For Quick Alerts
  ALLOW NOTIFICATIONS  
  For Daily Alerts

  ಸಂಜಯ್ ದತ್ ಮೇಲೆ ರಿಶಿ ಕಪೂರ್ ಉಗ್ರಾವತಾರ: ರಣ್ಬೀರ್ ಅದಕ್ಕೆ ಕಾರಣ.!

  By Harshitha
  |

  'ಖಳನಾಯಕ್' ಸಂಜಯ್ ದತ್ ಜೀವನಾಧಾರಿತ ಸಿನಿಮಾ 'ಸಂಜು' ಇನ್ನೇನು ಬಿಡುಗಡೆ ಆಗಲಿದೆ. 'ಸಂಜು' ಸಿನಿಮಾದಲ್ಲಿ ಸಂಜಯ್ ದತ್ ಆಗಿ ರಣ್ಬೀರ್ ಕಪೂರ್ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಕೆಲವೊಂದು ಸೀನ್ ಗಳಲ್ಲಿ ರಣ್ಬೀರ್ ಥೇಟ್ ಸಂಜಯ್ ದತ್ ರಂತೆಯೇ ಕಾಣ್ತಾರೆ. ಇದಕ್ಕೆ 'ಮೇಕಪ್ ಮ್ಯಾಜಿಕ್' ಅಂತ ಕೆಲವರು ಉದ್ಗಾರ ಮಾಡಬಹುದು. ಆದ್ರೆ, ಸಂಜಯ್ ದತ್ ಹಾಗೂ ರಣ್ಬೀರ್ ಕಪೂರ್ ಅಷ್ಟೊಂದು ಆತ್ಮೀಯವಾಗಿ ಇರುವ ಕಾರಣಕ್ಕೆ ಬಾಡಿ ಲಾಂಗ್ವೇಜ್, ಮ್ಯಾನರಿಸಂ, ಲುಕ್... ಎಲ್ಲವೂ ಪರ್ಫೆಕ್ಟ್ ಆಗಿ ಮ್ಯಾಚ್ ಆಗಿರುವುದು.

  ಅಷ್ಟಕ್ಕೂ, ಸಂಜಯ್ ದತ್ ಹಾಗೂ ರಣ್ಬೀರ್ ಕ್ಲೋಸ್ ಫ್ರೆಂಡ್ಸ್ ಆಗಿರುವುದರಿಂದಲೇ ನಿರ್ದೇಶಕ ರಾಜಕುಮಾರ್ ಹಿರಾನಿ 'ಸಂಜು' ಪಾತ್ರಕ್ಕೆ ರಣ್ಬೀರ್ ರನ್ನ ಆಯ್ಕೆ ಮಾಡಿದ್ದು.

  ಇವೆಲ್ಲ ಬಿಡಿ... ಸಂಜಯ್ ದತ್ ಹಾಗೂ ರಣ್ಬೀರ್ ಕಪೂರ್ ನಡುವಿನ ಸ್ನೇಹ ಸಂಬಂಧ ಒಮ್ಮೆ ತಂದೆ ರಿಶಿ ಕಪೂರ್ ಕೆಂಗಣ್ಣಿಗೆ ಗುರಿಯಾಗಿತ್ತು ಅನ್ನೋದು ನಿಮಗೆ ಗೊತ್ತಾ. ''ನನ್ನ ಮಗನನ್ನ ನಿನ್ನ ಹಾಗೆ ಮಾಡಬೇಡ'' ಎಂದು ಸಂಜಯ್ ದತ್ ಗೆ ರಿಶಿ ಕಪೂರ್ ಒಂದು ಸಾರಿ ಬೈದಿದ್ರಂತೆ.! ಅರೇ... ಅಂಥದ್ದೇನಾಗಿತ್ತು ಅಂತ ತಿಳಿದುಕೊಳ್ಳುವ ಆಸಕ್ತಿ ಇದ್ದರೆ, ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

  ಸಂಜಯ್ ದತ್-ರಣ್ಬೀರ್ ಮೊದಲ ಬಾರಿ ಭೇಟಿ ಆಗಿದ್ದು...

  ಸಂಜಯ್ ದತ್-ರಣ್ಬೀರ್ ಮೊದಲ ಬಾರಿ ಭೇಟಿ ಆಗಿದ್ದು...

  ಸಂಜಯ್ ದತ್ ರನ್ನ ರಣ್ಬೀರ್ ಕಪೂರ್ ಮೊದಲ ಬಾರಿಗೆ ಭೇಟಿ ಆಗಿದ್ದು ಕಾಶ್ಮೀರದಲ್ಲಿ. ಆಗ 'ಸಾಹಿಬಾನ್' (1993) ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ತಂದೆ ರಿಶಿ ಕಪೂರ್ ಜೊತೆಗೆ ಶೂಟಿಂಗ್ ಲೊಕೇಶನ್ ಗೆ ರಣ್ಬೀರ್ ಕೂಡ ಹೋಗಿದ್ದರು. ಅಂದು ಸಂಜಯ್ ದತ್ ರನ್ನ ನೋಡಿ ಸಿಕ್ಕಾಪಟ್ಟೆ ಇಂಪ್ರೆಸ್ ಆಗಿದ್ದರಂತೆ ರಣ್ಬೀರ್ ಕಪೂರ್. ಹಾಗಂತ ಸ್ವತಃ ರಣ್ಬೀರ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

  ಹಾನಿಕಾರಕ ನಿಕೋಟಿನ್ ವ್ಯಸನಿ ಆಗಿರುವ ರಣ್ಬೀರ್ ಕಪೂರ್.! ಹಾನಿಕಾರಕ ನಿಕೋಟಿನ್ ವ್ಯಸನಿ ಆಗಿರುವ ರಣ್ಬೀರ್ ಕಪೂರ್.!

  ಸಂಜಯ್ ದತ್ ಅಚ್ಚುಮೆಚ್ಚು

  ಸಂಜಯ್ ದತ್ ಅಚ್ಚುಮೆಚ್ಚು

  ''ನನ್ನ ಸಹೋದರಿಗೆ ಸಲ್ಮಾನ್ ಖಾನ್ ಫೇವರಿಟ್ ಆಗಿದ್ದರೆ, ನನಗೆ ಸಂಜಯ್ ದತ್ ಅಚ್ಚುಮೆಚ್ಚು. ನಮ್ಮ ಕುಟುಂಬಕ್ಕೆ ಸಂಜಯ್ ದತ್ ಅತ್ಯಂತ ಆತ್ಮೀಯರು. ಅವರು (ಸಂಜಯ್ ದತ್) ನನ್ನನ್ನ ಸ್ವಂತ ಸಹೋದರನ ಹಾಗೆ ಕಾಣುತ್ತಾರೆ. ಎಷ್ಟೋ ಬಾರಿ ಅವರು ನನಗೆ ದುಬಾರಿ ಉಡುಗೊರೆ ಕೊಟ್ಟಿದ್ದಾರೆ'' ಎನ್ನುತ್ತಾರೆ ರಣ್ಬೀರ್ ಕಪೂರ್.

  ಬಟಾ ಬಯಲಾಗಲಿದೆ ಸಂಜಯ್ ದತ್ ಬದುಕಿನ ರೋಚಕ ಸತ್ಯಗಳು.!ಬಟಾ ಬಯಲಾಗಲಿದೆ ಸಂಜಯ್ ದತ್ ಬದುಕಿನ ರೋಚಕ ಸತ್ಯಗಳು.!

  ಬೈಕ್ ಗಿಫ್ಟ್ ಕೊಟ್ಟಾಗ...

  ಬೈಕ್ ಗಿಫ್ಟ್ ಕೊಟ್ಟಾಗ...

  ''ನನ್ನ ಹುಟ್ಟುಹಬ್ಬದಂದು ಸಂಜಯ್ ದತ್ ಹಾರ್ಲೆ ಡೇವಿಡ್ಸನ್ ಬೈಕ್ ನ ಉಡುಗೊರೆಯಾಗಿ ನೀಡಿದ್ದರು. ಅದನ್ನ ನಾನು ನನ್ನ ತಂದೆಗೆ ತೋರಿಸದೆ ಎಷ್ಟೋ ದಿನ ಬಚ್ಚಿಟ್ಟಿದ್ದೆ. ಆದ್ರೆ, ಒಂದು ದಿನ ಸಿಕ್ಕಿಬಿದ್ದೆ. ಬೈಕ್ ನ ಸಂಜಯ್ ದತ್ ಗಿಫ್ಟ್ ಆಗಿ ಕೊಟ್ಟಿದ್ದು ಅಂತ ಗೊತ್ತಾದ್ಮೇಲೆ ಅವರಿಗೆ ಫೋನ್ ಮಾಡಿ, ''ನನ್ನ ಮಗನನ್ನ ಹಾಳು ಮಾಡಬೇಡ. ನಿನ್ನ ಹಾಗೆ ಅವನನ್ನ ಮಾಡಬೇಡ'' ಅಂತ ಕೋಪದಿಂದ ನುಡಿದಿದ್ದರು. ನನ್ನ ಪಾಲಿಗೆ ಆ ಬೈಕ್ ಅತ್ಯಂತ ಅಮೂಲ್ಯವಾದದ್ದು. ಯಾಕಂದ್ರೆ, ಅದು ಸಂಜಯ್ ದತ್ ಕೊಟ್ಟಿದ್ದು'' - ರಣ್ಬೀರ್ ಕಪೂರ್.

  ತಂದೆ ಭೇಷ್ ಎಂದಿದ್ದಾರೆ

  ತಂದೆ ಭೇಷ್ ಎಂದಿದ್ದಾರೆ

  ''ಸಂಜು' ಚಿತ್ರದ ಟ್ರೈಲರ್ ನೋಡಿ ನನ್ನ ತಂದೆ ಕೊಟ್ಟಿರುವ ಪ್ರತಿಕ್ರಿಯೆ ನನಗೆ ಖುಷಿ ಕೊಟ್ಟಿದೆ. ಸಿನಿಮಾ ನೋಡಿದ್ಮೇಲೆ, ಅವರು ವಿಮರ್ಶೆ ಕೇಳಲು ಕಾತರನಾಗಿದ್ದೇನೆ'' - ರಣ್ಬೀರ್ ಕಪೂರ್.

  ಮುಂದಿನ ವಾರ 'ಸಂಜು' ಬಿಡುಗಡೆ

  ಮುಂದಿನ ವಾರ 'ಸಂಜು' ಬಿಡುಗಡೆ

  ಸಂಜಯ್ ದತ್ ಜೀವನಾಧಾರಿತ ಸಿನಿಮಾ 'ಸಂಜು' ಜೂನ್ 29 ರಂದು ಬಿಡುಗಡೆ ಆಗಲಿದೆ.

  English summary
  Bollywood Actor Rishi Kapoor had once fired Sanjay Dutt for gifting bike to Ranbir Kapoor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X