For Quick Alerts
  ALLOW NOTIFICATIONS  
  For Daily Alerts

  ದೀಪಿಕಾಳಂತಹ ಮುದ್ದಾದ ಮಗು ಬೇಕಂತೆ ರಣ್ವೀರ್‌ಗೆ, ಆಗಲೇ ಹೆಸರು ಹುಡುಕಾಟ ಆರಂಭ!

  By ರವೀಂದ್ರ ಕೊಟಕಿ
  |

  ರಣವೀರ್ ಸಿಂಗ್- ದೀಪಿಕಾ ಪಡುಕೋಣೆ ಬಾಲಿವುಡ್ ನ ಹಾಟ್ ಅಂಡ್ ಕ್ಯೂಟ್ ಜೋಡಿಗಳಲ್ಲಿ ಒಂದಾಗಿದೆ. ಈ ತಾರಾ ಜೋಡಿ ಪ್ರಸ್ತುತ ಸಿನಿಮಾ ರಂಗದಲ್ಲಿ ಅತ್ಯಂತ ಬ್ಯುಸಿ ಕಪಲ್. ಸಿನಿಮಾಗಳಲ್ಲಿ ಜೊತೆಗೆ ಜಾಹೀರಾತಿನಲ್ಲಿ ಕೂಡ ಇವರಿಬ್ಬರು ಇತ್ತೀಚೆಗೆ ಹೆಚ್ಚಿಗೆ ಕಾಣಿಸಿಕೊಳ್ಳುತ್ತಿದ್ದಾರೆ ,ಇಬ್ಬರೂ ಕೂಡ ಪ್ರಸ್ತುತ ಜನಪ್ರಿಯತೆಯ ಉತ್ತುಂಗದಲ್ಲಿದ್ದಾರೆ.

  ದೀಪಿಕಾ ಪಡುಕೋಣೆ ಪ್ರಸ್ತುತ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಹೀರೋಯಿನ್ ಆಗಿದ್ದಾರೆ. ತನ್ನ ಪತಿ ದೇವರಾದ ರಣವೀರ್ ಸಿಂಗ್ ಜೊತೆಯಲ್ಲಿ '83' ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರ ಭಾರತ ವಿಶ್ವ ಕ್ರಿಕೆಟ್ ಗೆದ್ದ ಇತಿಹಾಸದ ಸುತ್ತಲೂ ಹೆಣೆಯಲಾಗಿದ್ದು, ಡಿಸೆಂಬರ್ 25ರಂದು ಬಿಡುಗಡೆಯಾಗುತ್ತಿದೆ. ರಣವೀರ್ ಸಿಂಗ್ ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಂಡರೆ, ದೀಪಿಕಾ ಕಪಿಲ್ ಅವರ ಪತ್ನಿ ರೋಮಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಚಿತ್ರದ ನಂತರ, ಶಕುನ್ ಬಾತ್ರಾ ಅವರ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇನ್ನು ಈ ಚಿತ್ರದಲ್ಲಿ ದೀಪಿಕಾ ಜೊತೆಗೆ ಸಿದ್ಧಾಂತ ಚತುರ್ವೇದಿ ಮತ್ತು ಅನನ್ಯ ಪಾಂಡೆ ಕೂಡ ನಟಿಸುತ್ತಿದ್ದಾರೆ.

  ಅಲ್ಲದೆ ಪ್ರಭಾಸ್ ಅಮಿತಾಬಚ್ಚನ್ ಅವರೊಂದಿಗೆ ದೀಪಿಕಾ ನಟಿಸುತ್ತಿರುವ 'ಪ್ರಾಜೆಕ್ಟ್ K' ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದೆ. ಸಂಭಾವ್ಯ ಮೂರನೇ ಮಹಾಯುದ್ಧದ ಸುತ್ತಲೂ ಹೆಣೆಯಲಾಗಿರುವ ಈ ಚಿತ್ರವನ್ನು 'ಮಹಾನಟಿ' ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶಿಸುತ್ತಿದ್ದು. ಸುಮಾರು 600 ಕೋಟಿ ವೆಚ್ಚದಲ್ಲಿ ಭಾರತದ ಅತಿದೊಡ್ಡ ಸೈನ್ಸ್ ಫಿಕ್ಷನ್ ಚಿತ್ರ ರೂಪುಗೊಳ್ಳುತ್ತಿದೆ.

  'ಮಹಾಭಾರತ'ದಲ್ಲಿ ದೀಪಿಕಾ ದ್ರೌಪದಿ

  'ಮಹಾಭಾರತ'ದಲ್ಲಿ ದೀಪಿಕಾ ದ್ರೌಪದಿ

  ಇದಲ್ಲದೆ, ಮಧು ಮಂತೆನ ಅವರ 'ಮಹಾಭಾರತ'ದಲ್ಲಿ ದೀಪಿಕಾ ದ್ರೌಪದಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಈ 35 ವರ್ಷದ ನಟಿ ಮುದ್ದಾದ ಮಗುವಿಗೆ ತಾಯಿಯಾಗುವುದು ಯಾವಾಗ? ಎಂಬುವುದು ಬಾಲಿವುಡ್ಡಿನಲ್ಲಿ ಆಗಾಗ ಕೇಳಿಬರುತ್ತಲೇ ಇರುತ್ತದೆ. ಇದಕ್ಕೊಂದು ಪರೋಕ್ಷವಾದ ಉತ್ತರವನ್ನು ರಣವೀರ್ ಸಿಂಗ್ ನೀಡಿದ್ದಾರೆ.

  ಇನ್ನು ಎರಡು ಮೂರು ವರ್ಷದಲ್ಲಿ ತಂದೆ ಆಗುತ್ತೇನೆ

  ಇನ್ನು ಎರಡು ಮೂರು ವರ್ಷದಲ್ಲಿ ತಂದೆ ಆಗುತ್ತೇನೆ

  ರಣವೀರ್ ಸಿಂಗ್ ಬಾಲಿವುಡ್‌ನ ಅತ್ಯಂತ ಜನಪ್ರಿಯ ನಾಯಕ ನಟನಾಗಿದ್ದು ಸಾಲು ಸಾಲು ಚಿತ್ರಗಳಲ್ಲಿ ಪ್ರಸ್ತುತ ನಟಿಸುತ್ತಿದ್ದಾರೆ. ಈ ಬಿಡುವಿಲ್ಲದ ವೇಳಾಪಟ್ಟಿಯಲ್ಲೂ ರಣವೀರ್ ಗೇಮ್ ಶೋ ಒಂದಕ್ಕೆ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಯಕ್ರಮದ ಹೆಸರು 'ದಿ ಬಿಗ್ ಪಿಕ್ಚರ್'. ಅದರಲ್ಲಿ, ರಣವೀರ್ ಅವರು ತಮಗೆ ಮುಂದೆ ಹುಟ್ಟಲಿರುವ ಮಗುವಿಗೆ ಹೆಸರನ್ನು ಹುಡುಕುತ್ತಿರುವುದಾಗಿ ಹೇಳಿದ್ದಾರೆ.

  ಪ್ರೋಮೋ ಈಗಷ್ಟೆ ಬಿಡುಗಡೆ

  ಪ್ರೋಮೋ ಈಗಷ್ಟೆ ಬಿಡುಗಡೆ

  ಕಲರ್ಸ್ ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮದ ಪ್ರೋಮೋ ಈಗಷ್ಟೇ ಬಿಡುಗಡೆಯಾಗಿದೆ. ಅದರಲ್ಲಿ ರಣವೀರ್ ಸ್ಪರ್ಧಿಗಳಿಗೆ, "ನಾನು ಮದುವೆಯಾಗಿದ್ದೇನೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ಇನ್ನು ಎರಡು, ಮೂರು ವರ್ಷಗಳಲ್ಲಿ ಮಕ್ಕಳು ಕೂಡ ಜನಿಸುತ್ತಾರೆ. ನಿಮ್ಮ ಅತ್ತಿಗೆ ತುಂಬ ಮುದ್ದಾಗಿದ್ದಾಳೆ. ನಾನು ಅನೇಕ ಸಲ ನಿನ್ನಂತಹ ಮುದ್ದಾದ ಪಾಪುವನ್ನು ನನಗೆ ನೀಡುವಂತೆ ಕೇಳಿದ್ದೇನೆ. ಇದರಿಂದ ನನ್ನ ಜೀವನ ಪರಿಪೂರ್ಣವಾಗುತ್ತದೆ. ಅಲ್ಲದೆ ಮಗು ಬಂದರೆ ನನ್ನ ಜೀವನವು ಸುಂದರವು ಮತ್ತು ಸುಖಮಯವಾಗಿರುತ್ತದೆ ಅಂತ ದೀಪಿಕಾಗೆ ಹೇಳಿದ್ದೇನೆ' ಅಂತ ಈ ಸಂದರ್ಭದಲ್ಲಿ ರಣವೀರ್ ಅಂದಿದ್ದಾರೆ.

  ಹುಟ್ಟುವ ಮಕ್ಕಳಿಗೆ ಹೆಸರು ಹುಡುಕಾಟ

  ಹುಟ್ಟುವ ಮಕ್ಕಳಿಗೆ ಹೆಸರು ಹುಡುಕಾಟ

  ಅಲ್ಲದೆ ಇದೇ ಸಂದರ್ಭದಲ್ಲಿ ರಣವೀರ್ 'ಭವಿಷ್ಯದಲ್ಲಿ ಹುಟ್ಟುವ ಮಕ್ಕಳಿಗಾಗಿ ಒಳ್ಳೆಯ ಹೆಸರನ್ನು ಹುಡುಕುತ್ತಿದ್ದೇನೆ ಅಂತ ಕೂಡ ಹೇಳಿಕೊಂಡು ಬಂದಿದ್ದಾರೆ ಆದಾಗ್ಯೂ, ಪ್ರಸ್ತುತ 'ಸೂರ್ಯವಂಶಿ', '83' ಮತ್ತು 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಮುಂತಾದ ಚಿತ್ರಗಳಲ್ಲಿ ನಟಿಸುತ್ತಿರುವ ರಣವೀರ್ ಸಿಂಗ್ 'ದಿ ಬಿಗ್ ಪಿಕ್ಚರ್' ಕಾರ್ಯಕ್ರಮದ ಮೂಲಕ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಣವೀರ್ ಸಿಂಗ್ ಅವರ ಆಸೆಯನ್ನು ದೀಪಿಕಾ ಪಡುಕೋಣೆ ಶೀಘ್ರದಲ್ಲಿ ಪೂರೈಸಲಿ ಅಂತ ಎಲ್ಲರೂ ಶುಭ ಹಾರೈಸುತ್ತಿದ್ದಾರೆ.

  English summary
  Ranveer Singh said he wants baby like his wife Deepika Padukone. He also said he started searching for names for baby.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X