»   » ರಿಯಲ್ ದೋಸ್ತಾನಾ! ಮದುವೆಯಾಗ್ತಾರಂತೆ ರಣ್ವೀರ್-ಅರ್ಜುನ್

ರಿಯಲ್ ದೋಸ್ತಾನಾ! ಮದುವೆಯಾಗ್ತಾರಂತೆ ರಣ್ವೀರ್-ಅರ್ಜುನ್

Posted By:
Subscribe to Filmibeat Kannada

ನಿಮ್ಮ ಕಣ್ಣನ್ನ ನೀವೇ ನಂಬೋಕೆ ಆಗದಿದ್ದರೂ, ನೀವು ಓದಿದ್ದು ಅಕ್ಷರಶಃ ಸತ್ಯ. ಯಾವುದು ''ನಮ್ಮ ಭಾರತೀಯರಿಗಲ್ಲ'' ಅಂತ ಇಲ್ಲಿವರೆಗೂ ಪರಿಗಣಿಸಲಾಗುತ್ತಿತ್ತೋ, ಅದನ್ನ ಸಾಧ್ಯ ಮಾಡಿ ತೋರಿಸುವ ಇರಾದೆ ಇದೆ ಬಾಲಿವುಡ್ ನ ಈ ಯುವ ನಟರಿಗೆ!

'ಗುನ್ ಡೇ' ಸಿನಿಮಾದಲ್ಲಿ ಖಾಸಾ ಖಾಸಾ ದೋಸ್ತಾಗಿ ನಟಿಸಿದ್ದ ರಣ್ವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್, ನಿಜಜೀವನದಲ್ಲೂ ಆತ್ಮೀಯ ಸ್ನೇಹಿತರು. ಅದು ಬಹಿರಂಗವಾಗಿ 'ಮಿತಿ' ಮೀರಿದಂತೆ ಕೆಲವರಿಗೆ ಕಂಡ ಪರಿಣಾಮ ಇಬ್ಬರನ್ನೂ 'ಬೇರೆ' ತರಹ ಪರಿಗಣಿಸಲಾಗುತ್ತಿತ್ತು.

ಅಲ್ಲಿಂದ ಶುರುವಾದ ಅಂತೆ-ಕಂತೆಗಳಿಗೆ ಬ್ರೇಕ್ ಹಾಕುವುದಕ್ಕೆ ಹೋಗಿ, ಅರ್ಜುನ್ ಕಪೂರ್ ಮೊನ್ನೆ ಇದ್ದಿಕ್ಕಿದ್ಹಂಗೆ ಹೊಸ ಬಾಂಬ್ ಸಿಡಿಸಿಬಿಟ್ಟರು. ''ಕಾನೂನು ಬದಲಾದರೆ ರಣ್ವೀರ್ ಸಿಂಗ್ ನ ಮದುವೆಯಾಗುವುದಕ್ಕೆ ಸಿದ್ಧ'', ಅಂತ ಅರ್ಜುನ್, ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. [ಚಿಕ್ಕಿ ಶ್ರೀದೇವಿ ಬಗ್ಗೆ ಅರ್ಜುನ ಉವಾಚವೇನು?]

Real Dostana-Arjun Kapoor to Marry Ranveer Singh

ತಮ್ಮ 'ತೇವರ್' ಚಿತ್ರದ ಪ್ರೋಮೋಷನ್ ವೇಳೆ 'ರಣ್ವೀರ್ ಸಿಂಗ್' ಬಗ್ಗೆ ತೂರಿಬಂದ ಪ್ರಶ್ನೆಗೆ ಕಿಂಚಿತ್ತೂ ಅಂಜಿಕೆ ವ್ಯಕ್ತಪಡಿಸದೆ ಅರ್ಜುನ್ ಕಪೂರ್ ''ಕಾನೂನು ಅನುಮತಿ'' ಕೋರಿದ ಪರಿ ಇದು.

ಹಾಗಂತ ಅರ್ಜುನ್, ರಣ್ವೀರ್ ನ ವರಿಸಿದರೆ ಪಾಪ, ದೀಪಿಕಾ ಕಥೆ ಏನು? ಅಂತ ಯೋಚಿಸಬೇಡಿ. ಯಾಕಂದ್ರೆ ಇದು ಅರ್ಜುನ್ ಮಾತಿನ ಚಟಾಕಿ ಅಷ್ಟೆ. ರಣ್ವೀರ್ ಸಿಂಗ್ ಕುರಿತಾದ ಪ್ರಶ್ನೆಗೆ ನಗುನಗುತ್ತಲ್ಲೇ ಉತ್ತರಿಸಿದ ಅರ್ಜುನ್, ಕೊಂಚ ಕಾಮಿಡಿ ಮಾಡುವುದರ ಜೊತೆಗೆ ತಮ್ಮ ಸ್ನೇಹದ ಆತ್ಮೀಯ ಕ್ಷಣಗಳನ್ನು ಮೆಲುಕು ಹಾಕಿದರು.

''ರಣ್ವೀರ್ ಜೊತೆಗಿನ ನನ್ನ ಸ್ನೇಹ ನಿಷ್ಕಲ್ಮಶವಾದದ್ದು. ನಮ್ಮ ಸ್ನೇಹದಲ್ಲಿ ಸುಳ್ಳು ಅನ್ನುವುದಕ್ಕೆ ಜಾಗವಿಲ್ಲ. ನಮ್ಮ ಸಿನಿಮಾಗಳ ಬಗ್ಗೆ ಸಾಕಷ್ಟು ಚರ್ಚೆ ಮಾಡುತ್ತೀವಿ. ಸಿನಿಮಾಗೆ ಕಾಲಿಡುವುದಕ್ಕೂ ಮುನ್ನವೇ ರಣ್ವೀರ್ ನನ್ನ ಗೆಳೆಯ. ಹೀಗಾಗಿ ಆತ್ಮೀಯತೆ ಹೆಚ್ಚು'', ಅಂತ ಅರ್ಜುನ್ ಕಪೂರ್ ಹೇಳಿದರು. ಅಲ್ಲಿಗೆ ಒಂದು ಬಾಂಬ್ ಶಬ್ದ ಕೇಳಿ ಗಾಬರಿಯಾಗಿದ್ದ ಪತ್ರಕರ್ತರು ನಿಟ್ಟುಸಿರು ಬಿಡುವಂತಾಯ್ತು. (ಏಜೆನ್ಸೀಸ್)

Post by Oneindia Kannada.
English summary
Arjun Kapoor-Ranveer Singh 'DOSTANA' is been Talk of the town for quite some time. Arjun Kapoor has now made it clear to the media that 'They' will apparently tie the knot when law allows it in India.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada