For Quick Alerts
  ALLOW NOTIFICATIONS  
  For Daily Alerts

  'ಮೆಗಾ ಬ್ಲಾಕ್‌ಬಸ್ಟರ್'ನಲ್ಲಿ ರಶ್ಮಿಕಾ, ದೀಪಿಕಾ, ತ್ರಿಶಾ: ಟಿವಿ ಶೋನಾ ಜಾಹೀರಾತಾ? ಅನ್ನೋದೇ ಗೊಂದಲ!

  |

  ಕಳೆದೆರಡು ದಿನಗಳಿಂದ ರಶ್ಮಿಕಾ ಮಂದಣ್ಣ, ದೀಪಿಕಾ ಪಡುಕೋಣೆ, ತ್ರಿಶಾ, ಕಪಿಲ್ ಶರ್ಮಾ ಸೇರಿದಂತೆ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗೌಂಗೂಲಿ ಸುದ್ದಿಯಲ್ಲಿದ್ದಾರೆ. ಇವರೆಲ್ಲರದ್ದೂ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಸಿನಿಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ.

  ರಶ್ಮಿಕಾ, ದೀಪಿಕಾ, ತ್ರಿಶಾ, ಕಪಿಲ್, ರೋಹಿತ್ ಶರ್ಮಾ, ಸೌರವ್ ಗಂಗೂಲಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ. ಅದ್ಯವಾಗ ಈ ಫೋಟೊಗಳನ್ನು ಶೇರ್ ಮಾಡಿದ್ರೋ, ಅಲ್ಲಿಂದ ಸಿನಿಪ್ರಿಯರು ಗೊಂದಲಕ್ಕೆ ಒಳಗಾಗಿದ್ದಾರೆ. ಇದು ಟಿವಿ ಶೋನಾ? ಇಲ್ಲಾ ಜಾಹೀರಾತಾ? ಅಥವಾ ಸಿನಿಮಾ ಅಂತ ಕನ್ಫ್ಯೂಸ್ ಆಗಿದ್ದಾರೆ.

  ಸ್ಟಾರ್ ನಟನ ಜೊತೆಗಿನ ರಶ್ಮಿಕಾ ಮಂದಣ್ಣ ಹೊಸ ಹಿಂದಿ ಸಿನಿಮಾ ಬಂದ್: ಕಾರಣ?ಸ್ಟಾರ್ ನಟನ ಜೊತೆಗಿನ ರಶ್ಮಿಕಾ ಮಂದಣ್ಣ ಹೊಸ ಹಿಂದಿ ಸಿನಿಮಾ ಬಂದ್: ಕಾರಣ?

  ಮೆಗಾ ಬ್ಲಾಕ್‌ಬಸ್ಟರ್ ಅಂದರೆ ಏನು?

  ಮೆಗಾ ಬ್ಲಾಕ್‌ಬಸ್ಟರ್ ಅಂದರೆ ಏನು?

  'ಮೆಗಾ ಬ್ಲಾಕ್‌ಬಸ್ಟರ್' ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆ ಈ ಗೊಂದಲ ಶುರುವಾಗಿದೆ. ಈ ಪೋಸ್ಟರ್‌ ಈಗಾಗಲೇ ಹಲವು ಗೊಂದಲಗಳನ್ನು ಸೃಷ್ಟಿಸಿದೆ. ಪ್ರತಿಯೊಬ್ಬರ ಪೋಸ್ಟರ್‌ ಕೂಡ ಸಿನಿಮಾದಂತೆ ರಚಿಸಲಾಗಿದೆ. ಅಲ್ಲದೆ ಮೆಗಾ ಬ್ಲಾಕ್‌ಬಸ್ಟರ್ ಟೀಸರ್ ಅನ್ನು ಸೆಪ್ಟೆಂಬರ್ 4ರಂದು ಬಿಡುಗಡೆ ಮಾಡಲಾಗುತ್ತಿದೆ. ಈ ಕಾರಣಕ್ಕೆ ಫ್ಯಾನ್ಸ್‌ಗೆ 'ಮೆಗಾ ಬ್ಲಾಕ್‌ಬಸ್ಟರ್' ಅಂದರೆ ಏನು? ಅನ್ನೋದು ಕುತೂಹಲ ಜಾಸ್ತಿಯಾಗಿದೆ.

  'ಪುಷ್ಪ' ಅಂದ್ರೆ ಫ್ಲವರ್ ಅಲ್ಲ ಫೈಯರ್: ಪೂರಿ ಎದುರು ಸಿನಿಮಾ ಕ್ಲೈಮ್ಯಾಕ್ಸ್ ಸೀಕ್ರೆಟ್ ಬಿಚ್ಚಿಟ್ಟ ಸುಕ್ಕು!'ಪುಷ್ಪ' ಅಂದ್ರೆ ಫ್ಲವರ್ ಅಲ್ಲ ಫೈಯರ್: ಪೂರಿ ಎದುರು ಸಿನಿಮಾ ಕ್ಲೈಮ್ಯಾಕ್ಸ್ ಸೀಕ್ರೆಟ್ ಬಿಚ್ಚಿಟ್ಟ ಸುಕ್ಕು!

  'ಮೆಗಾ ಬ್ಲಾಕ್‌ಬಸ್ಟರ್‌'ಗೆ ದಿಗ್ಗಜರ ಸಾಥ್!

  'ಮೆಗಾ ಬ್ಲಾಕ್‌ಬಸ್ಟರ್‌'ಗೆ ದಿಗ್ಗಜರ ಸಾಥ್!

  ಅಸಲಿಗೆ ಮೆಗಾ ಬ್ಲಾಕ್‌ಬಸ್ಟರ್ ಅಂದರೆ ಏನು ಅನ್ನೋ ಗೊಂದಲ ಇನ್ನೂ ಇದೆ. ಸೆಲೆಬ್ರೆಟಿಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಈ ಸಿನಿಮಾದ ಪ್ರಮೋಷನ್‌ಗೆ ಮುಂದಾಗಿದ್ದಾರೆ. ರಶ್ಮಿಕಾ ಮಂದಣ್ಣ, ದೀಪಿಕಾ ಪಡುಕೋಣೆ, ತ್ರಿಶಾ ಕೃಷ್ಣನ್, ರೋಹಿತ್ ಶರ್ಮಾ, ಸೌರವ್ ಗಂಗೂಲಿ, ಕಪಿಲ್ ಶರ್ಮಾ ಪೋಸ್ಟರ್‌ಗಳು ಈಗಾಗಲೇ ಹೊರಬಿದ್ದಿವೆ. ಹೀಗಾಗಿ ಈ ಹೊಸ ವೆಂಚರ್ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿರುತ್ತೆ ಅನ್ನೋ ಕನ್ಫರ್ಮ್. ಆದರೆ, ಇದು ಜಾಹೀರಾತಾ? ಇಲ್ಲಾ ಟಿವಿ ಶೋನಾ? ಅನ್ನೋದು ಸೆಪ್ಟೆಂಬರ್ 4ರಂದು ಗೊತ್ತಾಗಲಿದೆ.

  ಸೌರವ್ ಗಂಗೂಲಿ ಬಯೋಪಿಕ್?

  ಸೌರವ್ ಗಂಗೂಲಿ ಬಯೋಪಿಕ್?

  ಈ ಪೋಸ್ಟರ್‌ಗಳು ರಿಲೀಸ್ ಆಗುತ್ತಿದ್ದಂತೆ ಕ್ರಿಕೆಟ್ ಪ್ರೇಮಿಗಳು ಇದು, ಸೌರವ್ ಗಂಗೂಲಿ ಬಯೋಪಿಕ್ ಇರಬಹುದು ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಸೌರವ್ ಗಂಗೂಲಿ ಬಯೋಪಿಕ್ ಆಗಲಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಹೀಗಾಗಿ ಇದು ಸೌರವ್ ಗಂಗೂಲಿ ಬಯೋಪಿಕ್‌ ಅಂತಲೇ ನಂಬಿಕೊಂಡಿದ್ದಾರೆ. " ಮೆಗಾ ಬ್ಲಾಕ್‌ಬಸ್ಟರ್ ಆದಷ್ಟು ಬೇಗ ರಿಲೀಸ್ ಆಗುತ್ತಿದೆ. ಇದಕ್ಕೆ ಶೂಟಿಂಗ್‌ ಮಾಡಿದ್ದು ಖುಷಿಕೊಟ್ಟಿದೆ. ಸೆಪ್ಟೆಂಬರ್ 04ರಂದು ಟ್ರೈಲರ್ ಹೊರಬೀಳುತ್ತೆ." ಎಂದಿದ್ದಾರೆ ಸೌರವ್ ಗಂಗೂಲಿ.

  ಪೋಸ್ಟರ್‌ನಲ್ಲಿ ಏನಿದೆ?

  ಪೋಸ್ಟರ್‌ನಲ್ಲಿ ಏನಿದೆ?

  ಪ್ರತಿಯೊಬ್ಬ ಸೆಲೆಬ್ರೆಟಿ ಹಂಚಿಕೊಂಡಿರೋ ಪೋಸ್ಟರ್ ಕೂಡ ಸಾಕಷ್ಟು ಕುತೂಹಲ ಕೆರಳಿಸಿದೆ. ಪ್ರತಿ ಪೋಸ್ಟರ್‌ ಹಿಂದೆನೂ ಫೂಡ್ ಸ್ಟ್ರೀಟ್, ಜವಳಿ ಮಳಿಗೆಗಳು ಕಾಣಿಸಿಕೊಂಡಿವೆ. ಹೀಗಾಗಿ ಇದು ಟಿವಿ ಶೋನೂ ಅಲ್ಲ. ಸಿನಿಮಾನೂ ಅಲ್ಲ. ಯಾವುದೋ ರಾಷ್ಟ್ರೀಯ ಮಟ್ಟದ ಜಾಹೀತಾರು ಎಂದು ಊಹಿಸಲಾಗುತ್ತಿದೆ. ಅಸಲಿಗೆ ಈ ಕುತೂಹಲಕ್ಕೆ ಸೆಪ್ಟೆಂಬರ್ 04ರ ವರೆಗೆ ಕಾಯಲೇಬೇಕು.

  English summary
  Rashmika Mandanna, Deepika Padukone, Kapil Sharma, Rohit Sharma, Sourav Ganguly, Trisha, Joins 'Mega Blockbuster'. Trailer On September 4th. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X