಎರಡು ಕೋಟಿ ರಿಜೆಕ್ಟ್ ಮಾಡಿದ ರಣ್ವೀರ್ ಸಿಂಗ್.! ಯಾಕ್ಗೊತ್ತಾ.?

ಏಕಾಏಕಿ ಎರಡು ಕೋಟಿ ರಿಜೆಕ್ಟ್ ಮಾಡಿದ ರಣ್ವೀರ್ ಸಿಂಗ್.! ಯಾಕ್ಗೊತ್ತಾ.?

Posted By:
Subscribe to Filmibeat Kannada

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ದೃಶ್ಯಕಾವ್ಯ 'ಪದ್ಮಾವತ್' ಸಿನಿಮಾ ಸೂಪರ್ ಹಿಟ್ ಆಗಿದ್ದೇ ತಡ, ರಣ್ವೀರ್ ಸಿಂಗ್ ಗೆ ಬಾಲಿವುಡ್ ನಲ್ಲಿ ಬೇಡಿಕೆ ಹೆಚ್ಚಾಗಿದೆ. ಸಂಭಾವನೆ ಕೂಡ ಹೈಕಾಗಿದೆ.

ಮೊದಲು ಚಿತ್ರವೊಂದಕ್ಕೆ 7-8 ಕೋಟಿ ಪಡೆಯುತ್ತಿದ್ದ ರಣ್ವೀರ್ ಸಿಂಗ್ 'ಪದ್ಮಾವತ್' ಆದ್ಮೇಲೆ 13 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಮೊನ್ನೆಯಷ್ಟೇ ಬಾಲಿವುಡ್ ಅಂಗಳದಲ್ಲಿ ಕೇಳಿ ಬಂದಿತ್ತು. ಇದೀಗ ರಣ್ವೀರ್ 2 ಕೋಟಿ ರೂಪಾಯಿ ರಿಜೆಕ್ಟ್ ಮಾಡಿರುವ ಗುಸುಗುಸು ಎಲ್ಲೆಡೆ ಗಿರಗಿಟ್ಲೆ ಹೊಡೆಯುತ್ತಿದೆ.

ಅಷ್ಟಕ್ಕೂ, ರಣ್ವೀರ್ ಸಿಂಗ್ ಗೆ ಎರಡು ಕೋಟಿ ಆಫರ್ ಕೊಟ್ಟಿದ್ದು ಯಾರು ಮತ್ತು ಯಾಕೆ ಅಂದ್ರೆ, ಮದುವೆಯೊಂದರಲ್ಲಿ ಡ್ಯಾನ್ಸ್ ಪರ್ಫಾಮೆನ್ಸ್ ಮಾಡೋಕೆ.!

Ranveer Singh rejects Rs.2 Crore offer to perform at wedding

ಗಗನಕ್ಕೇರಿತು ರಣ್ವೀರ್ ಸಿಂಗ್ ಸಂಭಾವನೆ: ಎಲ್ಲಾ 'ಪದ್ಮಾವತ್' ಕೃಪೆ.!

ಹೌದು, ವಿವಾಹ ಮಹೋತ್ಸವದಲ್ಲಿ ಡ್ಯಾನ್ಸ್ ಪರ್ಫಾಮೆನ್ಸ್ ನೀಡಲು ಗಣ್ಯರೊಬ್ಬರು ರಣ್ವೀರ್ ಸಿಂಗ್ ಗೆ ಎರಡು ಕೋಟಿ ಆಫರ್ ಮಾಡಿದ್ರಂತೆ. ಆದ್ರೆ, ಅದನ್ನ ಹಿಂದು-ಮುಂದು ನೋಡದೆ ರಣ್ವೀರ್ ಸಿಂಗ್ ರಿಜೆಕ್ಟ್ ಮಾಡಿದ್ದಾರೆ.

'ಗಲ್ಲಿ ಬಾಯ್' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿರುವ ರಣ್ವೀರ್ ಸಿಂಗ್ ಗೆ ಡ್ಯಾನ್ಸ್ ಪರ್ಫಾಮೆನ್ಸ್ ನೀಡಲು ಪುರುಸೊತ್ತು ಇಲ್ವಂತೆ. 'ಗಲ್ಲಿ ಬಾಯ್' ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಹೆಚ್ಚು ಗಮನ ಹರಿಸುತ್ತಿರುವ ರಣ್ವೀರ್, ಶೂಟಿಂಗ್ ಮುಗಿಯುವ ತನಕ ಬೇರೆ ಯಾವುದರ ಬಗ್ಗೆಯೂ ಯೋಚಿಸದಿರಲು ನಿರ್ಧರಿಸಿದ್ದಾರೆ. ದುಡ್ಡಿಗಿಂತ ಸಿನಿಮಾ ಮುಖ್ಯ ಅಂತ ಹೇಳಿರುವ ರಣ್ವೀರ್, 'ಗಲ್ಲಿ ಬಾಯ್'ಗಾಗಿ ಹಗಲಿರುಳು ಬೆವರು ಹರಿಸ್ತಾಯಿದ್ದಾರೆ.

English summary
Bollywood Actor Ranveer Singh rejects Rs.2 Crore offer to perform at a wedding.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada