For Quick Alerts
  ALLOW NOTIFICATIONS  
  For Daily Alerts

  ನಟಿ ರೇವತಿ ನಿರ್ದೇಶನದಲ್ಲಿ ಕಾಜೋಲ್ ನಟನೆ, ಯಾವುದು ಆ ಚಿತ್ರ?

  |

  ಚಿತ್ರರಂಗದಲ್ಲೊಂದು ಅಪರೂಪ ಚಿತ್ರ ತಯಾರಾಗುತ್ತಿದೆ. ಸಿನಿಮಾರಂಗ ಕಂಡ ಇಬ್ಬರು ಯಶಸ್ವಿ ನಟಿಯರು ಸೇರಿ ಹೊಸ ಸಿನಿಮಾವೊಂದನ್ನು ಶುರು ಮಾಡಿದ್ದು, ಬಹಳ ವಿಶೇಷವಾಗಿ ಗಮನ ಸೆಳೆಯುತ್ತಿದೆ.

  80-90ರ ದಶಕದ ಯಶಸ್ವಿ ನಟಿ ರೇವತಿ ಈಗ ನಿರ್ದೇಶಕಿಯಾಗಿ ಸದ್ದು ಮಾಡ್ತಿದ್ದಾರೆ. ಇದುವರೆಗೂ ಎರಡು ಫೀಚರ್ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ರೇವತಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ರೇವತಿ ನಿರ್ದೇಶನದ ಚಿತ್ರವೊಂದಕ್ಕೆ ರಾಷ್ಟ್ರ ಪ್ರಶಸ್ತಿ ಸಹ ಲಭಿಸಿದೆ.

  ಮತ್ತೆ ಶಾರುಖ್ ಖಾನ್ ಜೊತೆ ಕಾಜೋಲ್ ರೊಮ್ಯಾನ್ಸ್: ನಟಿ ಹೇಳಿದ್ದೇನು?ಮತ್ತೆ ಶಾರುಖ್ ಖಾನ್ ಜೊತೆ ಕಾಜೋಲ್ ರೊಮ್ಯಾನ್ಸ್: ನಟಿ ಹೇಳಿದ್ದೇನು?

  ಇದೀಗ, ಬಾಲಿವುಡ್ ನಟಿ ಕಾಜೋಲ್ ಜೊತೆ ಹೊಸ ಚಿತ್ರ ಆರಂಭಿಸಿದ್ದಾರೆ. ಹೌದು, ರೇವತಿ ನಿರ್ದೇಶಿಸಲಿರುವ ಸಿನಿಮಾದಲ್ಲಿ ಕಾಜೋಲ್ ನಾಯಕಿಯಾಗಿ ನಟಿಸುತ್ತಿದ್ದು, ಇದು ನೈಜ ಘಟನೆಗಳನ್ನು ಆಧರಿಸಿ ತಯಾರಾಗುತ್ತಿದೆ. ಈ ಮೂಲಕ ಇಬ್ಬರು ಯಶಸ್ವಿ ನಟಿಯರು ಸೇರಿ ಮಾಡುತ್ತಿರುವ ಸಿನಿಮಾ ಎನ್ನುವ ಕಾರಣಕ್ಕೆ ಹೆಚ್ಚು ಸುದ್ದಿಯಾಗಲಿದೆ.

  ರೇವತಿ ಮತ್ತು ಕಾಜೋಲ್ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಚಿತ್ರಕ್ಕೆ 'ದಿ ಲಾಸ್ಟ್ ಹರ್ರೆ' (The Last Hurrah) ಎಂದು ಹೆಸರಿಡಲಾಗಿದೆ.

  ಒಂದು ನೈಜ ಕಥೆ ಮತ್ತು ನೈಜ ಪಾತ್ರಗಳಿಂದ ಸ್ಫೂರ್ತಿ ಪಡೆದಿರುವ 'ದಿ ಲಾಸ್ಟ್ ಹರ್ರೆ', ಸುಜಾತ ಎನ್ನುವ ತಾಯಿಯೊಬ್ಬರು ತನ್ನ ಜೀವನದಲ್ಲಿ ಎದುರಿಸುವ ಅತ್ಯಂತ ಸವಾಲಿನ ಸನ್ನಿವೇಶಗಳನ್ನು ನಗು ಮುಖದೊಂದಿಗೆ ಹೇಗೆ ಹೋರಾಡುತ್ತಾಳೆ ಎನ್ನುವುದು ಕಥೆ. ಸದ್ಯಕ್ಕೆ ಈ ಚಿತ್ರ ಪ್ರಿ-ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲಿಯೇ ತೆರೆಗೆ ಬರಲಿದೆ.

  ಕಾಜೋಲ್ ಜೊತೆ ನಟಿಸಬೇಡ: ಆಮೀರ್ ಖಾನ್ ಗೆ ಶಾರುಖ್ ಹೀಗೆ ಹೇಳಿದ್ದೇಕೆ?ಕಾಜೋಲ್ ಜೊತೆ ನಟಿಸಬೇಡ: ಆಮೀರ್ ಖಾನ್ ಗೆ ಶಾರುಖ್ ಹೀಗೆ ಹೇಳಿದ್ದೇಕೆ?

  ಮೊದಲ ಸಲ ಕಾಜೋಲ್ ಜೊತೆ ಸಿನಿಮಾ ನಿರ್ದೇಶಿಸುತ್ತಿರುವ ರೇವತಿ ಈ ಕುರಿತು ಸಂತಸ ಹಂಚಿಕೊಂಡಿದ್ದಾರೆ. ''ದಿ ಲಾಸ್ಟ್ ಹರ್ರೆ ಕತೆಯಲ್ಲಿ ಬರುವ ಸುಜಾತಾರ ಪಯಣ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಇದೊಂದು ಸ್ಫೂರ್ತಿದಾಯಕ ಕಥೆ ಆಗಿದೆ. ಸೂರಾಜ್, ಶ್ರದ್ಧಾ ಮತ್ತು ನಾನು ಈ ಚಿತ್ರದ ಬಗ್ಗೆ ಚರ್ಚಿಸುತ್ತಿದ್ದಾಗ, ನಮ್ಮ ಮನಸ್ಸಿಗೆ ಬಂದ ಮೊದಲ ವ್ಯಕ್ತಿ ಕಾಜೋಲ್. ಸುಜಾತ ಪಾತ್ರಕ್ಕೆ ಸೂಕ್ತ ಎನಿಸುವ ಸ್ವಭಾವ ಕಾಜೋಲ್ ಅವರಲ್ಲಿದೆ. ಕಾಜೋಲ ಬಹಳ ಮೃದು ಸ್ವಭಾವ, ಅವರ ಕಣ್ಣಲ್ಲಿ ಒಂದು ಶಕ್ತಿ ಇದೆ. ಅವರ ನಗುವಿನಲ್ಲಿ ಸುಂದರತೆ ಇದೆ. ಇದೆಲ್ಲವೂ ಸುಜಾತರ ಪಾತ್ರಕ್ಕೆ ಬೇಕಾಗಿದೆ. ಇಂತಹ 'ಹೃದಯಸ್ಪರ್ಶಿ ಕಥೆ'ಯಲ್ಲಿ ಕಾಜೋಲ್ ಜೊತೆ ಕೆಲಸ ಮಾಡುತ್ತಿರುವುದಕ್ಕೆ ನಾನು ತುಂಬಾ ಉತ್ಸುಕನಾಗಿದ್ದೇನೆ'' ಎಂದರು.

  Revathy and Kajol Collabrate for New Film Titled The Last Hurrah

  ರೇವತಿ ಅವರ ಜೊತೆಗೆ ಈ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಮಾತನಾಡಿದ ಕಾಜೋಲ್, ''ನಾನು ದಿ ಲಾಸ್ಟ್ ಹರ್ರೆ' ಕಥೆಯನ್ನು ಕೇಳಿದಾಗ, ತಕ್ಷಣ ಸುಜಾತ ಪಾತ್ರದೊಂದಿಗೆ ನಾನು ಬೆರೆಯಲು ಸಾಧ್ಯವಾಯಿತು. ಅವಳ ಪ್ರಯಾಣ ನಂಬಲಾಗದಷ್ಟು ಸ್ಫೂರ್ತಿದಾಯಕವಾಗಿದೆ ಎಂದು ಭಾವಿಸಿತು. ಇದು ಸುಂದರ ಪ್ರಯಾಣ ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳಲು ಅರ್ಹವಾಗಿದೆ. ಇನ್ನು ಈ ಚಿತ್ರದಲ್ಲಿ ರೇವತಿ ಅವರು ನನಗೆ ನಿರ್ದೇಶನ ಮಾಡ್ತಿರುವುದರಿಂದ, ಸುಜಾತ ಪಾತ್ರ ನಿರ್ವಹಿಸಲು ಹಾಗೂ ತೆರೆಮೇಲೆ ಆ ಪಾತ್ರ ಪ್ರದರ್ಶಿಸಲು ನನಗೆ ಹೆಚ್ಚಿನ ಶಕ್ತಿ ಸಿಕ್ಕಂತಾಗಿದೆ'' ಎಂದರು.

  ಬ್ಲೈವ್ ಪ್ರೊಡಕ್ಷನ್ಸ್ ಮತ್ತು ಟೇಕ್ 23 ಸ್ಟುಡಿಯೋಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸೂರಾಜ್ ಸಿಂಗ್ ಮತ್ತು ಶ್ರದ್ಧಾ ಅಗರವಾಲ್ ಈ ಚಿತ್ರ ನಿರ್ಮಿಸಿದ್ದು, ಸಮೀರ್ ಅರೋರಾ ಸ್ಕ್ರಿಪ್ಟ್ ಬರೆದಿದ್ದಾರೆ.

  ರೇವತಿ ನಿರ್ದೇಶನದ ಚಿತ್ರಗಳು

  2002ರಲ್ಲಿ ರೇವತಿ ಮೊದಲ ಸಲ ಚಿತ್ರ ನಿರ್ದೇಶಿಸಿದರು. 'Mitr, My Friend' ಎನ್ನುವ ಹೆಸರಿನಲ್ಲಿ ಇಂಗ್ಲಿಷ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದರು. ನಟಿ ಶೋಭನಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. 49ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಇಂಗ್ಲಿಷ್ ಸಿನಿಮಾ, ಅತ್ಯುತ್ತಮ ನಟಿ ಹಾಗೂ ಅತ್ಯುತ್ತಮ ಸಂಕಲನ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. 2004ರಲ್ಲಿ ಶಿಲ್ಪಾ ಶೆಟ್ಟಿ ನಟನೆಯ 'ಫಿರ್ ಮಿಲೆಂಗೆ' ಚಿತ್ರ ನಿರ್ದೇಶಿಸಿದರು. 2009ರಲ್ಲಿ ಬಂದ 'ಕೇರಳ ಕೆಫೆ' ಎನ್ನುವ ಸಿನಿಮಾ ಬಂತು. ಈ ಚಿತ್ರಕ್ಕೆ ಹತ್ತು ನಿರ್ದೇಶಕರು ಕೆಲಸ ಮಾಡಿದ್ದರು. ಒಂದು ಭಾಗವನ್ನು ರೇವತಿ ನಿರ್ದೇಶಿಸಿದ್ದರು. 2010ರಲ್ಲಿ ಮುಂಬೈ ಕಟ್ಟಿಂಗ್ ಎನ್ನುವ ಚಿತ್ರ ಬಂತು. ಈ ಚಿತ್ರವನ್ನು ಹನ್ನೊಂದು ಜನ ನಿರ್ದೇಶಿಸಿದ್ದರು. ಒಂದು ಭಾಗವನ್ನು ರೇವತಿ ನಿರ್ದೇಶಿಸಿದ್ದರು.

  English summary
  Actress Revathy and Kajol Collabrate for New Film Titled The Last Hurrah. the movie Inspired by a true story.
  Thursday, October 7, 2021, 16:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X