For Quick Alerts
  ALLOW NOTIFICATIONS  
  For Daily Alerts

  'ಪ್ಲೀಸ್ ನನ್ನ ಹಿಂಬಾಲಿಸಬೇಡಿ': ಜೈಲಿನಿಂದ ಬಂದ ನಂತರ ಹೊರಗೆ ಕಾಣಿಸಿಕೊಂಡ ರಿಯಾ

  |

  ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ಬಾಲಿವುಡ್ ನಟಿ ರಿಯಾ ಚಕ್ರವರ್ತಿಗೆ ಅಕ್ಟೋಬರ್ ಮೊದಲ ವಾರ ಜಾಮೀನು ಸಿಕ್ಕಿತ್ತು. ಬೈಕುಲ್ಲಾ ಜೈಲಿನಲ್ಲಿ ಸುಮಾರು ಒಂದು ತಿಂಗಳ ಕಾಲವಿದ್ದ ರಿಯಾ ಚಕ್ರವರ್ತಿಗೆ ಬಾಂಬೆ ಹೈ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.

  ಜೈಲಿನಿಂದ ಮನೆಗೆ ಬಂದಿದ್ದ ರಿಯಾ ಚಕ್ರವರ್ತಿ ಇದುವರೆಗೂ ಎಲ್ಲಿಗೂ ಹೊರಗೆ ಕಾಣಿಸಿಕೊಂಡಿರಲಿಲ್ಲ. ಮನೆಯಿಂದ ಹೊರಗೆ ಬಂದ ಬಗ್ಗೆ ಯಾವುದೇ ಸುದ್ದಿ ಹಾಗೂ ಫೋಟೋಗಳು ವರದಿಯಾಗಿರಲಿಲ್ಲ. ಸುಮಾರು ಬಹಳ ದಿನಗಳ ನಂತರ ರಿಯಾ ಚಕ್ರವರ್ತಿ ಕ್ಯಾಮೆರಾಗಳ ಕಣ್ಣಿಗೆ ಬಿದ್ದರು.

  ನಟಿ ರಿಯಾ ಚಕ್ರವರ್ತಿಗೆ ಜಾಮೀನು ನೀಡಿದ ಬಾಂಬೆ ಹೈ ಕೋರ್ಟ್

  ಇಂದು ಮುಂಬೈನ ಬಾಂದ್ರಾದಲ್ಲಿರುವ ನಿವಾಸದಿಂದ ರಿಯಾ ಚಕ್ರವರ್ತಿ ಮತ್ತು ಸಹೋದರ ಶೌವಿಕ್ ಚಕ್ರವರ್ತಿ ಇಬ್ಬರು ಒಟ್ಟಿಗೆ ಹೊರಗೆ ಹೋದರು. ಈ ವೇಳೆ ಕ್ಯಾಮೆರಾಗಳು ಪೈಪೋಟಿಗೆ ಬಿದ್ದು ಫೋಟೋ ಹಾಗೂ ವಿಡಿಯೋ ರೆಕಾರ್ಡ್ ಮಾಡಿವೆ.

  ಕ್ಯಾಮೆರಾಗೆ ಪ್ರತಿಕ್ರಿಯಿಸಿದ ರಿಯಾ ಚಕ್ರವರ್ತಿ ''ಪ್ಲೀಸ್ ನನ್ನನ್ನು ಹಿಂಬಾಲಿಸಬೇಡಿ'' ಎಂದು ಹೇಳಿ ಹೋಗಿದ್ದಾರೆ.

  ಸುಶಾಂತ್ ಸಿಂಗ್ ಸಾವಿನ ಬಳಿಕ ರಿಯಾ ಚಕ್ರವರ್ತಿ ವಿರುದ್ಧ ಬಹಳಷ್ಟು ಗಂಭೀರ ಆರೋಪಗಳು ಕೇಳಿ ಬಂತು. ಸುಶಾಂತ್‌ಗೆ ಮಾನಸಿಕವಾಗಿ ಹಿಂಸೆ ನೀಡಿದ, ಡ್ರಗ್ಸ್ ನೀಡಿದ ಆರೋಪ, ಸಾವಿಗೆ ಪರೋಕ್ಷ ಕಾರಣ ಎಂದು ಸುಶಾಂತ್ ಮನೆಯವರು ದೂರು ನೀಡಿದ್ದರು. ಡ್ರಗ್ಸ್ ಆಯಾಮದಲ್ಲಿ ತನಿಖೆ ನಡೆಸಿದ ಎನ್‌ಸಿಬಿ ಅಧಿಕಾರಿಗಳು ಬಾಲಿವುಡ್ ಸ್ಟಾರ್‌ಗಳನ್ನು ಜಾಲಾಡಿದರು.

  2021ಕ್ಕೆ ಬಾಲಿವುಡ್‌ಗೆ ಕಂಬ್ಯಾಕ್ ಮಾಡಲಿದ್ದಾರೆ ರಿಯಾ ಚಕ್ರವರ್ತಿ

  ಈ ನಡುವೆ ರಿಯಾ ಚಕ್ರವರ್ತಿ ಮತ್ತು ಶೌವಿಕ್ ಇಬ್ಬರನ್ನು ಡ್ರಗ್ಸ್ ಪೆಡ್ಲರ್‌ಗಳ ಜೊತೆ ಸಂಪರ್ಕ ಹೊಂದಿದ್ದರು ಎಂಬ ಕಾರಣದಿಂದ ಬಂಧಿಸಿದ್ದರು. ಬಳಿಕ ಇಬ್ಬರು ಜಾಮೀನು ಪಡೆದು ಹೊರ ಬಂದಿದ್ದರು.

  English summary
  Bollywood actress Rhea Chakraborty and her brother Showik Chakraborty snapped at Bandra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X