For Quick Alerts
  ALLOW NOTIFICATIONS  
  For Daily Alerts

  'ಸುಶಾಂತ್ ಚಿಕಿತ್ಸೆಗಾಗಿ ನನ್ನನ್ನು ರಿಯಾ ಸಂಪರ್ಕಿಸಿದ್ದರು': ಅಧ್ಯಾತ್ಮ ಗುರು ಹೇಳಿದ್ದೇನು?

  |

  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಚಾರ ಹೊರಬಿದ್ದಿದೆ. ಸುಶಾಂತ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ಅಧ್ಯಾತ್ಮ ಗುರು ಮೋಹನ್ ಸದಾಶಿವ ಜೋಶಿ ಅವರು ವಿಚಾರ ಬೆಳಕಿಗೆ ಬಂದಿದೆ.

  Upendra ತೆಲುಗು, ತಮಿಳಿನಲ್ಲಿ ಹೆಚ್ಚಾಗಿ ಸಿನಿಮಾ ಮಾಡದಿರಲು ಇದೇ ಕಾರಣ

  ಸುಶಾಂತ್ ಸಿಂಗ್ ಅವರಿಗೆ ಚಿಕಿತ್ಸೆ ಕೊಡಿಸಲು ರಿಯಾ ಚಕ್ರವರ್ತಿ ಅಧ್ಯಾತ್ಮ ಗುರು ಮೋಹನ್ ಸದಾಶಿವ ಜೋಶಿ ಅವರನ್ನು ಭೇಟಿ ಮಾಡಿದ್ದರು ಎಂಬ ವಿಷಯ ವರದಿಯಾಗಿದೆ. 'ಸುಶಾಂತ್‌ಗೆ ಚಿಕಿತ್ಸೆ ನೀಡಿ ಎಂದು ನನ್ನನ್ನು ರಿಯಾ ಹಲವು ಬಾರಿ ಭೇಟಿ ಮಾಡಿದ್ದರು' ಎಂದು ಸ್ವತಃ ಸದಾಶಿವ ಜೋಶಿ ಹೇಳಿದ್ದಾರೆ. ಮುಂದೆ ಓದಿ...

  ಸುಶಾಂತ್‌ಗೆ ಖಿನ್ನತೆ ಇತ್ತು!

  ಸುಶಾಂತ್‌ಗೆ ಖಿನ್ನತೆ ಇತ್ತು!

  'ಸುಶಾಂತ್ ಸಿಂಗ್ ರಜಪೂತ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಹಾಗಾಗಿ, ನಾನು ಅವರಿಗೆ ಚಿಕಿತ್ಸೆ ನೀಡಿದ್ದೇನೆ. ಖುದ್ದು ರಿಯಾ ಚಕ್ರವರ್ತಿ ನನ್ನನ್ನು ಸಂಪರ್ಕಿಸಿ ಸುಶಾಂತ್ ಬಗ್ಗೆ ಹೇಳಿದ್ದರು. ಬಳಿಕ, ನಾನು ಚಿಕಿತ್ಸೆ ಆರಂಭಿಸಿದ್ದೆ. ಶೇಕಡಾ 90 ರಷ್ಟು ಅವರು ಚೇತರಿಸಿಕೊಂಡಿದ್ದರು' ಎಂದು ಅಧ್ಯಾತ್ಮ ಗುರು ಮೋಹನ್ ಸದಾಶಿವ ಜೋಶಿ ತಿಳಿಸಿದ್ದಾರೆ.

  ಸುಶಾಂತ್ ಸಿಂಗ್ ಮಾಜಿ ನೌಕರಿಗೆ ಸಹೋದರಿ ಬೆದರಿಕೆ: ವಿಡಿಯೋ ವೈರಲ್

  ಸುಶಾಂತ್ ಭೇಟಿ ಮಾಡಿದ್ದರು

  ಸುಶಾಂತ್ ಭೇಟಿ ಮಾಡಿದ್ದರು

  ಸುಶಾಂತ್ ಸಿಂಗ್ ನನ್ನನ್ನು ಎರಡು ಸಲ ಭೇಟಿ ಮಾಡಿದ್ದರು. ತಾನು ಎದುರಿಸುತ್ತಿದ್ದ ಸಮಸ್ಯೆಗಳನ್ನು ನನ್ನ ಬಳಿ ಹೇಳಿಕೊಂಡಿದ್ದರು ಎಂಬ ವಿಚಾರವನ್ನು ಅಧ್ಯಾತ್ಮ ಗುರು ಬಹಿರಂಗಪಡಿಸಿದ್ದಾರೆ. ಸುಶಾಂತ್ ಕುರಿತು ರಿಯಾ ಚಕ್ರವರ್ತಿ ಬಿಟ್ಟರೆ ಬೇರೆ ಯಾರೂ ನನ್ನ ಬಳಿ ಚರ್ಚಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.

  ಪೊಲೀಸ್ ವಿಚಾರಣೆಗೆ ಆಹ್ವಾನಿಸಿದ್ದರು

  ಪೊಲೀಸ್ ವಿಚಾರಣೆಗೆ ಆಹ್ವಾನಿಸಿದ್ದರು

  ಸುಶಾಂತ್ ಸಾವಿನ ತನಿಖೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ನನಗೆ ಸಮನ್ಸ್ ನೀಡಿದ್ದರು. ಅವರ ಆರೋಗ್ಯ ಸ್ಥಿತಿ ಮತ್ತು ಪರಿಚಯ ಬಗ್ಗೆ ಮಾಹಿತಿ ಪಡೆಯಲು ಠಾಣೆಗೆ ಬರುವಂತೆ ಸೂಚಿಸಿದ್ದರು. ಆದರೆ, ಅನಾರೋಗ್ಯ ಕಾರಣ ನಾನು ಹೋಗಿರಲಿಲ್ಲ ಎಂದು ಹೇಳಿದ್ದಾರೆ.

  ಸುಶಾಂತ್ ಸಿಂಗ್ ಕೇಸ್: ಸುಪ್ರೀಂಕೋರ್ಟ್‌ನಲ್ಲಿ ಮತ್ತೊಂದು ಅರ್ಜಿ ಸಲ್ಲಿಕೆ

  ಆತ್ಮಹತ್ಯೆಯ ಹಿಂದೆ ನಿಗೂಢ!

  ಆತ್ಮಹತ್ಯೆಯ ಹಿಂದೆ ನಿಗೂಢ!

  ಜೂನ್ 14ರ ರಾತ್ರಿ ಸುಶಾಂತ್ ಸಿಂಗ್ ರಜಪೂತ್ ಮುಂಬೈನ ಬಾಂದ್ರಾದ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಸ್ ದಾಖಲಾಗಿದೆ. ಆದರೆ, ಸಾವಿನ ಸುತ್ತ ಅನುಮಾನ ಹೆಚ್ಚಿದ್ದು, ಗಂಭೀರ ಪ್ರಕರಣ ಎಂದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ಸುಶಾಂತ್ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಒತ್ತಾಯ ಹೆಚ್ಚಿದೆ.

  English summary
  Spiritual healer Mohan Sadashiv Joshi revealed that Rhea chakraborty approached for Sushant Singh Rajput's depression treatment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X