For Quick Alerts
  ALLOW NOTIFICATIONS  
  For Daily Alerts

  ಡೇಟಿಂಗ್ ಬಗ್ಗೆ ಕೇಳಿದಕ್ಕೆ 'ಸಗಣಿಯ ರಾಶಿ' ಎಂದ ರವಿ ಶಾಸ್ತ್ರಿ.!

  By Harshitha
  |

  ಬಾಲಿವುಡ್ ನಟಿ ನಿಮ್ರತ್ ಕೌರ್ ಜೊತೆಗಿನ ಡೇಟಿಂಗ್ ಗಾಸಿಪ್ ನ ಟೀಮ್ ಇಂಡಿಯಾದ ಹೆಡ್ ಕೋಚ್ ರವಿ ಶಾಸ್ತ್ರಿ ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ''ನಾವಿಬ್ಬರೂ ಡೇಟಿಂಗ್ ಮಾಡುತ್ತಿದ್ದೇವೆ ಎಂಬ ಸುದ್ದಿ ಸಗಣಿಯ ರಾಶಿ ಅಷ್ಟೇ. ನಮ್ಮ ನಡುವೆ ಏನಿಲ್ಲ. ಏನೇನೂ ಇಲ್ಲ'' ಅಂತ ರವಿ ಶಾಸ್ತ್ರಿ ಸ್ಪಷ್ಟ ಪಡಿಸಿದ್ದಾರೆ.

  56 ವರ್ಷ ವಯಸ್ಸಿನ ರವಿ ಶಾಸ್ತ್ರಿ ಅವರಿಗೆ ಬಾಲಿವುಡ್ ನಟಿ ನಿಮ್ರತ್ ಕೌರ್ ಮೇಲೆ ಲವ್ ಆಗಿದೆ, ಇಬ್ಬರ ನಡುವೆ ಎರಡು ವರ್ಷಗಳಿಂದ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂದು ನಿನ್ನೆಯಷ್ಟೇ ಗುಲ್ಲೆದ್ದಿತ್ತು.

  ಅತ್ತ ಇಂಗ್ಲೆಂಡ್ ನಲ್ಲಿ ರವಿಶಾಸ್ತ್ರಿ ಟೆಸ್ಟ್ ಸರಣಿ ಬಗ್ಗೆ ತಲೆ ಕೆಡಿಸಿಕೊಂಡಿದ್ದರೆ, ಇತ್ತ ಅವರ ಪ್ರೀತಿ ಬಗ್ಗೆ ಬಿಟೌನ್ ನಲ್ಲಿ ತಲೆಗೊಬ್ಬರು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೆಲ್ಲ ಕೇಳಿಸಿಕೊಂಡ್ಮೇಲೆ, ರವಿ ಶಾಸ್ತ್ರಿ ಸುಮ್ಮನೆ ಇರಲಿಲ್ಲ. 'ಸಗಣಿಯ ರಾಶಿ' ಅಂತ ಹೇಳಿ ಎಲ್ಲಾ ಅಂತೆ ಕಂತೆ ಕಥೆಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಮುಂದೆ ಓದಿರಿ...

  ಕಾಡ್ಗಿಚ್ಚಿನಂತೆ ಹಬ್ಬಿದ ಸುದ್ದಿ

  ಕಾಡ್ಗಿಚ್ಚಿನಂತೆ ಹಬ್ಬಿದ ಸುದ್ದಿ

  ಟೀಮ್ ಇಂಡಿಯಾದ ಕೋಚ್ ರವಿ ಶಾಸ್ತ್ರಿ ಹಾಗೂ ನಿಮ್ರತ್ ಕೌರ್ ನಡುವೆ ಎರಡು ವರ್ಷಗಳಿಂದ ಅಫೇರ್ ಇದೆ ಎಂಬ ಸುದ್ದಿ ನಿನ್ನೆ ಇದ್ದಕ್ಕಿದ್ದಂತೆ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಕೆಲ ಪತ್ರಿಕೆಗಳು ಇದೇ ವಿಚಾರದ ಕುರಿತು ವರದಿ ಪ್ರಕಟ ಮಾಡಿದವು. ಇಷ್ಟೆಲ್ಲಾ ಆದ್ಮೇಲೆ ರವಿ ಶಾಸ್ತ್ರಿ ಸ್ಪಷ್ಟನೆ ಕೊಟ್ಟಿದ್ದಾರೆ.

  ಈ ನಟಿ ಜೊತೆ ಡೇಟ್ ಮಾಡ್ತಿದ್ದಾರಂತೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ.!ಈ ನಟಿ ಜೊತೆ ಡೇಟ್ ಮಾಡ್ತಿದ್ದಾರಂತೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ.!

  ರವಿ ಶಾಸ್ತ್ರಿ ಕೊಟ್ಟಿರುವ ಸ್ಪಷ್ಟನೆ ಏನು.?

  ರವಿ ಶಾಸ್ತ್ರಿ ಕೊಟ್ಟಿರುವ ಸ್ಪಷ್ಟನೆ ಏನು.?

  ''ಇದೊಂದು ಸಗಣಿಯ ರಾಶಿ ಅಷ್ಟೇ. ಇದರ ಬಗ್ಗೆ ಹೇಳುವುದಕ್ಕೆ ಹೆಚ್ಚೇನೂ ಇಲ್ಲ'' ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದ್ದಾಗ ರವಿ ಶಾಸ್ತ್ರಿ ಸ್ಪಷ್ಟನೆ ಕೊಟ್ಟಿದ್ದಾರೆ. ಅಲ್ಲಿಗೆ, ಇದು ಕೇವಲ ವದಂತಿ ಅಷ್ಟೇ ಅನ್ನೋದು ರವಿ ಶಾಸ್ತ್ರಿ ಮಾತುಗಳಿಂದ ಸ್ಪಷ್ಟವಾಗಿದೆ.

  ರವಿಶಾಸ್ತ್ರಿ ಜೊತೆ ಡೇಟಿಂಗ್: ನಿಮ್ರತ್ ಕೌರ್ ಕೊಟ್ಟ ಸ್ಪಷ್ಟನೆ ಏನು.?ರವಿಶಾಸ್ತ್ರಿ ಜೊತೆ ಡೇಟಿಂಗ್: ನಿಮ್ರತ್ ಕೌರ್ ಕೊಟ್ಟ ಸ್ಪಷ್ಟನೆ ಏನು.?

  ನಿಮ್ರತ್ ಕೌರ್ ಏನಂತಾರೆ.?

  ''ನನಗೆ ರೂಟ್ ಕೆನಾಲ್ ಬೇಕಾಗಬಹುದು ಎಂಬುದಷ್ಟೇ ಸದ್ಯದ ವಾಸ್ತವ. ಅದನ್ನ ಬಿಟ್ಟು ನನ್ನ ಬಗ್ಗೆ ಕೇಳಿಬರುತ್ತಿರುವ ಸುದ್ದಿಯೆಲ್ಲಾ ಸುಳ್ಳು. ಈ ಸುಳ್ಳು ಸುದ್ದಿಗಳು ಮನಸ್ಸಿಗೆ ತುಂಬಾ ಬೇಸರ ಉಂಟು ಮಾಡುತ್ತೆ'' ಎಂದು ನಟಿ ನಿಮ್ರತ್ ಕೌರ್ ಕೂಡ ಇದೇ ವಿಷಯದ ಕುರಿತು ಟ್ವೀಟ್ ಮಾಡಿ ಕ್ಲಾರಿಟಿ ಕೊಟ್ಟಿದ್ದಾರೆ.

  ಪತ್ನಿಯಿಂದ ರವಿ ಶಾಸ್ತ್ರಿ ದೂರ

  ಪತ್ನಿಯಿಂದ ರವಿ ಶಾಸ್ತ್ರಿ ದೂರ

  1990 ರಲ್ಲಿ ರಿತು ಸಿಂಗ್ ರನ್ನ ರವಿ ಶಾಸ್ತ್ರಿ ಮದುವೆ ಆದರು. ಆದ್ರೆ, ಈ ಮದುವೆ ಹೆಚ್ಚು ದಿನ ಉಳಿಯಲಿಲ್ಲ. ರಿತು ಸಿಂಗ್ ರನ್ನ ವಿವಾಹ ಆಗುವ ಮುನ್ನ ಸೈಫ್ ಅಲಿ ಖಾನ್ ಮಾಜಿ ಪತ್ನಿ ಅಮೃತಾ ಸಿಂಗ್ ರನ್ನ ರವಿ ಶಾಸ್ತ್ರಿ ಪ್ರೀತಿಸುತ್ತಿದ್ದರು. ನಿಶ್ಚಿತಾರ್ಥ ಕೂಡ ಮಾಡಿಕೊಂಡರು. ಆದ್ರೆ, ಈ ಸಂಬಂಧ ಕೂಡ ಮುರಿದು ಬಿದ್ದಿತ್ತು.

  English summary
  Ravi Shastri quashes rumours about dating Bollywood Actress Nimrat Kaur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X