For Quick Alerts
  ALLOW NOTIFICATIONS  
  For Daily Alerts

  ಅಯ್ಯೋ... ದಿಢೀರ್ ಅಂತ ರಣ್ವೀರ್ ಸಿಂಗ್ ಹೀಗೆ ಯಾಕೆ ಮಾಡಿದ್ರು.?

  |

  ಬಾಲಿವುಡ್ ನಟ ರಣ್ವೀರ್ ಸಿಂಗ್ ಸಿಕ್ಕಾಪಟ್ಟೆ ಎನರ್ಜಿಟಿಕ್ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯವೇ. ಎಲ್ಲೇ ಹೋದರೂ, ರಣ್ವೀರ್ ಸಿಂಗ್ ಲೈವ್ಲಿ ಆಗಿರ್ತಾರೆ. ಮಾಧ್ಯಮ ಪ್ರತಿನಿಧಿಗಳು ಮತ್ತು ಫೋಟೋಗ್ರಾಫರ್ ಗಳಿಗೆ ರಣ್ವೀರ್ ಸಿಂಗ್ ಉತ್ತಮವಾಗಿ ಸ್ಪಂದಿಸುತ್ತಾರೆ.

  ಹೀಗಿದ್ದರೂ, ರಣ್ವೀರ್ ಸಿಂಗ್ ಮೊನ್ನೆ ಒಂದು ಎಡವಟ್ಟು ಮಾಡಿಕೊಂಡು ಬಿಟ್ಟರು. ಇತ್ತೀಚೆಗಷ್ಟೇ ತಮ್ಮ 'ಗಲ್ಲಿ ಬಾಯ್' ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ರಣ್ವೀರ್ ಸಿಂಗ್ ಭಾಗವಹಿಸಿದ್ದರು. ಆಗ, 'ಗಲ್ಲಿ ಬಾಯ್' ಚಿತ್ರದ ಹಾಡನ್ನು ಹಾಡುತ್ತಿದ್ದ ರಣ್ವೀರ್ ಸಿಂಗ್, ದಿಢೀರ್ ಅಂತ ನೆರೆದಿದ್ದ ಅಭಿಮಾನಿಗಳ ಮೇಲೆ ಜಿಗಿದುಬಿಟ್ಟರು.

  ರಣವೀರ್ ಸಿಂಗ್ ಅಂತಹ ಪತಿ ಯಾರಿಗುಂಟು ಯಾರಿಗಿಲ್ಲ.!

  ರಣ್ವೀರ್ ಸಿಂಗ್ ಹೀಗೆ ಜಿಗಿಯುತ್ತಾರೆ ಎಂಬ ಕಲ್ಪನೆ ಅಲ್ಲಿ ನೆರೆದಿದ್ದವರಿಗೆ ಇರಲೇ ಇಲ್ಲ. ಹೀಗಾಗಿ, ರಣ್ವೀರ್ ಸಿಂಗ್ ಜಿಗಿತದಿಂದ ಕೆಲವರು ಗಾಯಗೊಂಡರು.

  ರಣ್ವೀರ್ ಸಿಂಗ್ ಹಾಗೆ ಜಿಗಿದ ಫೋಟೋ ಮತ್ತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದನ್ನ ನೋಡಿ ನೆಟ್ಟಿಗರು ರಣ್ವೀರ್ ಸಿಂಗ್ ಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

  ''ಪತ್ನಿಯಿಂದ ದೂರ ಮಾಡಬೇಡಿ'' ಅಂತ ಆರತಕ್ಷತೆಯಲ್ಲಿ ರಣ್ವೀರ್ ಸಿಂಗ್ ಹೇಳಿದ್ಯಾಕೆ.?

  ''ಮದುವೆ ಆಗಿರುವ ರಣ್ವೀರ್ ಸಿಂಗ್, ಇನ್ನಾದರೂ ಪ್ರಬುದ್ಧವಾಗಿ ವರ್ತಿಸುವುದನ್ನು ಕಲಿಯಲಿ'' ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಏನೋ ಮಾಡಲು ಹೋಗಿ, ಇನ್ನೇನೋ ಮಾಡಿಕೊಂಡ ರಣ್ವೀರ್ ಸಿಂಗ್ ಗೆ ಟ್ವಿಟ್ಟರ್ ನಲ್ಲಿ ಮಹಾ ಮಂಗಳಾರತಿ ನಡೆಯುತ್ತಿದೆ.

  English summary
  Watch video: Bollywood Actor Ranveer Singh's crowd dive hurts fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X