»   » ಕಿಂಗ್ ಖಾನ್ ಶಾರುಖ್ ಜೊತೆ ಮಂಡ್ಯ ಹೈದ

ಕಿಂಗ್ ಖಾನ್ ಶಾರುಖ್ ಜೊತೆ ಮಂಡ್ಯ ಹೈದ

Posted By:
Subscribe to Filmibeat Kannada

'ಸಾಹಸ ಸಾರ್ವಭೌಮ' ರವಿವರ್ಮ ಬಾಲಿವುಡ್ ಗೆ ಹಾರಿರುವ ಸುದ್ದಿ ಹಳೆಯದ್ದೇ. ಬಾಲಿವುಡ್ 'ಟೈಗರ್' ಸಲ್ಮಾನ್ ಖಾನ್ ಗೆ ಸಾಹಸ ಸಂಯೋಜಿಸಿ ಎಲ್ಲರ ಮೆಚ್ಚುಗೆ ಗಳಿಸಿದವರು ರವಿವರ್ಮ. ಇಷ್ಟು ದಿನ ಪರದೆ ಹಿಂದೆ ನಿಂತು ಬೆವರು ಹರಿಸುತ್ತಿದ್ದ ರವಿವರ್ಮ ಇದೀಗ ಬಾಲಿವುಡ್ ಬೆಳ್ಳಿಪರದೆ ಮೇಲೆ ಮಿಂಚಲು ಅಣಿಯಾಗುತ್ತಿದ್ದಾರೆ.

ಹೌದು, ಬಾಲಿವುಡ್ ಬಿಗ್ ಸ್ಕ್ರೀನ್ ಗಾಗಿ ರವಿವರ್ಮ ಬಣ್ಣ ಹಚ್ಚಲಿದ್ದಾರೆ. ಎಲ್ಲದಕ್ಕಿಂತ ಬ್ರೇಕಿಂಗ್ ನ್ಯೂಸ್ ಅಂದ್ರೆ, ರವಿವರ್ಮ ತೆರೆಹಂಚಿಕೊಳ್ಳುತ್ತಿರುವುದು ಕಿಂಗ್ ಖಾನ್ ಶಾರುಖ್ ಜೊತೆ. [ಫೈಟ್ ಮಾಸ್ಟರ್ ರವಿವರ್ಮ ಈಗ ನಾಯಕ ನಟ ]

Ravi Varma to share screen space with Shahrukh Khan in Raees

ಶಾರುಖ್ ಖಾನ್ ಅಭಿನಯದ 'Raees' ಚಿತ್ರದಲ್ಲಿ ರವಿವರ್ಮ ಅಭಿನಯಿಸುತ್ತಿದ್ದಾರೆ. ಅದ್ರಲ್ಲೂ ಖೇಡಿ ಪಾತ್ರ ಅನ್ನೋದು ವಿಶೇಷ. ''ನನ್ನ ಪಾತ್ರದಲ್ಲಿ ಸ್ಟಂಟ್ ಇದೆ. ಖೇಡಿ ಪಾತ್ರ. ಹೆಚ್ಚೇನಾದರೂ ಹೇಳಿದರೆ ಕಥೆ ಬಿಟ್ಟುಕೊಟ್ಟಂತಾಗುತ್ತೆ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ರವಿವರ್ಮ ಹೇಳಿದರು.

ಶಾರುಖ್ ಖಾನ್ ಜೊತೆ ರವಿವರ್ಮಗಿದು ಮೊದಲ ಚಿತ್ರ. ಡೇಟ್ಸ್ ಹೊಂದಾಣಿಕೆ ಆಗಿದ್ರೆ, ಶಾರುಖ್ ಖಾನ್ ರ ಬ್ಲಾಕ್ ಬಸ್ಟರ್ 'ಹ್ಯಾಪಿ ನ್ಯೂ ಈಯರ್' ಚಿತ್ರಕ್ಕೆ ರವಿವರ್ಮ ಆಕ್ಷನ್ ಕೊರಿಯೋಗ್ರಫಿ ಮಾಡಬೇಕಿತ್ತು. ಆದ್ರೆ, 'ಆಕ್ಷನ್ ಜಾಕ್ಸನ್'ನಲ್ಲಿ ರವಿವರ್ಮ ಬಿಜಿಯಿದ್ದರಿಂದ ಸಾಧ್ಯವಾಗಿರಲಿಲ್ಲ. [ಸಲ್ಲು, ಶಾರುಖ್ ಗೆ ಸ್ಟಂಟ್ ಮಾಡಿಸೋ ಮಂಡ್ಯ ಹೈದ]

Ravi Varma to share screen space with Shahrukh Khan in Raees

ಅಂದು ಮಿಸ್ ಆದ ಅವಕಾಶ ಈಗ ರವಿವರ್ಮ ರನ್ನ ಹುಡುಕಿಕೊಂಡು ಬಂದಿದೆ. ನಟಿಸುವುದರ ಜೊತೆಗೆ 'Raees' ಚಿತ್ರದಲ್ಲಿ ಸಾಹಸ ಸಂಯೋಜನೆ ಕೂಡ ಮಾಡುತ್ತಿರುವುದು ಖುದ್ದು ರವಿವರ್ಮ ಅವರೇ. 'R..Rajkumar' ಚಿತ್ರದಲ್ಲಿನ ಸ್ಟಂಟ್ಸ್ ನೋಡಿ ನಿರ್ದೇಶಕ ರಾಹುಲ್ ಧೋಲಕಿಯಾ, ರವಿವರ್ಮಗೆ ಬುಲಾವ್ ನೀಡಿದ್ದಾರೆ. [ಪುನೀತ್-ಶಿವಣ್ಣ-ರಾಘಣ್ಣ ಚಿತ್ರಕ್ಕೆ ಮುಹೂರ್ತ ಫಿಕ್ಸ್..!]

ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡರೂ, ಬಾಲಿವುಡ್ ನಲ್ಲಿ ದಿನದಿಂದ ದಿನಕ್ಕೆ ರವಿವರ್ಮ ಬೆಳೆಯುತ್ತಿರುವುದು ಕನ್ನಡ ಚಿತ್ರರಂಗದ ಮಟ್ಟಿಗೆ ಹೆಮ್ಮೆಯ ವಿಷಯ. ಸದ್ಯಕ್ಕೆ 'Production A' ಚಿತ್ರದ ಪೂರ್ವ ತಯಾರಿಯಲ್ಲಿ ತೊಡಗಿರುವ ರವಿವರ್ಮ, ಅದೇ ಗ್ಯಾಪ್ ನಲ್ಲಿ ಮೇ ತಿಂಗಳಲ್ಲಿ ಶಾರುಖ್ ಖಾನ್ ಜೊತೆ ಮಿಂಚುವುದಕ್ಕೆ ರೆಡಿಯಾಗುತ್ತಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Stunt Master Ravi Varma is roped into share screen space with Bollywood Actor Shahrukh khan in 'Raees'. Ravi Varma is playing a Villain in the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada