Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸುಶಾಂತ್‌ನದ್ದು ಸಾವಿನ ಬಗ್ಗೆ ಮತ್ತೆ ಅನುಮಾನ: ಆರೋಪಿ ಮಾಜಿ ಪ್ರೇಯಸಿಯ ಸಂದೇಶ
ನಟ ಸುಶಾಂತ್ ಸಿಂಗ್ ರಜಪೂತ್ ನಿಧನ ಹೊಂದಿ ಎರಡು ವರ್ಷಕ್ಕೂ ಹೆಚ್ಚು ಸಮಯವಾಗಿದ್ದು, ಇಂದಿಗೂ ಅವರ ಸಾವು ರಹಸ್ಯವಾಗಿಯೇ ಉಳಿದಿದೆ.
ಇದೀಗ, ಸುಶಾಂತ್‌ರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದ ಕೂಪರ್ ಆಸ್ಪತ್ರೆಯ ಮಾಜಿ ನೌಕರನೊಬ್ಬ, ಸುಶಾಂತ್ ಸಿಂಗ್‌ರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದಿದ್ದು. ಸುಶಾಂತ್‌ರ ಸಾವಿನ ಬಗ್ಗೆ ಇದ್ದ ಅನುಮಾನಗಳು ಇನ್ನಷ್ಟು ಹೆಚ್ಚಾಗಲು ಕಾರಣವಾಗಿವೆ.
''ಸುಶಾಂತ್ ಸಿಂಗ್ ಮರಣೋತ್ತರ ಪರೀಕ್ಷೆ ನಡೆದಾಗ ನಾನು ಅಲ್ಲಿಯೇ ಇದ್ದೆ. ಆತನ ಮೈಮೇಲಿ, ವಿಶೇಷವಾಗಿ ಕತ್ತಿನ ಬಳಿ ಗಾಯಗಳಿದ್ದವು. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ನಾನು ಹೇಳಿದ್ದೆ. ಆದರೆ ನನ್ನ ಮಾತನ್ನು ಯಾರೂ ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಮರಣೋತ್ತರ ಪರೀಕ್ಷೆಯ ವಿಡಿಯೋ ಚಿತ್ರೀಕರಣವನ್ನೂ ಮಾಡಲಿಲ್ಲ. ಕೇವಲ ಚಿತ್ರಗಳನ್ನಷ್ಟೆ ತೆಗೆದುಕೊಳ್ಳಲು ಹೇಳಿದರು'' ಎಂದಿದ್ದಾನೆ.
ಕೂಪರ್ ಆಸ್ಪತ್ರೆಯ ಮಾಜಿ ನೌಕರನ ಹೇಳಿಕೆ ಇದೀಗ ಪ್ರಕರಣದ ಬಗ್ಗೆ ಇನ್ನಷ್ಟು ಅನುಮಾನಗಳನ್ನು ಹುಟ್ಟುಹಾಕಿದ್ದು, ಸುಶಾಂತ್ ಪ್ರಕರಣದಲ್ಲಿ ಆರೋಪಿಯಾಗಿರುವ ಸುಶಾಂತ್‌ರ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ ಮತ್ತೆ ಟೀಕೆ, ಆರೋಪಗಳನ್ನು ಪ್ರಾರಂಭವಾಗಿವೆ.
ಇದೇ ಸಮಯದಲ್ಲಿ ರಿಯಾ ಚಕ್ರವರ್ತಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಸಂದೇಶದ ಮೂಲಕ ಮುಂದೆ ಏನೇ ಬರಲಿ ನಾನು ಹೆದರುವುದಿಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.
ರಿಯಾ ಹಂಚಿಕೊಂಡಿರುವ ಸಂದೇಶದ ಸಾರಾಂಶ ಇಂತಿದೆ. ''ನೀನು ಬೆಂಕಿಯ ಹಾದಿಯಲ್ಲಿ ನಡೆದಿದ್ದೀಯ. ಪ್ರವಾಹಗಳಲ್ಲಿ ಈಜಿ ಬದುಕಿ ಬಂದಿದ್ದೀಯ. ರಾಕ್ಷಸರ ವಿರುದ್ಧ ಗೆದ್ದು ಬಂದಿದ್ದೀಯ, ನಿನ್ನ ಶಕ್ತಿಯ ಬಗ್ಗೆ ನಿನಗೆ ಅನುಮಾನ ಬಂದಾಗಲೆಲ್ಲ ಇದನ್ನು ನೆನಪಿಸಿಕೋ'' ಎಂಬ ಸಾಲುಗಳನ್ನು ರಿಯಾ ಚಕ್ರವರ್ತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಜೂನ್ 14, 2020 ರಂದು ಸುಶಾಂತ್‌ರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮುಂಬೈನ ಮನೆಯಲ್ಲಿ ಪತ್ತೆಯಾಗಿತ್ತು. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು, ಅಂತೆಯೇ ಆರಂಭದಲ್ಲಿ ತನಿಖೆ ನಡೆಸಿದ್ದ ಮುಂಬೈ ಪೊಲೀಸರು ಇದೊಂದು ಆತ್ಮಹತ್ಯೆ ಎಂದಿದ್ದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಸುಶಾಂತ್‌ರದ್ದು ಆತ್ಮಹತ್ಯೆಯಲ್ಲ ಕೊಲೆ ಎಂಬ ಮಾತುಗಳು ಕೇಳಿಬಂದವು. ಸುಶಾಂತ್‌ರ ಸಾವಿನ ಪ್ರಕರಣದ ತನಿಖೆಯಿಂದ ಬಾಲಿವುಡ್‌ನ ಡ್ರಗ್ಸ್ ಪ್ರಕರಣವೂ ಹೊರಬಿತ್ತು. ಇದೀಗ ಸುಶಾಂತ್‌ರ ಸಾವಿನ ತನಿಖೆಯನ್ನು ಸಿಬಿಐ ಮಾಡುತ್ತಿದೆ.