For Quick Alerts
  ALLOW NOTIFICATIONS  
  For Daily Alerts

  ಅಪ್ಪನಿಗೆ ವೈಜಯಂತಿಮಾಲಾ ಜತೆ ಇದ್ದ ಅಫೇರ್ ಬಗ್ಗೆ ರಿಷಿ ಕಪೂರ್ ಹೀಗೆ ಹೇಳಿದ್ದರು...

  |

  ಇತ್ತೀಚೆಗೆ ನಿಧನರಾದ ಬಾಲಿವುಡ್‌ನ ಹಿರಿಯ ನಟ ರಿಷಿ ಕಪೂರ್ ನೇರ ವ್ಯಕ್ತಿತ್ವದವರು. ಎಲ್ಲವನ್ನೂ ಖುಲ್ಲಂಖುಲ್ಲಾ ಮಾತಾಡುವವರು. ಅದರಲ್ಲಿ ಸಿನಿಮಾ ಮಾತ್ರವಲ್ಲ, ವೈಯಕ್ತಿಕ ಬದುಕಿನ ಕುರಿತೂ ನಿರ್ಭಿಡೆಯಿಂದ ಹೇಳುತ್ತಿದ್ದವರು.

  ಪತಿ ಜೊತೆ ಪ್ರಿಯಾಮಣಿ ರಂಜಾನ್ ಆಚರಣೆ ಹೇಗಿದೆ ಗೊತ್ತಾ !! |Priyamani Celebrate Ramzan

  ಹಾಗೆಯೇ ಹಿಂದಿ ಚಿತ್ರರಂಗದಲ್ಲಿ ವಿಶಿಷ್ಟ ಸಿನಿಮಾಗಳನ್ನು ಮಾಡಿದ ಅವರ ತಂದೆ ರಾಜ್ ಕಪೂರ್ ಅವರ ಬಗ್ಗೆ 'ಖುಲ್ಲಂ ಖುಲ್ಲಾ: ರಿಷಿ ಕಪೂರ್ ಅನ್ ಸೆನ್ಸಾರ್ಡ್' ಜೀವನ ಚರಿತ್ರೆಯಲ್ಲಿ ಮುಕ್ತವಾಗಿ ಬರೆದಿದ್ದರು. ನರ್ಗಿಸ್ ದತ್ ಮತ್ತು ವೈಜಯಂತಿಮಾಲಾ ಅವರೊಂದಿಗೆ ತಂದೆಗೆ ಇದ್ದ ವಿವಾಹೇತರ ಸಂಬಂಧದ ಯಾವ ಮುಲಾಜೂ ಇಲ್ಲದೇ ಚಿತ್ರಿಸಿದ್ದರು.

  ವೈರಲ್ ಆಗ್ತಿದೆ ರಿಶಿ ಕಪೂರ್ ಅಂತಿಮ ಕ್ಷಣದ ವಿಡಿಯೋ: ಸತ್ಯವೇನು?ವೈರಲ್ ಆಗ್ತಿದೆ ರಿಶಿ ಕಪೂರ್ ಅಂತಿಮ ಕ್ಷಣದ ವಿಡಿಯೋ: ಸತ್ಯವೇನು?

  ನರ್ಗಿಸ್ ದತ್ ಕುರಿತು ಅವರು ಹೆಚ್ಚು ಬರೆಯದೇ ಇದ್ದರೂ, ತಂದೆಯೊಂದಿಗೆ ಅಫೇರ್ ಇತ್ತು ಎಂಬುದನ್ನು ನಿರಾಕರಿಸಿದ್ದ ವೈಜಯಂತಿಮಾಲಾ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮುಂದೆ ಓದಿ...

  ನರ್ಗಿಸ್ ಜತೆ ಅಫೇರ್‌ನಿಂದ ಸಮಸ್ಯೆಯಾಗಲಿಲ್ಲ

  ನರ್ಗಿಸ್ ಜತೆ ಅಫೇರ್‌ನಿಂದ ಸಮಸ್ಯೆಯಾಗಲಿಲ್ಲ

  'ನಾನು ಚಿಕ್ಕವನಿದ್ದಾಗ ನನ್ನ ತಂದೆ ನರ್ಗಿಸ್ ಅವರೊಂದಿಗೆ ಸಂಬಂಧ ಇಟ್ಟುಕೊಂಡಿದ್ದರು. ಆದರೆ ಅದರಿಂದ ಯಾವ ತೊಂದರೆಯೂ ಆಗಿರಲಿಲ್ಲ. ಮನೆಯಲ್ಲಿ ಯಾವುದೇ ಸಮಸ್ಯೆ ಆಗಿದ್ದು ನನಗೆ ನೆನಪಿಲ್ಲ. ಆದರೆ ಮರೈನ್ ಡ್ರೈವ್‌ನಲ್ಲಿ ನಟರಾಜ ಹೋಟೆಲ್‌ಗೆ ವಾಸ ಬದಲಿಸುವಾಗ ನನ್ನ ಅಪ್ಪ ವೈಜಯಂತಿಮಾಲಾ ಜತೆ ಸಂಬಂಧ ಹೊಂದಿದ್ದರು. ಈ ಸಂದರ್ಭದಲ್ಲಿ ಅಮ್ಮ ಅವರಿಂದ ಬೇರ್ಪಡಲು ನಿರ್ಧರಿಸಿದ್ದರು' ಎಂದು ರಿಷಿ ಬರೆದಿದ್ದರು.

  ಅಮ್ಮ ಮತ್ತೆ ಬರಲೇ ಇಲ್ಲ

  ಅಮ್ಮ ಮತ್ತೆ ಬರಲೇ ಇಲ್ಲ

  'ಹೋಟೆಲ್‌ನಿಂದ ಎರಡು ತಿಂಗಳ ಬಳಿಕ ಚಿತ್ರಕೂಟದಲ್ಲಿ ಅಪಾರ್ಟ್‌ಮೆಂಟ್ ಒಂದಕ್ಕೆ ನಾವು ಶಿಫ್ಟ್ ಆದೆವು. ಅಮ್ಮ ಮತ್ತು ನಮಗಾಗಿ ಅಪ್ಪ ಅಪಾರ್ಟ್‌ಮೆಂಟ್ ಖರೀದಿಸಿದ್ದರು. ಅಮ್ಮನ ಮನವೊಲಿಸಿ ಮರಳಿ ಕರೆತರಲು ಅಪ್ಪ ಸಾಧ್ಯವಾಗಿದ್ದನ್ನೆಲ್ಲಾ ಮಾಡಿದರು. ಆದರೆ ಅವರ ಜೀವನದ ಅಧ್ಯಾಯ ಮುಗಿಯುವವರೆಗೂ ಅಮ್ಮ ಅದಕ್ಕೆ ಒಪ್ಪಿಕೊಳ್ಳಲಿಲ್ಲ' ಎಂದು ತಿಳಿಸಿದ್ದರು.

  ಬಾಲಿವುಡ್ ಸುರಸುಂದರ ರಿಶಿ ಕಪೂರ್ ಸಿನಿಮಾ ಯಾನದ ಹಿನ್ನೋಟಬಾಲಿವುಡ್ ಸುರಸುಂದರ ರಿಶಿ ಕಪೂರ್ ಸಿನಿಮಾ ಯಾನದ ಹಿನ್ನೋಟ

  ವೈಜಯಂತಿಮಾಲಾ ಮೇಲೆ ಕೋಪ

  ವೈಜಯಂತಿಮಾಲಾ ಮೇಲೆ ಕೋಪ

  'ಕೆಲವು ವರ್ಷಗಳ ಹಿಂದೆ ಪ್ರಕಟವಾದ ಸಂದರ್ಶನವೊಂದರಲ್ಲಿ, ನನ್ನ ತಂದೆಯೊಂದಿಗೆ ಅಫೇರ್ ಇದ್ದಿದ್ದನ್ನು ವೈಜಯಂತಿಮಾಲಾ ನಿರಾಕರಿಸಿದ್ದರು. ಪಬ್ಲಿಸಿಟಿಯ ಹಸಿವಿನ ಕಾರಣಕ್ಕಾಗಿ ನನ್ನ ತಂದೆ ರೊಮ್ಯಾನ್ಸ್‌ಅನ್ನು ಸೃಷ್ಟಿಸಿದ್ದಾಗಿ ಹೇಳಿದ್ದರು. ನನಗೆ ಬಹಳ ಕೋಪ ಬಂದಿತ್ತು. ಆಕೆ ಹೇಗೆ ಆ ರೀತಿ ಸುಳ್ಳು ಹೇಳಲು ಸಾಧ್ಯ? ಅಫೇರ್ ಎಂದಿಗೂ ಇರಲೇ ಇಲ್ಲ ಎಂದು ಹೇಗೆ ನಟಿಸುತ್ತಾರೆ? ವಾಸ್ತವವನ್ನು ಸಮರ್ಥಿಸಲು ಅವರು ಬದುಕಿಲ್ಲ ಎಂಬ ಕಾರಣಕ್ಕೆ ಸತ್ಯವನ್ನು ನಾಶಪಡಿಸಲು ಆಕೆಗೆ ಹಕ್ಕಿಲ್ಲ' ಎಂದು ಸಿಟ್ಟಿನಿಂದ ಹೇಳಿದ್ದರು.

  ಕ್ರಮೇಣ ಒಪ್ಪಿಕೊಳ್ಳತೊಡಗಿದ್ದೆ...

  ಕ್ರಮೇಣ ಒಪ್ಪಿಕೊಳ್ಳತೊಡಗಿದ್ದೆ...

  'ಆಕೆಯ ಪುಸ್ತಕ ಮಾರುಕಟ್ಟೆಗೆ ಬಂದಾಗ ಮಾಧ್ಯಮದ ನನ್ನ ಅನೇಕ ಸ್ನೇಹಿತರು ನನ್ನ ಪ್ರತಿಕ್ರಿಯೆಗಾಗಿ ಸಂಪರ್ಕಿಸಿದ್ದರು. ನನ್ನ ಮನಸಿನಲ್ಲಿ ಏನಿತ್ತೋ ಅದನ್ನೇ ನೇರವಾಗಿ ಹೇಳಿದ್ದೆ. ಸಮಯ ಕಳೆದಂತೆ ನನ್ನ ಕೋಪ ಕಡಿಮೆಯಾಯಿತು. ತಮ್ಮದೇ ಆದ ಕಾರಣಗಳಿಂದಾಗಿ ಜನರು ಅಹಿತಕರ ಸತ್ಯಗಳನ್ನು ಮುಚ್ಚಿಹಾಕಲು ಬಯಸುತ್ತಾರೆ ಎನ್ನುವುದನ್ನು ನಾನು ಒಪ್ಪಿಕೊಳ್ಳತೊಡಗಿದ್ದೆ.

  ಅಂಬರೀಶ್ ಕೈಲಿ ಏಟು ತಿಂದಿದ್ದರು ನಟ ರಿಶಿ ಕಪೂರ್!ಅಂಬರೀಶ್ ಕೈಲಿ ಏಟು ತಿಂದಿದ್ದರು ನಟ ರಿಶಿ ಕಪೂರ್!

  ಅಪ್ಪ ಬದುಕಿದ್ದರೆ ಹೀಗೆ ಹೇಳುತ್ತಿರಲಿಲ್ಲ....

  ಅಪ್ಪ ಬದುಕಿದ್ದರೆ ಹೀಗೆ ಹೇಳುತ್ತಿರಲಿಲ್ಲ....

  'ಆದರೆ ಒಂದಂತೂ ಖಚಿತವಾಗಿ ಹೇಳಬಲ್ಲೆ, ಒಂದು ವೇಳೆ ಅಪ್ಪ ಆಗ ಬದುಕಿದ್ದರೆ ಆಕೆ ಈ ಅಫೇರ್‌ಅನ್ನು ಹೀಗೆ ನಿರಾಕರಿಸುತ್ತಿರಲಿಲ್ಲ ಅಥವಾ ಅವರು ಪ್ರಚಾರದ ಹಸಿವಿನಿಂದ ಮಾಡಿದ್ದರು ಎನ್ನುತ್ತಿರಲಿಲ್ಲ' ಎಂದು ರಿಷಿ ಕಪೂರ್, ವೈಜಯಂತಿ ಮಾಲಾ ಅವರ ವಿರುದ್ಧ ಕಿಡಿಕಾರಿದ್ದರು.

  English summary
  Rishi Kapoor in his autobiography slammed Vyjayanthimala for denying her affair with his father Raj Kapoor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X