For Quick Alerts
  ALLOW NOTIFICATIONS  
  For Daily Alerts

  ಐಶ್ವರ್ಯಾ ರೈಗೆ ಪ್ರೀತಿಯ ಪತ್ರ ಬರೆದಿದ್ದ ನಟಿ ರೇಖಾ; ಏನಿದೆ ಪತ್ರದಲ್ಲಿ?

  By ಫಿಲ್ಮಿಬೀಟ್ ಡೆಸ್ಕ್
  |

  ಮಾಜಿ ವಿಶ್ವ ಸುಂದರಿ, ಬಾಲಿವುಡ್​ ಖ್ಯಾತ ನಟಿ ಐಶ್ವರ್ಯ ರೈ ಬಚ್ಚನ್ ಬಾಲಿವುಡ್‌ನಲ್ಲಿ 20 ವರ್ಷಗಳನ್ನು ಪೂರೈಸಿ ಮುನ್ನುಗುತ್ತಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗಹೊಂದಿರುವ ಐಶ್ವರ್ಯಾ ರೈ ಇಂದಿಗೂ ಬೇಡಿಕೆಯ ನಟಿ. 20 ವರ್ಷ ಪೂರೈಸಿದ ಐಶ್‌ಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಅಭಿನಂದನೆ ಸಲ್ಲಿಸಿದ್ದರು. ವಿಶೇಷ ಎಂದರೆ ಹಿರಿಯ ನಟಿ ರೇಖಾ ಅವರ ಅಭಿನಂದನೆ.

  ಐಶ್ವರ್ಯಾ ರೈ ಅವರಿಗೆ ನಟಿ ರೇಖಾ ಪ್ರೀತಿಯ ಪತ್ರ ಬರೆಯುವ ಮೂಲಕ ವಿಶೇಷ ಅಭಿನಂದನೆ ತಿಳಿಸಿದ್ದರು. ಈ ಪತ್ರ ಈಗ ವೈರಲ್ ಆಗಿದೆ. ಅಂದಹಾಗೆ ಐಶ್ವರ್ಯಾ ಮತ್ತು ರೇಖಾ ಆತ್ಮೀಯ ಬಾಂಧವ್ಯವನ್ನು ಹೊಂದಿದ್ದಾರೆ. ಇಬ್ಬರು ನಟಿಯರು ಪರಸ್ಪರ ಗೌರವ ಸಂಬಂಧವನ್ನು ಹೊಂದಿರುವುದಲ್ಲದೇ, ಐಶ್ವರ್ಯ ಅವರು ರೇಖಾರನ್ನು 'ರೇಖಾ ಮಾ' ಎಂದು ಕರೆಯುತ್ತಾರೆ. ಬಚ್ಚನ್ ಕುಟುಂಬದಿಂದ ರೇಖಾ ದೂರ ಇದ್ದರೂ ಐಶ್ವರ್ಯಾ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಅದೇ ಪ್ರೀತಿ, ಬಾಂಧವ್ಯದಲ್ಲಿ ಐಶ್ವರ್ಯಾ ಅವರಿಗೆ ಪತ್ರ ಬರೆದಿದ್ದರು. ರೇಖಾ ಬರೆದ ಪತ್ರ ಈಗ ವೈರಲ್ ಆಗಿದೆ. ಅಂದಹಾಗೆ ಪತ್ರದಲ್ಲಿ ಏನಿದೆ? ಮುಂದೆ ಓದಿ...

  ಆರಾಧ್ಯ ತಾಯಿಯ ಪಾತ್ರ ತುಂಬಾ ಇಷ್ಟ ಎಂದ ರೇಖಾ

  ಆರಾಧ್ಯ ತಾಯಿಯ ಪಾತ್ರ ತುಂಬಾ ಇಷ್ಟ ಎಂದ ರೇಖಾ

  ರೇಖಾ ಬರೆದ ಪತ್ರದಲ್ಲಿ ಐಶ್ವರ್ಯಾ ಅವರನ್ನು ಹಾಡಿ ಹೊಗಳಿದ್ದಾರೆ. ಐಶ್ವರ್ಯಾ ಅವರು ನಿಭಾಯಿಸಿದ ಪಾತ್ರಗಳಲ್ಲಿ ಆರಾಧ್ಯಳ ತಾಯಿಯಾಗಿ ಐಶ್ವರ್ಯಾ ಅವರನ್ನು ತುಂಬಾ ಇಷ್ಟಪಡುತ್ತೇನೆ ಎಂದು ರೇಖಾ ಹೇಳಿದ್ದಾರೆ. ಅಂದಹಾಗೆ ಈ ಪತ್ರ ಐಶ್ವರ್ಯಾ ರೈ ಅವರ ಏ ದಿಲ್ ಹೈ ಮುಷ್ಕಿಲ್ ಗಿಂತ ಮುಂಚೆ ಬರೆಯಲಾಗಿದೆ.

  ಐಶ್ವರ್ಯಾಗೆ ರೇಖಾ ಬರೆದ ಪತ್ರ

  ಐಶ್ವರ್ಯಾಗೆ ರೇಖಾ ಬರೆದ ಪತ್ರ

  "ನಿಮ್ಮಂತ ಮಹಿಳೆ ಹರಿಯುವ ನದಿಯ ಹಾಗೆ, ಎಂದಿಗೂ ನಿಲ್ಲುವುದಿಲ್ಲ. ಅವಳು ಬಯಸಿದ ಸ್ಥಳಕ್ಕೆ ಹೋಗಿ ತಲುಪುತ್ತಾಳೆ. ತನಗೆ ತಾನೆ ಸಿದ್ಧಳಾಗಿ ಗಮ್ಯ ಸ್ಥಾನ ತಲುಪುತ್ತಾಳೆ. ಜನರು ನೀವು ಹೇಳಿದ್ದನ್ನು ಮರೆತು ಬಿಡಬಹುದು. ನೀವು ಮಾಡಿದನ್ನು ಸಹ ಅವರು ಮರೆತು ಬಿಡಬಹುದು. ಆದರೆ ನೀವು ಅವರಿಗೆ ನೀಡಿದ ಭಾವನೆಯನ್ನು ಅವರು ಮರೆಯುವುದಿಲ್ಲ. ಧೈರ್ಯವಿಲ್ಲದೆಯೇ ಬೇರೆ ಯಾವುದೇ ಸದ್ಗುಣವನ್ನು ನಿರಂತರವಾಗಿ ಅಭ್ಯಾಸ ಮಾಡಲು ಸಾಧ್ಯವಿಲ್ಲದ ಕಾರಣ ಎಲ್ಲಾ ಸದ್ಗುಣಗಳಲ್ಲಿ ಧೈರ್ಯವು ಅತ್ಯಂತ ಪ್ರಮುಖವಾದುದು ಎಂಬುದಕ್ಕೆ ನೀವು ಜೀವಂತ ಉದಾಹರಣೆ" ಎಂದಿದ್ದಾರೆ.

  ನೀವು ಇಷ್ಟ ಪಡುವ ಕೆಲಸ ಮುಂದುವರಿಸಿದ್ದೀರಿ

  ನೀವು ಇಷ್ಟ ಪಡುವ ಕೆಲಸ ಮುಂದುವರಿಸಿದ್ದೀರಿ

  "ನೀಮ್ಮಲ್ಲಿರುವ ಉತ್ತಮ ಗುಣವೆಂದರೆ ಪ್ರಸ್ತುತದೊಂದಿಗೆ ಕೃತಜ್ಞತೆಯಿಂದ ಇರುವುದು. ನೀವು ಇಷ್ಟಪಡುವ ಕೆಲಸಗಳನ್ನು ನೀವು ಮುಂದುವರಿಸಿದ್ದೀರಿ. ಜೊತೆಗೆ ಜನರು ಅದನ್ನು ಮರೆಯಲು ಸಾಧ್ಯವಾಗದಂತೆ ಅದನ್ನು ಪ್ರಸ್ತುತಪಡಿಸಿದ್ದೀರಿ. ಬಹಳ ದೂರ ಬಂದಿದ್ದೀಯ ಮಗು. ನೀನು ಫೀನಿಕ್ಸ್ ನಂತಹ ಅನೇಕ ಅಡೆತಡೆಗಳನ್ನು ಸಹಿಸಿಕೊಂಡಿದ್ದೀರಿ" ಎಂದು ಹೇಳಿದ್ದಾರೆ.

  ನಿಮ್ಮ ಬಗ್ಗೆ ಹೇಳಲು ಪದಗಳು ಸಾಲುತ್ತಿಲ್ಲ

  ನಿಮ್ಮ ಬಗ್ಗೆ ಹೇಳಲು ಪದಗಳು ಸಾಲುತ್ತಿಲ್ಲ

  "ಪುಟ್ಟ ಚಂದ್ರ ಮುಖದ ಹುಡುಗಿಯ ಬಗ್ಗೆ ನಾನು ಎಷ್ಟು ಹೆಮ್ಮೆಪಡುತ್ತೇನೆ ಎಂದರೆ ಪದಗಳಲ್ಲಿ ಬರೆಯಲು ಸಾಧ್ಯವಿಲ್ಲ. ನೀವು ನಿರ್ವಹಿಸಿರುವ ಎಲ್ಲಾ ಪಾತ್ರಗಳಲ್ಲೂ ಅತ್ಯುತ್ತಮವಾದದ್ದನ್ನೇ ನೀಡಿದ್ದೀರಿ. ಆದರೆ ಆರಾಧ್ಯಾಳ ತಾಯಾಗಿ ನೀವು ನಿರ್ವಹಿಸಿದ ಪಾತ್ರ ಅದ್ಭುತವಾದದ್ದು. ಎರಡು ದಶಕಗಳ ಐಶ್ವರ್ಯ ರೈ ಬಚ್ಚನ್- ವಾಹ್" ಎಂದು ಬರೆದಿದ್ದರು. ಈ ಪತ್ರ ಈಗ ವೈರಲ್ ಆಗಿದೆ.

  ತಮಿಳು ಸಿನಿಮಾ ಮೂಲಕ ಐಶ್ವರ್ಯಾ ಎಂಟ್ರಿ

  ತಮಿಳು ಸಿನಿಮಾ ಮೂಲಕ ಐಶ್ವರ್ಯಾ ಎಂಟ್ರಿ

  ಅಂದಹಾಗೆ ಐಶ್ವರ್ಯಾ ರೈ ತಮಿಳು ಸಿನಿಮಾರಂಗದ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭಿಸಿದರು. ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದ ಐಶ್ವರ್ಯಾ ಅವರಿಗೆ ಸಿನಿಮಾರಂಗದ ಎಂಟ್ರಿ ಕಷ್ಟಕರವಾಗಿರಲಿಲ್ಲ. ಮಣಿರತ್ನಂ ನಿರ್ದೇಶನದ ತಮಿಳು ಸಿನಿಮಾ ಮೂಲಕ ಬಣ್ಣದ ಲೋಕದ ಜರ್ನಿ ಪ್ರಾರಂಭಿಸಿದರು. ಬಳಿಕ ಐಶ್ವರ್ಯಾ ಹಿಂದಿ ಸಿನಿಮಾರಂಗಕ್ಕೆ ಕಾಲಿಟ್ಟರು. ಅನೇಕ ಅದ್ಭುತ ಸಿನಿಮಾಗಳನ್ನು ನೀಡಿರುವ ಐಶ್ವರ್ಯಾ ಸಿನಿ ಅಭಿಮಾನಿಗಳ ನೆಚ್ಚಿನ ನಟಿಯರಲ್ಲಿ ಒಬ್ಬರಾಗಿದ್ದಾರೆ.

  ಪೊನ್ನಿಯನ್ ಸೆಲ್ವನ್ ನಲ್ಲಿ ಐಶ್ವರ್ಯಾ ನಟನೆ

  ಪೊನ್ನಿಯನ್ ಸೆಲ್ವನ್ ನಲ್ಲಿ ಐಶ್ವರ್ಯಾ ನಟನೆ

  ಮದುವೆ ಮತ್ತು ಮಗುವಿಗೆ ಜನ್ಮ ನೀಡಿದ ಬಳಿಕ ಬಣ್ಣದ ಲೋಕದಿಂದ ಕೊಂಚ ದೂರ ಸರಿದ ಐಶ್ ಸದ್ಯ ಮತ್ತೆ ತಮಿಳು ಸಿನಿಮಾರಂಗಕ್ಕೆ ಹಿಂದಿರುಗಿದ್ದಾರೆ. ಸದ್ಯ ಐಶ್ವರ್ಯಾ ಮಣಿ ರತ್ನಂ ನಿರ್ದೇಶನದ ಪೊನ್ನಿಯಮ್ ಸೆಲ್ವನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

  English summary
  Bollywood Actress Rekha wrote letter to Aishwarya Rai, with love and Rekha ma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X