For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ 'ಜೈಹೋ' ಚಿತ್ರ ಸೋತಿದ್ದು ಈ 5 ಕಾರಣದಿಂದ

  |

  ಸಲ್ಮಾನ್ ಖಾನ್ ಚಿತ್ರವೆಂದರೆ ಸ್ಯಾಂಡಲ್ ವುಡ್ ನಲ್ಲಿ ನಮ್ಮ ದರ್ಶನ್ ಚಿತ್ರವಿದ್ದಂತೆ. ಬಾಕ್ಸಾಫೀಸಿನಲ್ಲಿ ಎರ್ರಾಬಿರ್ರಿ ವಹಿವಾಟು ನಡೆಸುವ ಚಿತ್ರಗಳು. ಚಿತ್ರ ಎಷ್ಟು ದಿನ ಓಡಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಎಷ್ಟು ಕಲೆಕ್ಷನ್ ಮಾಡಿತು ಎನ್ನುವುದು ಇಲ್ಲಿ ಮುಖ್ಯ. ಒಂದು ಲೆಕ್ಕದಲ್ಲಿ ಅದೂ ಸರೀನೇ ಬಿಡಿ, ಯಾಕೆಂದರೆ ಸಿನಿಮಾ ಬಿಡುಗಡೆಯಾಗುವ ಚಿತ್ರಮಂದಿರಗಳ ಸಂಖ್ಯೆ ಜಾಸ್ತಿ ಇರುತ್ತೆ ನೋಡಿ..

  ಸಲ್ಮಾನ್ ಖಾನ್ ಅಭಿನಯದ ಇತ್ತೀಚಿನ ಚಿತ್ರಗಳೆಲ್ಲಾ ರಿಮೇಕ್ ಚಿತ್ರಗಳು. ಆದರೆ, ಸಲ್ಮಾನ್ ಚಿತ್ರ ನೋಡಲು ಹೋಗುವ ಪ್ರೇಕ್ಷಕ ರಿಮೇಕ್ ಮತ್ತು ಸ್ವಮೇಕ್ ನಲ್ಲಿ ಭೇದಭಾವ ಮಾಡುವುದಿಲ್ಲ (ಇದರಲ್ಲಿ ನಮ್ಮವರೂ ಇದ್ದಾರೆ). ಯಾವುದಾದರೇನು ಎರಡು ತಾಸು ಟೈಂಪಾಸ್ ಆದ್ರೆ ಸಾಕು ಎನ್ನುವ ವಿಶಾಲ ಮನೋಭಾವದರು. (ಕೋಮುವಾದಿ ಅಭಿಮಾನಿಗಳು ನನಗೆ ಸಲ್ಲ ಎಂದ ಸಲ್ಲು)

  ವಿಷಯಕ್ಕೆ ಬರುವುದಾದರೆ, ಸಲ್ಮಾನ್ ಖಾನ್ ಅಭಿನಯದ ಮೊನ್ನೆ ಮೊನ್ನೆ ಬಿಡುಗಡೆಯಾದ 'ಜೈ ಹೋ' ಚಿತ್ರ ಅಪರೂಪಕ್ಕೆ ಎನ್ನುವಂತೆ 'ಹಂಡ್ರೆಡ್ ಕ್ರೋರ್' ಪಟ್ಟಿಗೆ ಸೇರಿಲ್ಲ, ಚಿತ್ರ ಮಠ ಸೇರಿದೆ ಎನ್ನುತ್ತಾರೆ ಬಾಲಿವುಡ್ ಸಂಖ್ಯಾ ಶಾಸ್ತ್ರಜ್ಞರು. ಚಿತ್ರ ಒಪ್ಪಿಕೊಳ್ಳುವ ಮುನ್ನ ಸಲ್ಮಾನ್ ಕಥೆ, ಚಿತ್ರಕಥೆಯ ಬಗ್ಗೆ ಗಮನ ಹರಿಸಿಲ್ವಾ ಎಂದು ಜುಹು ಬೀಚಿನಲ್ಲಿ ಅಭಿಮಾನಿಗಳು ಮಾತನಾಡುತ್ತಿದ್ದಾರಂತೆ. (ಜೈ ಹೋ, ಸಲ್ಲೂ ಅಭಿನಯಕ್ಕೆ ಥಮ್ಸ್ ಅಪ್)

  ಕೃಷ್ಣಮೃಗ ಭೇಟೆಯಾಡಿದರೂ, ಮುಂಬೈ ಫುಟ್ ಪಾತಿನಲ್ಲಿ ಕಾರು ಚಲಾಯಿಸಿ ವ್ಯಕ್ತಿಯ ಸಾವಿಗೆ ಕಾರಣನಾದರೂ (ಕೋರ್ಟ್ ಅಂತಿಮ ತೀರ್ಪು ಬಿದ್ದಿಲ್ಲ) ಸಲ್ಮಾನ್ ಖಾನ್ ವ್ಯಕ್ತಿಗತವಾಗಿ ಒಳ್ಳೆ ಮನುಷ್ಯ ಅಂತಾರಪ್ಪ. ಸಿನಿಮಾ ಎಂದ ಮೇಲೆ ಸೋಲು ಗೆಲುವು ಕಾಮನ್. ಜೈಹೋ ಚಿತ್ರದ ಸೋಲಿನ ಜವಬ್ದಾರಿಯನ್ನು ನಾನು ಸಂಪೂರ್ಣವಾಗಿ ವಹಿಸಿಕೊಳ್ಳುತ್ತೇನೆ ಎಂದಿದ್ದಾರಂತೆ ಸಲ್ಲು ಮಿಯಾ (ಓದುಗರ ಗಮನಕ್ಕೆ ಜೈ ಹೋ ಚಿತ್ರದ ನಿರ್ಮಾಪಕ ಸಲ್ಮಾನ್ ಖಾನ್ ಅವರ ಚೋಟೇ ಭಾಯಿ )

  ಬಾಲಿವುಡ್ ಟ್ರೇಡ್ ಅನಲಿಸ್ಟ್ ಪ್ರಕಾರ ಜೈಹೋ ಚಿತ್ರ ಸೋಲಲು ಕಾರಣವಾದ ಐದು ಅಂಶಗಳು ಯಾವುವು? ಸ್ಲೈಡಿನಲ್ಲಿ..

  ಚಿತ್ರದ ಪ್ರಚಾರಕ್ಕೆ ಯಾಕೆ ಗಮನ ಕೊಟ್ಟಿಲ್ಲ

  ಚಿತ್ರದ ಪ್ರಚಾರಕ್ಕೆ ಯಾಕೆ ಗಮನ ಕೊಟ್ಟಿಲ್ಲ

  ಜೈಹೋ ಚಿತ್ರದ ಪ್ರಮೋಷನಿಗೆ ಚಿತ್ರತಂಡ ಹೆಚ್ಚಿನ ಆದ್ಯತೆ ನೀಡದೇ ಇರುವುದು ಚಿತ್ರದ ಸೋಲಿಗೊಂದು ಪ್ರಮುಖ ಕಾರಣವಾಗಿದೆ. ಚಿತ್ರದ ಪೋಸ್ಟರುಗಳನ್ನು ಸಲ್ಮಾನ್ ಟ್ವಿಟರ್ ಅಭಿಮಾನಿಗಳು ತಯಾರಿಸಿದ್ದರಂತೆ. ಸಲ್ಮಾನ್ ಖಾನಿಗೆ ತನ್ನ ಮೇಲಿದ್ದ ಓವರ್ ಕಾನ್ಫಿಡೆನ್ಸ್ ನಿಂದಾಗಿ ಚಿತ್ರದ ಪ್ರಮೋಷನಿಗಾಗಿ ಹೆಚ್ಚು ಖರ್ಚು ಮಾಡಬೇಕಾಗಿಲ್ಲ, ನನ್ನ ಚಿತ್ರ ನೋಡಲು ಜನ ಬಂದೇ ಬರುತ್ತಾರೆ ಎಂದು ನಿರ್ದೇಶನ ನೀಡಿದ್ದರಂತೆ. ಹಾಗಾಗಿ ಚಿತ್ರತಂಡ ಪ್ರಚಾರಕ್ಕೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ.

  ಅಭಿಮಾನಿಗಳಿಗೆ ಗೊಂದಲ

  ಅಭಿಮಾನಿಗಳಿಗೆ ಗೊಂದಲ

  ಧೂಮ್ 3 ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಲ್ಮಾನ್ ನನ್ನ ಮುಂದಿನ ಚಿತ್ರ ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡುತ್ತದೆ ಎಂದಿದ್ದರು. ಆದರೆ ಜೈಹೋ ಚಿತ್ರ ಬಿಡುಗಡೆಗೆ ಸ್ವಲ್ಪ ದಿನ ಮುನ್ನ ನನಗೆ 300 ಕೋಟಿ 500 ಕೋಟಿ ಈ ರೀತಿ ನಂಬರ್ ನಲ್ಲಿ ನಂಬಿಕೆ ಇಲ್ಲ ಎಂದು ಮಾತು ಬದಲಿಸಿದ್ದರು. ಇದರಿಂದ ಸಲ್ಮಾನ್ ಅಭಿಮಾನಿ ವಲಯಗಳಲ್ಲಿ ಖುದ್ದು ಚಿತ್ರತಂಡಕ್ಕೇ ಚಿತ್ರದ ಮೇಲೆ ಭರವಸೆ ಇಲ್ಲ ಮಾತು ಬರಲಾರಂಬಿಸಿತಂತೆ.

  ಅಖಿಲೇಶ್ ಜೊತೆ ಕಾಣಿಸಿಕೊಂಡಿದ್ದು

  ಅಖಿಲೇಶ್ ಜೊತೆ ಕಾಣಿಸಿಕೊಂಡಿದ್ದು

  ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ನಡೆದ ಸೈಫಾಯಿ ಮಹೋತ್ಸವ್ 2014ನಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಜೊತೆ ಸಲ್ಮಾನ್ ಖಾನ್ ಕಾಣಿಸಿ ಕೊಂಡ ನಂತರ ಅವರ ವಿರುದ್ದ ಬಹಳ ಅಪಪ್ರಚಾರ ನಡೆಯಿತು. ಮುಜಫರ್ ನಗರದಲ್ಲಿನ ಸಂತ್ರಸ್ತರನ್ನು ಸರಿಯಾಗಿ ನೋಡಿಕೊಳ್ಳದ ಸರಕಾರಕ್ಕೆ ಈ ಅದ್ದೂರಿ ಉತ್ಸವ ಯಾಕೆ ಬೇಕಿತ್ತು. ಬಾಲಿವುಡ್ ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸಬಾರದಾಗಿತ್ತು ಎಂದು ಮಾಧ್ಯಮಗಳು ಮತ್ತು ಜನರು ಟೀಕಿಸಿದ್ದರು. ಇದು ಕೂಡಾ ಚಿತ್ರದ ಸೋಲಿಗೆ ಕಾರಣ ಎನ್ನುತ್ತಾರೆ ಮುಂಬೈ ಟ್ರೇಡ್ ಅನಲಿಸ್ಟುಗಳು.

  ಮೋದಿ ಮತ್ತು ಸಲ್ಲು

  ಮೋದಿ ಮತ್ತು ಸಲ್ಲು

  ಅಹಮದಾಬಾದಿನಲ್ಲಿ ಮೋದಿ ಜೊತೆ ಸಲ್ಮಾನ್ ಕಾಣಿಸಿಕೊಂಡಿದ್ದು ಕೆಲ ಮುಸ್ಲಿಂರ ಸಿಟ್ಟಿಗೆ ಕಾರಣವಾಯಿತು, ಇದು ಕೂಡಾ ಚಿತ್ರದ ಸೋಲಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. (ಪ್ರಧಾನಿ ಹುದ್ದೆಗೆ ಮೋದಿ ಅರ್ಹ: ನಟ ಸಲ್ಮಾನ್ ಖಾನ್)

  ಆನ್ ಲೈನ್ ಬುಕ್ಕಿಂಗ್

  ಆನ್ ಲೈನ್ ಬುಕ್ಕಿಂಗ್

  ಹೆಚ್ಚಾಗಿ ಸಲ್ಮಾನ್ ಖಾನ್ ಚಿತ್ರಗಳ ಆನ್ಲೈನ್ ಬುಕ್ಕಿಂಗ್ ಮೂರು ದಿನಗಳ ಮುಂಚಿತವಾಗಿಯೇ ಆರಂಭವಾಗುತ್ತದೆ. ಆದರೆ ಜೈಹೋ ಚಿತ್ರದ ಬುಕ್ಕಿಂಗ್ ಬಹಳ ಲೇಟಾಗಿ ಆರಂಭವಾಯಿತು. ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಚಿತ್ರ ಯಾವ ಯಾವ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತದೆ ಎನ್ನುವ ಮಾಹಿತಿಯೇ ಇರಲಿಲ್ಲ.

  English summary
  Five Reason for Salman Khan Jai Ho movie poor performance in overall Box Office.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X