For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ನಟಿಯ ವಾಟ್ಸಾಪ್ ಬ್ಲಾಕ್ ಮಾಡಿದ ರಿಷಬ್ ಪಂತ್: ಅಷ್ಟಕ್ಕೂ ಆ ನಟಿ ಮಾಡಿದ್ದೇನು?

  |
  ರಿಷಬ್ ವಾಟ್ಸಾಪ್ ಬ್ಲಾಕ್ ಮಾಡಿದ ಸ್ಟಾರ್ ನಟಿ ಯಾರು? | RISHAB PANT | URVASHI RAUTELA | FILMIBEAT KANNADA

  ಭಾರತದ ಯುವ ಕ್ರಿಕೆಟಿಗ ರಿಷಬ್ ಪಂತ್ ಶ್ರೀಲಂಕಾ ಸರಣಿ ಮುಗಿಸಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಟೂರ್ನಿಗೆ ಸಜ್ಜಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಿಷಬ್ ಪಂತ್ ಕ್ರಿಕೆಟ್ ಆಟಕ್ಕಿಂತ ಖಾಸಗಿ ವಿಚಾರದಲ್ಲಿ ಹೆಚ್ಚು ಸುದ್ದಿಯಾಗುತ್ತಿದ್ದಾರೆ.

  ಬಾಲಿವುಡ್ ನಟಿಯೊಬ್ಬರ ಜೊತೆ ಸ್ನೇಹ ಹೊಂದಿದ್ದ ರಿಷಬ್, ಕ್ರಿಕೆಟ್ ಪಂದ್ಯದ ನಡುವೆಯೂ ಮುಂಬೈನ ಪ್ರತಿಷ್ಠಿತ ಹೋಟೆಲ್ ವೊಂದರಲ್ಲಿ ಆ ನಟಿ ಜೊತೆ ಡಿನ್ನರ್ ಪಾರ್ಟಿ ಮಾಡಿದ್ದರಂತೆ. ಆದ್ರೀಗ, ಆ ನಟಿಯ ವಾಟ್ಸಾಪ್ ಬ್ಲಾಕ್ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

  ಐರಾವತ ನಟಿಯ ಬೇಡಿಕೆ ತಿರಸ್ಕರಿಸಿದ್ರಾ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ.?ಐರಾವತ ನಟಿಯ ಬೇಡಿಕೆ ತಿರಸ್ಕರಿಸಿದ್ರಾ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ.?

  ಅಷ್ಟಕ್ಕೂ, ಆ ನಟಿ ಯಾರು? ವಾಟ್ಸಾಪ್ ಬ್ಲಾಕ್ ಮಾಡುವಂತಹ ಕೆಲಸ ಆ ನಟಿ ಮಾಡಿದ್ದೇನು? ಎಂಬುದು ಕುತೂಹಲ ಮೂಡಿಸಿದೆ. ಅದಕ್ಕೆ ಕಾರಣ ಏನು ಎಂಬುದು ಇಲ್ಲಿದೆ ಓದಿ...

  ಊರ್ವಶಿ ನಂಬರ್ ಬ್ಲಾಕ್!

  ಊರ್ವಶಿ ನಂಬರ್ ಬ್ಲಾಕ್!

  ಕನ್ನಡದಲ್ಲಿ ನಟ ದರ್ಶನ್ ಜೊತೆ ಐರಾವತ ಸಿನಿಮಾ ಮಾಡಿದ್ದ ಊರ್ವಶಿ ರೌಟೇಲ, ನಂತರ ಬಾಲಿವುಡ್ನಲ್ಲೇ ಯಶಸ್ಸು ಕಂಡರು. ಈ ಮೊದಲು ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಜೊತೆ ಊರ್ವಶಿ ಹೆಸರು ತಳುಕು ಹಾಕಿಕೊಂಡಿತ್ತು. ಇದೀಗ, ರಿಷಬ್ ಪಂತ್ ಜೊತೆ ರೌಟೇಲ ಹೆಸರು ಸದ್ದು ಮಾಡುತ್ತಿದೆ. ಇತ್ತೀಚಿಗಷ್ಟೆ ಇಬ್ಬರು ಡಿನ್ನರ್ ಪಾರ್ಟಿಗೆ ಹೋಗಿದ್ದರು. ಈಗ ಊರ್ವಶಿ ವಾಟ್ಸಾಪ್ ನಂಬರ್ ಬ್ಲಾಕ್ ಮಾಡಿದ್ದಾರಂತೆ ರಿಷಬ್ ಪಂತ್.

  ರಿಷಬ್ ನಂಬರ್ ಕೂಡ ಬ್ಲಾಕ್!

  ರಿಷಬ್ ನಂಬರ್ ಕೂಡ ಬ್ಲಾಕ್!

  ಊರ್ವಶಿ ನಂಬರ್ ರಿಷಬ್ ಬ್ಲಾಕ್ ಮಾಡಿದ್ರೆ, ಆ ಕಡೆ ರಿಷಬ್ ಪಂತ್ ನಂಬರ್ನ್ನು ಊರ್ವಶಿ ಬ್ಲಾಕ್ ಮಾಡಿದ್ದಾರಂತೆ. ಏನಿದು ಪರಸ್ಪರ ಇಬ್ಬರು ತಮ್ಮ ವಾಟ್ಸಾಪ್ ನಂಬರ್ ಬ್ಲಾಕ್ ಮಾಡಿಕೊಂಡಿದ್ದಾರೆ ಎಂದು ಕುತೂಹಲ ಮೂಡಿಸಿದೆ. ಊರ್ವಶಿ ಅವರ ವಕ್ತಾರ ಈ ಬಗ್ಗೆ ಬಾಲಿವುಡ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ''ಪರಸ್ಪರ ಇಬ್ಬರು ವಾಟ್ಸಾಪ್ ನಂಬರ್ ಬ್ಲಾಕ್ ಮಾಡಿದ್ದಾರೆ'' ಎಂದಷ್ಟೇ ಹೇಳಿದ್ದಾರೆ ಎಂದು ವರದಿಯಾಗಿದೆ.

  ಕ್ರಿಕೆಟಿಗ ರಿಷಬ್ ಪಂತ್ ಜೊತೆ 'ಐರಾವತ' ನಾಯಕಿ ಡಿನ್ನರ್ ಪಾರ್ಟಿ!ಕ್ರಿಕೆಟಿಗ ರಿಷಬ್ ಪಂತ್ ಜೊತೆ 'ಐರಾವತ' ನಾಯಕಿ ಡಿನ್ನರ್ ಪಾರ್ಟಿ!

  ಗರ್ಲ್ ಫ್ರೆಂಡ್ ಪರಿಚಯಿಸಿದ್ದ ರಿಷಬ್

  ಗರ್ಲ್ ಫ್ರೆಂಡ್ ಪರಿಚಯಿಸಿದ್ದ ರಿಷಬ್

  ಊರ್ವಶಿ ಮತ್ತು ರಿಷಬ್ ಇಬ್ಬರು ಒಟ್ಟಿಗೆ ಡಿನ್ನರ್ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದು ನೋಡಿ, ಬಹುಶಃ ಇಬ್ಬರು ಡೇಟ್ ಮಾಡ್ತಿರಬಹುದು ಎಂದು ಊಹಿಸಲಾಗಿತ್ತು. ಇರಬಹುದು ಎಂದು ನಂಬುವಷ್ಟರಲ್ಲಿ ರಿಷಬ್ ಪಂತ್ ಸ್ವತಃ ತಮ್ಮ ಗರ್ಲ್ ಫ್ರೆಂಡ್ ಪರಿಚಯ ಮಾಡಿದ್ದರು.

  ಪ್ರೀತಿ ಖಚಿತ ಪಡಿಸಿದ್ದ ಜೋಡಿ

  ಪ್ರೀತಿ ಖಚಿತ ಪಡಿಸಿದ್ದ ಜೋಡಿ

  ರಿಷಬ್ ಪಂತ್ ಮತ್ತು ಇಶಾ ನೇಗಿ ಇಬ್ಬರು ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋ ಶೇರ್ ಮಾಡಿದ್ದರು. ''ನನ್ನ ಹುಡುಗ'' ಎಂದು ಇಶಾ ನೇಗಿ ಸ್ಟೇಟಸ್ ಹಾಕಿದ್ದರು. ರಿಷಬ್ ಪಂತ್ ಕೂಡ ''ನನ್ನ ಖುಷಿಯ ಹಿಂದೆ ಇರುವುದು ಈಕೆಯೇ'' ಎಂದು ಹೇಳಿಕೊಂಡಿದ್ದರು.

  ಊರ್ವಶಿ ವಾಟ್ಸಾಪ್ ಬ್ಲಾಕ್ ಮಾಡಲು ಕಾರಣವೇನು?

  ಊರ್ವಶಿ ವಾಟ್ಸಾಪ್ ಬ್ಲಾಕ್ ಮಾಡಲು ಕಾರಣವೇನು?

  ಅಧಿಕೃತವಾಗಿ ತಮ್ಮ ಗೆಳತಿಯನ್ನು ಪರಿಚಯ ಮಾಡಿರುವ ರಿಷಬ್ ಪಂತ್, ತಮ್ಮ ಹಿಂದಿನ ಸಂಬಂಧಗಳು, ವದಂತಿಗಳಿಂದ ದೂರವಿರಲು ನಿರ್ಧರಿಸಿದ್ದಾರೆ. ಆ ಕಾರಣದಿಂದಲೇ ಊರ್ವಶಿ ಜೊತೆಗಿನ ಸ್ನೇಹವನ್ನು ಮುರಿದುಕೊಂಡಿದ್ದಾರೆ ಎನ್ನಲಾಗುತ್ತಿದೆ.

  ಊರ್ವಶಿ ಲವ್ಸ್ ಕ್ರಿಕೆಟರ್ಸ್?

  ಊರ್ವಶಿ ಲವ್ಸ್ ಕ್ರಿಕೆಟರ್ಸ್?

  ಊರ್ವಶಿ ರೌಟೇಲಾಗೆ ಕ್ರಿಕೆಟರ್ಸ್ ಅಂದ್ರೆ ಒಂಥರಾ ಇಷ್ಟ. ಈ ಹಿಂದೆ ಹಾರ್ದಿಕ್ ಪಾಂಡ್ಯ ಜೊತೆ ಗಾಸಿಪ್ ಹರಿದಾಡಿತ್ತು. ರಿಷಬ್ ಪಂತ್ ಜೊತೆಯೂ ಊರ್ವಶಿ ಹೆಸರು ಕೇಳಿಬಂದಿತ್ತು. ಮುಂದೆ ಮತ್ಯಾವ ಕ್ರಿಕೆಟರ್ ಜೊತೆ ಐರಾವತ ನಾಯಕಿಯ ಹೆಸರು ಸದ್ದು ಮಾಡುತ್ತೋ?

  English summary
  Indian Cricket player Rishab pant blocked bollywood actress Urvashi Rautela on whatsapp.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X