For Quick Alerts
  ALLOW NOTIFICATIONS  
  For Daily Alerts

  ಹಿಂದಿ ಸಿನಿಮಾ ಚಿತ್ರೀಕರಣ ಮುಗಿಸಿ ಪಾರ್ಟಿ ಮಾಡಿದ ರಶ್ಮಿಕಾ

  By ಫಿಲ್ಮಿಬೀಟ್ ಡೆಸ್ಕ್
  |

  ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ನಟನೆಯ ಆರಂಭಿಸಿದ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನಲ್ಲಿಯೂ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ.

  ಕನ್ನಡದ ಬಳಿಕ ತೆಲುಗು, ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿ ರಶ್ಮಿಕಾ ಮಂದಣ್ಣ ಇದೀಗ ಹಿಂದಿ ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದು, ಅಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ.

  'ಮಿಷನ್ ಮಜ್ನು' ಸಿನಿಮಾ ರಶ್ಮಿಕಾ ನಟಿಸಲು ಆರಂಭಿಸಿದ ಮೊದಲ ಹಿಂದಿ ಸಿನಿಮಾ. 'ಮಿಷನ್ ಮಜ್ನು' ಸಿನಿಮಾಕ್ಕೆ ಸಹಿ ಹಾಕಿದ ಕೂಡಲೇ ಮತ್ತೊಂದು ಹಿಂದಿ ಸಿನಿಮಾ 'ಗುಡ್ ಬೈ' ಸಿನಿಮಾದಲ್ಲಿ ಅವಕಾಶ ದೊರೆಯಿತು. ಇದೀಗ ತಮ್ಮ ಮೊದಲ ಹಿಂದಿ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ ರಶ್ಮಿಕಾ ಮಂದಣ್ಣ.

  ಸಿದ್ಧಾರ್ಥ್ ಮಲ್ಹೋತ್ರಾ ನಾಯಕ ನಟನಾಗಿ ನಟಿಸಿರುವ 'ಮಿಷನ್ ಮಜ್ನು' ಸಿನಿಮಾದ ಚಿತ್ರೀಕರಣವನ್ನು ರಶ್ಮಿಕಾ ಮಂದಣ್ಣ ಹಾಗೂ ಚಿತ್ರತಂಡ ಮುಗಿಸಿದ್ದು, ಚಿತ್ರೀಕರಣ ಮುಗಿಸಿದ ಖುಷಿಯಲ್ಲಿ ಕೇಕ್ ಕತ್ತರಿಸಿ ಭರ್ಜರಿ ಪಾರ್ಟಿ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ಚಿತ್ರತಂಡ ಕೇಕ್ ಕತ್ತರಿಸುತ್ತಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ ಚಿತ್ರತಂಡ.

  ಸ್ಪೈಥ್ರಿಲ್ಲರ್-ಪ್ರೇಮಕತೆ ಹೊಂದಿರುವ ಸಿನಿಮಾ

  ಸ್ಪೈಥ್ರಿಲ್ಲರ್-ಪ್ರೇಮಕತೆ ಹೊಂದಿರುವ ಸಿನಿಮಾ

  ನಟ ಸಿದ್ಧಾರ್ಥ್ ಮಲ್ಹೋತ್ರಾ 'ಮಿಷನ್ ಮಜ್ನು' ಸಿನಿಮಾದ ನಾಯಕ ನಟರಾಗಿದ್ದು, ರಶ್ಮಿಕಾ ಮಂದಣ್ಣ ನಾಯಕಿ ಇದೊಂದು ಸ್ಪೈ ಥ್ರಿಲ್ಲರ್ ಪ್ರೇಮ ಕತೆಯಾಗಿದ್ದು, ಆಕ್ಷನ್ ಅಂಶಗಳು ಸಹ ಇರಲಿವೆ. ಸಿನಿಮಾವನ್ನು ಶಂತನು ಬಗ್ಚಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಪರ್ಮೀತ್ ಸೇಠಿ, ಝಾಕಿರ್ ಹುಸೇನ್, ಶರೀಬ್ ಹಷ್ಮಿ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾವನ್ನು ರೂನಿ ಸೋಲಿ, ಅಮರ್ ಬುಟಾಲಾ, ಗರಿಮಾ ಮೆಹ್ತಾ ನಿರ್ಮಾಣ ಮಾಡಿದ್ದಾರೆ.

  ಮೊದಲ ಚಿತ್ರಗಳು ಯಾವಾಗಲೂ ವಿಶೇಷ: ರಶ್ಮಿಕಾ

  ಮೊದಲ ಚಿತ್ರಗಳು ಯಾವಾಗಲೂ ವಿಶೇಷ: ರಶ್ಮಿಕಾ

  ಮೊದಲ ಚಿತ್ರಗಳು ಯಾವಾಗಲೂ ವಿಶೇಷ. ಮಿಷನ್ ಮಜ್ನು ನನ್ನನ್ನು ಗಡಿದಾಟಿ ಬರುವ ಅವಕಾಶ ಮಾಡಿಕೊಟ್ಟ ಚಿತ್ರ. ಈ ಪ್ರಾಜೆಕ್ಟ್‌ನೊಂದಿಗೆ ಸುಂದರ ಜನರು ಹಾಗೂ ಹಿಂದಿ ಚಿತ್ರರಂಗದೊಂದಿಗೆ ನನ್ನ ಪಯಣ ಆರಂಭಿಸಿದೆ ಎನ್ನುವ ಸಂತಸ ನನ್ನಲ್ಲಿದೆ. ಈ ಚಿತ್ರದ ಸ್ಕ್ರಿಪ್ಟ್ ಮೊದಲ ಬಾರಿಗೆ ಕೇಳಿದಾಗಲೇ ಇದರಲ್ಲಿ ನಾನು ಭಾಗಿಯಾಗಬೇಕು ಎಂದು ನಿರ್ಧರಿಸಿದೆ. ಏಕಂದರೆ, ಈ ಅವಕಾಶ ಕಳೆದುಕೊಂಡರೆ ಮತ್ತೊಮ್ಮೆ ಇಂತಹ ಪಾತ್ರ ನಾನು ಮಾಡುವುದಿಲ್ಲ ಎಂದು ತಿಳಿದಿತ್ತು. ಅಂತಹದೊಂದು ಪಾತ್ರ ಇದಾಗಿತ್ತು. ಎಂದಿಗೂ ವಿಶೇಷವಾಗಿ ಉಳಿಯುವ ಪಾತ್ರ ಇದು'' ಎಂದಿದ್ದರು ರಶ್ಮಿಕಾ ಮಂದಣ್ಣ.

  ''ಮಿಷನ್ ಮಜ್ನು' ನನಗೆ ಹಲವು ಪ್ರಥಮಗಳ ಅನುಭವ ನೀಡಿದೆ''

  ''ಮಿಷನ್ ಮಜ್ನು' ನನಗೆ ಹಲವು ಪ್ರಥಮಗಳ ಅನುಭವ ನೀಡಿದೆ''

  ''ಮಿಷನ್ ಮಜ್ನು ನನಗೆ ಹಲವು ಪ್ರಥಮಗಳ ಅನುಭವ ನೀಡಿದೆ. ಭಾರತದ ಉತ್ತರದ ಭಾಗ, ಅದರ ಸಂಸ್ಕೃತಿ, ಭಾಷೆ, ಜನರು, ಉದ್ಯಮದ ಜೊತೆಗೆ ಅದ್ಭುತ ತಂಡ ಮತ್ತು ಸಹ ನಟರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಾನು ಇದಕ್ಕಿಂತ ಹೆಚ್ಚು ಕೇಳುವುದಿಲ್ಲ. ಮಿಷನ್ ಮಜ್ನು ತಂಡಕ್ಕೆ ಪ್ರೀತಿ ಪೂರ್ವಕ ಧನ್ಯವಾದ'' ಎಂದಿದ್ದಾರೆ ರಶ್ಮಿಕಾ ಮಂದಣ್ಣ. 'ಮಿಷನ್ ಮಜ್ನು' ಸಿನಿಮಾದ ತಮ್ಮ ಪಾತ್ರದ ಚಿತ್ರೀಕರಣವನ್ನು ಕೆಲವು ದಿನಗಳ ಹಿಂದೆಯೇ ರಶ್ಮಿಕಾ ಮಂದಣ್ಣ ಮುಗಿಸಿದ್ದರು. ಆದರೆ ಈಗ ಪೂರ್ಣ ಸಿನಿಮಾದ ಚಿತ್ರೀಕರಣ ಮುಗಿದಿದೆ. ಹಾಗಾಗಿ ಚಿತ್ರತಂಡ ಒಟ್ಟಾಗಿ ಪಾರ್ಟಿ ಮಾಡಿದೆ.

  ಎರಡು ಹಿಂದಿ ಸಿನಿಮಾಗಳಲ್ಲಿ ನಟನೆ

  ಎರಡು ಹಿಂದಿ ಸಿನಿಮಾಗಳಲ್ಲಿ ನಟನೆ

  ರಶ್ಮಿಕಾ ಮಂದಣ್ಣ, 'ಗುಡ್‌ ಬೈ' ಹೆಸರಿನ ಮತ್ತೊಂದು ಹಿಂದಿ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. 'ಗುಡ್‌ ಬೈ' ರಶ್ಮಿಕಾ ನಟಿಸಿದ ಎರಡನೇ ಹಿಂದಿ ಸಿನಿಮಾ, ಆದರೆ ಮೊದಲು ಒಪ್ಪಿಕೊಂಡ ಸಿನಿಮಾಕ್ಕಿಂತಲೂ ಬೇಗನೆ ಚಿತ್ರೀಕರಣ ಮುಗಿದುಬಿಟ್ಟಿತು. ಇವೆರಡು ಸಿನಿಮಾಗಳ ಹೊರತಾಗಿ ರಶ್ಮಿಕಾ ತೆಲುಗಿನ 'ಪುಷ್ಪ' ಸಿನಿಮಾದಲ್ಲಿ ನಾಯಕಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ 'ಆಡುವಾಳ್ಳು ಮೀಕು ಜೋಹಾರ್ಲು' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ತಮಿಳು ಸಿನಿಮಾ ಒಂದಕ್ಕೆ ಸಹ ಎಸ್ ಎಂದಿದ್ದಾರೆ ರಶ್ಮಿಕಾ ಆದರೆ ಸಿನಿಮಾ ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ.

  English summary
  Actress Rashmika Mandanna wrapped up Mission Majnu movie shooting. She did party with movie team for completing shooting successfully.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X