For Quick Alerts
  ALLOW NOTIFICATIONS  
  For Daily Alerts

  ಅನುರಾಗ್ ಬಸು ಕಂಡ್ರೆ ರಿಶಿ ಕಪೂರ್ ಉರಿದು ಬೀಳೋದು ಯಾಕೆ.?

  By Harshitha
  |

  'ಮರ್ಡರ್', 'ಗ್ಯಾಂಗ್ ಸ್ಟರ್', 'ಬರ್ಫಿ' ಅಂತಹ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರುವ ಖ್ಯಾತ ನಿರ್ದೇಶಕ ಅನುರಾಗ್ ಬಸು. ಬಾಲಿವುಡ್ ನಲ್ಲಿ ಮುಂಚೂಣಿಯಲ್ಲಿ ಇರುವ ನಿರ್ದೇಶಕರ ಪೈಕಿ ಅನುರಾಗ್ ಬಸು ಕೂಡ ಒಬ್ಬರು. ಇಂತಿಪ್ಪ ಅನುರಾಗ್ ಬಸು ಕಂಡ್ರೆ ರಿಶಿ ಕಪೂರ್ ಕೆಂಡಕಾರುತ್ತಾರೆ. ಅದಕ್ಕೆಲ್ಲಾ ಕಾರಣ 'ಜಗ್ಗಾ ಜಾಸೂಸ್' ಸಿನಿಮಾ.

  2012 ರಲ್ಲಿ ಬಿಡುಗಡೆ ಆದ 'ಬರ್ಫಿ' ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆದ್ಮೇಲೆ, ರಣ್ಬೀರ್ ಕಪೂರ್ ಹಾಗೂ ಅನುರಾಗ್ ಬಸು 'ಜಗ್ಗಾ ಜಾಸೂಸ್' ಸಿನಿಮಾ ಮಾಡಲು ಮುಂದಾದರು. 'ಜಗ್ಗಾ ಜಾಸೂಸ್' ಚಿತ್ರಕ್ಕೆ ಅನುರಾಗ್ ಬಸು ನಿರ್ದೇಶಕ, ರಣ್ಬೀರ್ ಕಪೂರ್ ನಿರ್ಮಾಪಕ.!

  ಅನುರಾಗ್ ಬಸು ಮೇಲೆ ಅಪಾರವಾದ ನಂಬಿಕೆ ಇಟ್ಟು 'ಜಗ್ಗಾ ಜಾಸೂಸ್' ಚಿತ್ರದ ಮೇಲೆ ಕೋಟ್ಯಾಂತರ ರೂಪಾಯಿ ಸುರಿದಿದ್ದರು ರಣ್ಬೀರ್ ಕಪೂರ್. ಆದ್ರೆ, 'ಜಗ್ಗಾ ಜಾಸೂಸ್' ಚಿತ್ರ ಮಕಾಡೆ ಮಲಗಿತು. ರಣ್ಬೀರ್ ಕಪೂರ್ ಜೇಬು ಖಾಲಿ ಆಯ್ತು. ಬ್ಯಾಂಕ್ ಬ್ಯಾಲೆನ್ಸ್ ಝೀರೋ ಆಯ್ತು.

  ಅನುರಾಗ್ ಬಸು ಮಾಡಿದ ಎಡವಟ್ಟು ಕಥೆಯಿಂದ ಪುತ್ರ ರಣ್ಬೀರ್ ಗೆ ನಷ್ಟ ಆಯ್ತಲ್ಲಾ ಎಂಬ ಕಾರಣಕ್ಕೆ ಈಗಲೂ ಅನುರಾಗ್ ಬಸು ಕಂಡ್ರೆ ರಿಶಿ ಕಪೂರ್ ಗೆ ಕೆಂಡದಷ್ಟು ಕೋಪ.! ಮುಂದೆ ಓದಿರಿ...

  ಸಂದರ್ಶನದಲ್ಲಿ ರಿಶಿ ಕಪೂರ್ ಗೆ ತೂರಿ ಬಂದ ಪ್ರಶ್ನೆ ಇದು...

  ಸಂದರ್ಶನದಲ್ಲಿ ರಿಶಿ ಕಪೂರ್ ಗೆ ತೂರಿ ಬಂದ ಪ್ರಶ್ನೆ ಇದು...

  '''ಜಗ್ಗಾ ಜಾಸೂಸ್' ಹಾಗೂ 'ಬಾಂಬೆ ವೆಲ್ವೆಟ್'ಕ್ಕಿಂತ ಹೆಚ್ಚಾಗಿ ನೀವು 'ಸಂಜು' ಚಿತ್ರವನ್ನ ಎಂಜಾಯ್ ಮಾಡಿದ್ರಾ.?'' ಎಂಬ ಪ್ರಶ್ನೆಯನ್ನ ಸಂದರ್ಶನವೊಂದರಲ್ಲಿ ಕೇಳಲಾಯ್ತು. ಅದಕ್ಕೆ ಸಿಡಿಮಿಡಿಗೊಂಡ ರಿಶಿ ಕಪೂರ್ ಉತ್ತರಿಸಿದ್ದು ಹೀಗೆ....

  ರಿಶಿ ಕಪೂರ್ ಕೊಟ್ಟ ಉತ್ತರ ಏನು.?

  ರಿಶಿ ಕಪೂರ್ ಕೊಟ್ಟ ಉತ್ತರ ಏನು.?

  ಅನುರಾಗ್ ಬಸುಗೆ ಅಷ್ಟೊಂದು ದುಡ್ಡು ನೀಡಲಾಗಿತ್ತು. ಆದ್ರೆ, ಅವರಿಗೆ ಏನು ಮಾಡಬೇಕು ಎಂಬುದೇ ಗೊತ್ತಿರಲಿಲ್ಲ. 'ಜಗ್ಗಾ ಜಾಸೂಸ್' ಒಂದು ಕೆಟ್ಟ ಸಿನಿಮಾ. ಚಿತ್ರದ ಕಥೆಯಂತೂ ಅಧ್ವಾನ'' ಎಂದು ಉತ್ತರಿಸಿದ್ದಾರೆ ರಿಶಿ ಕಪೂರ್.

  'ಜಗ್ಗಾ ಜಾಸೂಸ್' ನಿರ್ಮಾಣ ಮಾಡಿ ಜೇಬು ಖಾಲಿ ಮಾಡಿಕೊಂಡಿದ್ದ ರಣ್ಬೀರ್.!'ಜಗ್ಗಾ ಜಾಸೂಸ್' ನಿರ್ಮಾಣ ಮಾಡಿ ಜೇಬು ಖಾಲಿ ಮಾಡಿಕೊಂಡಿದ್ದ ರಣ್ಬೀರ್.!

  ಹೇಗೆ ಪ್ರಶ್ನೆ ಮಾಡೋದು.?

  ಹೇಗೆ ಪ್ರಶ್ನೆ ಮಾಡೋದು.?

  ''ರಣ್ಬೀರ್ ಕಪೂರ್ ನ ಕೇಳಿದ್ದಕ್ಕೆ, ''ಅಪ್ಪ.. ಅವರು ನನಗೆ 'ಬರ್ಫಿ' ಸಿನಿಮಾ ಮಾಡಿದ್ರು. ಅಂಥ ನಿರ್ದೇಶಕರನ್ನು ನಾನು ಹೇಗೆ ಪ್ರಶ್ನೆ ಮಾಡಲಿ.?'' ಅಂತ ಹೇಳಿದ್ದ. ನಿರ್ದೇಶಕರಿಗೆ ಕಥೆ ಮೇಲೆ ಹಿಡಿತ ಇರಬೇಕು'' ಎಂದರು ರಿಶಿ ಕಪೂರ್.

  ಸಂಜಯ್ ದತ್ ಮೇಲೆ ರಿಶಿ ಕಪೂರ್ ಉಗ್ರಾವತಾರ: ರಣ್ಬೀರ್ ಅದಕ್ಕೆ ಕಾರಣ.!ಸಂಜಯ್ ದತ್ ಮೇಲೆ ರಿಶಿ ಕಪೂರ್ ಉಗ್ರಾವತಾರ: ರಣ್ಬೀರ್ ಅದಕ್ಕೆ ಕಾರಣ.!

  'ಸಂಜು' ಸಿನಿಮಾ ಬಗ್ಗೆ ಹೆಮ್ಮೆ ಇದೆ.!

  'ಸಂಜು' ಸಿನಿಮಾ ಬಗ್ಗೆ ಹೆಮ್ಮೆ ಇದೆ.!

  ''ಸಂಜು' ಅಂತಹ ಸಿನಿಮಾವನ್ನ ಒಪ್ಪಿಕೊಂಡ ರಣ್ಬೀರ್ ಕಪೂರ್ ಆಯ್ಕೆ ಬಗ್ಗೆ ನನಗೆ ಹೆಮ್ಮೆ ಇದೆ. 'ಸಂಜು' ಚಿತ್ರದಲ್ಲಿ ರಣ್ಬೀರ್ ನಟನೆ ನೋಡಿ ನನಗೆ ನಿಜಕ್ಕೂ ಖುಷಿ ಆಯ್ತು'' ಎಂದು ಇದೇ ಸಂದರ್ಭದಲ್ಲಿ ರಿಶಿ ಕಪೂರ್ ಹೇಳಿದರು.

  'ಸಂಜು': ಪುತ್ರ ರಣ್ಬೀರ್ ನಟನೆ ಕಂಡು ಹೆಮ್ಮೆ ಪಟ್ಟ ತಂದೆ ರಿಶಿ ಕಪೂರ್'ಸಂಜು': ಪುತ್ರ ರಣ್ಬೀರ್ ನಟನೆ ಕಂಡು ಹೆಮ್ಮೆ ಪಟ್ಟ ತಂದೆ ರಿಶಿ ಕಪೂರ್

  ದಾಖಲೆ ಮಾಡುತ್ತಿರುವ 'ಸಂಜು'

  ದಾಖಲೆ ಮಾಡುತ್ತಿರುವ 'ಸಂಜು'

  ಅಂದ್ಹಾಗೆ, ರಣ್ಬೀರ್ ಕಪೂರ್ ಅಭಿನಯದ 'ಸಂಜು' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆಯುತ್ತಿದೆ. ಸಂಜಯ್ ದತ್ ಜೀವನ ಚರಿತ್ರೆ ಆಧಾರಿತ ಈ ಚಿತ್ರ ಸಿನಿ ಪ್ರಿಯರಿಗೆ ಇಷ್ಟವಾಗಿದೆ.

  English summary
  Bollywood Actor Rishi Kapoor lashes out at Director Anurag Basu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X