For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಎಫೆಕ್ಟ್: ಬಾಲಿವುಡ್ ಖ್ಯಾತ ನಟಿಯ ಮದುವೆ ಮುಂದೂಡಿಕೆ

  |

  ಕೊರೊನಾ ವೈರಸ್ ಹಾವಳಿಯಿಂದ ಮದುವೆ ಸಮಾರಂಭಗಳಿಗೂ ಬ್ರೇಕ್ ಬಿದ್ದಿದೆ. ಈಗಾಗಲೆ ಸಾಕಷ್ಟು ಜನ ಮದುವೆ ಕಾರ್ಯಕ್ರಮಗಳನ್ನು ಮುಂದೂಡುತ್ತಿದ್ದಾರೆ. ಬಾಲಿವುಡ್ ನಟಿ ರಿಚಾ ಚಡ್ಡಾ ಮದುವೆ ಕೂಡ ಮುಂದಕ್ಕೆ ಹೋಗಿದೆ. ರಿಚಾ ಚಡ್ಡಾ ತನ್ನ ಬಾಯ್ ಫ್ರೆಂಡ್ ಅಲಿ ಫಜಲ್ ಜೊತೆ ಏಪ್ರಿಲ್ ನಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದರು.

  Yash spoke about Challenging Star Darshan's Robert Cinema

  ಆದರೀಗ ಕೊರೊನಾ ವೈರಸ್ ಪರಿಣಾಮ ಮದುವೆ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದ್ದಾರೆ. ಈ ಬಗ್ಗೆ ರಿಚಾ ಮ್ಯಾನೆಜರ್ ಮಾಹಿತಿ ನೀಡಿದ್ದಾರೆ. "ಕೊರೊನಾ ಸಾಂಕ್ರಾಮಿಕ ರೋಗದಿಂದ, ಪ್ರಸ್ತುತ ಸನ್ನಿವೇಶ ಮತ್ತು ದುರದೃಷ್ಟಕರ ಘಟನೆಗಳ ಹಿನ್ನಲೆಯಲ್ಲಿ ರಿಚಾ ಮತ್ತು ಅಲಿ ಫಜಲ್ ಮದುವೆಯನ್ನು ಮುಂದೂಡಲಾಗಿದೆ" ಎಂದು ಹೇಳಿದ್ದಾರೆ.

  ಬಾಯ್ ಫ್ರೆಂಡ್ ಜೊತೆ ಮದುವೆಗೆ ಸಜ್ಜಾದ ಬಾಲಿವುಡ್ ನಟಿಬಾಯ್ ಫ್ರೆಂಡ್ ಜೊತೆ ಮದುವೆಗೆ ಸಜ್ಜಾದ ಬಾಲಿವುಡ್ ನಟಿ

  ರಿಚಾ ಮತ್ತು ಅಲಿ ಇಬ್ಬರು ಕಳೆದ ಐದು ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ. ಇಬ್ಬರು ಸಿನಿಮಾ ಶೂಟಿಂಗ್ ವೇಳೆ ಪರಿಚಿಯವಾಗಿ ನಂತರ ಪ್ರೀತಿಯಲ್ಲಿ ಬಿದ್ದರು ಎನ್ನಲಾಗಿದೆ. 'ಫಕ್ರಿ' ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರು. ಆ ಸಮಯದಲ್ಲಿ ಇಬ್ಬರು ಸ್ನೇಹಿತರಾಗಿದ್ದಾರೆ. ನಂತರ ಅದೇ ಸ್ನೇಹ ಪ್ರೀತಿಗೆ ತಿರುಗಿ ಈಗ ಮದುವೆ ಆಗಲು ನಿರ್ಧರಿಸಿದ್ದಾರೆ.

  ಫೆಬ್ರವರಿಯಲ್ಲಿ ಇಬ್ಬರು ಮುಂಬೈನಲ್ಲಿ ಮದುವೆ ರಿಜಿಸ್ಟ್ರೇಶನ್ ಗೆ ಅರ್ಜಿಸಲ್ಲಿಸಿದ್ದಾರೆ. ರಿಚಾ ಸದ್ಯ ಇತ್ತೀಚಿಗೆ ಪಂಗಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಕನ್ನಡದಲ್ಲಿ ಶಕೀಲಾ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಟ ಅಲಿ ಫಜಲ್ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಏಪ್ರಿಲ್ ನಲ್ಲಿ ನಡೆಯಬೇಕಿದ್ದ ಮದುವೆ ಕ್ಯಾನ್ಸಲ್ ಮಾಡಿಕೊಂಡಿರುವ ಜೋಡಿ ಹೊಸ ಮದುವೆ ದಿನಾಂಕವನ್ನು ಸಧ್ಯದಲ್ಲೇ ಬಹಿರಂಗ ಪಡಿಸುವ ಸಾಧ್ಯತೆ ಇದೆ.

  English summary
  Corona Effect: Bollywood Actress Richa Chadha and Ali Fazal marriage postponed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X